ಭವ್ಯ ಭಾರತದ ಮುಂದಿರುವ ಸವಾಲುಗಳು ಮತ್ತು ಪರಿಹಾರ: ರವೀಂದ್ರ

ಬೀದರ:ನ.೨೪:ಕೇಶವ ಕಾರ್ಯಸಂವರ್ಧನ ಸಮಿತಿ ಹಾಗೂ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಯುಕ್ತಾಶ್ರಯದಲ್ಲಿ “ಧ್ಯೇಯ ದರ್ಶನ” ಉಪನ್ಯಾಸ ಮಾಲೆಯಲ್ಲಿ ಭವ್ಯ ಭಾರತದ ಮುಂದಿರುವ ಸವಾಲುಗಳು ಹಾಗೂ ಪರಿಹಾರ ವಿಷಯ ಕುರಿತು ಮಾತನಾಡುತ್ತ ಶ್ರೀ ರವೀಂದ್ರಜಿ ಅವರು ಭಾರತದ ಯಶೋಗಾಥೆಯಲ್ಲಿ ಸಾಧನೆಯು ಇದೆ, ವೇದನೆಯು ಇದೆ. ವಿಜನ್ ೨೦೨೦ ಎಂಬ ಪುಸ್ತಕವನ್ನು ಡಾ. ಎ.ಪಿ.ಜಿ. ಅಬ್ದೂಲ್‌ಕಲಾಮ್ ಅವರು ಬರೆದಿರುತ್ತಾರೆ ಏಕೆಂದರೆ ನಮ್ಮ ಭಾರತದ ದೂರದೃಷ್ಟಿ ಮತ್ತು ಯೋಜನೆಯನ್ನು ಮುಂಬರುವ ೧೦ವರ್ಷದ ವರೆಗೆ ಇಟ್ಟಿಕೊಳ್ಳಬೇಕು ಅಂದಾಗ ಮಾತ್ರ ೨೦೪೭ರ ವಿಕಸಿತ ಭಾರತ ಎಂಬ ಪರಿಕಲ್ಪನೆಯನ್ನು ಹೊಂದಲು ಸಾಧ್ಯ. ಭಾರತದ ಅರ್ಥವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಯಬೇಕಾದರೆ ೦೬ ಅಂಶಗಳು ಪ್ರಮುಖವಾದದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ಸ್ವಾಸ್ಥö??, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು. ಈ ಆರು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡಾಗ ಭವ್ಯಭಾರತವನ್ನು ಕಟ್ಟಲು ಸಾಧ್ಯ ಎಂದು ತಿಳಿಸಿದರು. ೧೯೯೧ರ ಹೊಸ ಆರ್ಥಿಕ ನೀತಿಯು ಸ್ವಲ್ಪ ಮಟ್ಟಿಗೆ ಆರ್ಥಿಕತೆಯಲ್ಲಿ ಬೆಳವಣಿಗೆ ಕಂಡಿತು ನಂತರದಲ್ಲಿ ನಮ್ಮ ಭಾರತೀಯ ಸಂಸ್ಕೃತಿ ಆಹಾರ ಪದ್ಧತಿ ಹಾಗೂ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಉನ್ನತ ಮಟ್ಟದ ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಮಾತೃಭಾಷೆಯಲ್ಲಿ ಕಲಿಕೆ ಕಡ್ಡಾಯವಾಗಿರಬೇಕು. ವ್ಯಾಪರಕ್ಕಾಗಿ ಸ್ಟಾರ್ಟಅಪ್ ಮತ್ತು ನಮ್ಮ ರೈತರಿಗಾಗಿ ಕೃಷಿ ಮಾರುಕಟ್ಟೆ ಮತ್ತು ಬೆಲೆಯಲ್ಲಿ ನಿರ್ವಹಣೆಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಭಾರತವೂ ವಿಶ್ವಶಕ್ತಿಯಾಗಬೇಕಾದರೆ ಸಾಮರಸ್ಯ, ಸಮೃದ್ಧಿ ಮತ್ತು ಸುಭದ್ರತೆಯಿಂದ ವೃದ್ಧಿಯಾದಾಗ ಮಾತ್ರ ವಿಶ್ವಶಕ್ತಿಯಾಗುತ್ತದೆ. ಭಾರತವೂ ವಿಶ್ವಗುರು ಮತ್ತು ಜಗನ್ಮಾತೆ ಒಂದೇ ಸೂತ್ರದ ಅಡಿಯಲ್ಲಿ ಸಾಗಬೇಕಾದರೆ ಜಗತ್ತಿನ ಎಲ್ಲ ಭಾಷೆಗಳನ್ನು ಕಲಿಯೋಣ ಮತ್ತು ನಮ್ಮ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಇಟ್ಟಿಕೊ??????ಣ ಹಾಗೂ ಬೆಳೆಸೋಣ. ಯೋಗ ಮತ್ತು ವ್ಯಾಯಾಮ, ಆಯುರ್ವೇದ ಹಾಗೂ ಸುಶೃತ ಸಂಹಿತೆಯಲ್ಲಿ ವಿವಿಧ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಔಷಧಿಗಳನ್ನು ತಿಳಿಸಲಾಗಿದೆ. ಜಗನ್ಮಾತೆ ಎಂದರೆ ಸಂಸ್ಕಾರ ಮತ್ತು ಸಂಸ್ಕೃತಿ ಜೊತೆಗೆ ಬುದ್ಧ, ಬಸವ, ಕನಕದಾಸರಂತೆ ಶೀಲವಂತ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಮಮಿಸಿದ ಕೆ.ಆರ್.ಇ. ಟ್ರಸ್ಟ್ನ ಅಧ್ಯಕ್ಷರಾದ ಡಾ|| ಬಸವರಾಜ ಪಾಟೀಲ್ ಅಷ್ಟೂರ್ ಅವರು ಕೃಷಿ, ಕೈಗಾರಿಕೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಾದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ವ್ಯಾಪಾರ, ವಾಣಿಜ್ಯ, ತಂತ್ರಜ್ಞಾನ, ಮೂಲಸೌಕರ್ಯಗಳಲ್ಲಿ ಬದಲಾವಣೆ ತರಬೇಕಾದುದು ೧೪೮ ಕೋಟಿ ಜನರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಕೇಶವ ಕಾರ್ಯಸಂವರ್ಧನ ಸಮಿತಿಯ ಅಧ್ಯಕ್ಷರಾದ ಶ್ರೀ ಮಾರುತಿರಾವ ಪಂಚಭಾಯಿ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಅಧ್ಯಕ್ಷರಾದ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಅವರು ಉಪಸ್ಥಿತರಿದ್ದರು.
ಸ್ವಾಗತ ಪರಿಚಯ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ ಮಾಡಿದರೆ, ವರದರಾಜ ಬಾವಗೆ ವೈಯಕ್ತಿಕ ಗೀತೆ ಹಾಡಿದರು. ಶ್ರೀ ಶಿವಪುತ್ರ ನೇಳಗೆ ವಂದಿಸಿದರೆ ಶ್ರೀ ಬಾಲಾಜಿ ರಾಠೋಡ ಕಾರ್ಯಕ್ರಮ ನಿರೂಪಿಸಿದರು.