ಚಲವಾದಿ ನಾರಾಯಣ ಸ್ವಾಮಿ ಕೂಡಲೇ ಕ್ಷಮೆಯಾಚಿಸಲಿ: ಲಚ್ಚಪ್ಪ ಎಸ್.ಜಮಾದಾರ ಆಗ್ರಹ

ಕಲಬುರಗಿ :ಮೇ.24:ನಗರಕ್ಕೆ ಆಗಮಿಸಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಆ-ವೈಜ್ಞಾನಿಕವಾಗಿ ಚಲವಾದಿ ನಾರಾಯಣಸ್ವಾಮಿ ಯವರ ಹೇಳಿಕೆ ಖಂಡಿನೀಯವಾಗಿದೆ. ಒಬ್ಬ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ನಾಲಿಗೆ ಮೇಲೆ ಹಿಡಿತವಿಲ್ಲದೇ ಅರೆ ಹುಚ್ಚನಂತೆ ಮುರ್ಖತನದ ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ರಾಜ್ಯದ ಪ್ರಭಾವಿ ಸಚಿವರು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ನಾಯಿಗೆ ಹೋಲಿಸಿ ಮಾತನಾಡಿದ ಚಲವಾದಿ ನಾರಾಯಣ ಸ್ವಾಮಿಗೆ ಚಿತ್ತಾಪೂರದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಮತ್ತು ಖರ್ಗೆಯವರ ಅಭಿಮಾನಿಗಳು, ಘರಾವ ಹಾಕಿ ಮುರ್ಖತನದಿಂದ ನೀಡಿರುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸುವಂತೆ ಒತ್ತಾಯಿಸಿರುವುದು ಯಾವ ತಪ್ಪು ತಮ್ಮ ನಾಯಕನಿಗೆ ಅವಮಾನ ಗೊಳಿಸಿದಾಗ ಪ್ರತಿರೋದ ಒಡ್ಡುವದು ಸಹಜ. ಮತ್ತು ಚಲವಾದಿ ನಾರಾಯಣ ಸ್ವಾಮಿಯವರ ಹೇಳಿಕೆಯನ್ನು ಕರ್ನಾಟಕ ಕೋಲಿ, ಕಬ್ಬಲಿಗ, ಎಸ್.ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ ಉಗ್ರವಾಗಿ ಖಂಡಿಸಿದ್ದಾರೆ.
ಆದರೆ ಇಂತಹ ಹೇಳಿಕೆ ನೀಡಿರುವ ತಮ್ಮ ಪಕ್ಷದ ಚಲವಾದಿ ನಾರಾಯಣ ಸ್ವಾಮಿಗೆ ಬುದ್ಧಿಮಾತು ಹೇಳಬೇಕಾಗಿರುವ ಕರ್ನಾಟಕ ರಾಜ್ಯದ ಬಿಜೆಪಿಯ ಘಟಾನು ಘಟಿ ನಾಯಕರುಗಳು ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಲಬುರಗಿ ಚಲೋ ಹೋರಾಟ ಹಮ್ಮಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಂದರೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರು ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ, ಎನ್, ರವಿಕುಮಾರ, ಪ್ರೀತಮ್ ಗೌಡ. ಸೇರಿಸದಂತೆ ಇನ್ನು ಹಲವಾರು ನಾಯಕರು ಕಲಬುರಗಿ ಚಲೋ ನಿಮಿತ್ಯವಾಗಿ ಆಗಮಿಸುತ್ತಿರುವ ನಿವೆಲ್ಲರೂ, ಚಲವಾದಿ ನಾರಾಯಣ ಸ್ವಾಮಿಯವರ ಹೇಳಿಕೆ ಸಮರ್ಥಿಸಿಕೊಳ್ಳುತ್ತಿರುವದು ನೋಡಿದರೆ ಬಿಜೆಪಿ ಪಕ್ಷದ ನೈತಿಕತೆ ಇಷ್ಟೆ ಅನ್ನುವುದು ಸಾಬೀತು ಮಾಡಿದಂತಿದೆ. ಯಾವ ಪುರಷಾರ್ತಕಗೊಸ್ಕರ ಈ ಕಲಬುರಗಿ ಚಲೋ ಮಾಡುತ್ತಿದ್ದೀರಿ. ನಿಮಗೆ ಯಾವುದೇ ಕೆಲಸ ಇಲ್ಲದಂತಿದೆ. ಒಬ್ಬ ದಲಿತ ನಾಯಕ ರಾಜ್ಯ ಹಾಗೂ ದೇಶ ವ್ಯಾಪ್ತಿಯಲ್ಲಿ ಹೆಸರು ಮಾಡುವುದರ ಜೊತೆಗೆ ದಲಿತ, ಹಿಂದುಳಿದ. ಅಲ್ಪಸಂಖ್ಯಾತರ, ಬಡವರ ಪರವಾಗಿ ನಿಲ್ಲುತ್ತಿರುವುದು ಕಂಡು ಬಿಜೆಪಿ ಮತ್ತು ಆರ್‍ಎಸ್‍ಎಸ್ ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಸಾರ್ವಜನಿಕರ ಹಿತಾಸಕ್ತಿಗಾಗಿ ನಾಡಿನ ರೈತರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತಿರುವ ಅನ್ಯಾಯ ಗಮನಿಸದೇ ಕೇವಲ ಕೋಮು, ಗಲಭೆ, ರಾಜ್ಯದಲ್ಲಿ ಅಶಾಂತಿ ಹುಟ್ಟಿಸುವಂತಹ ಸನ್ನಿವೇಶಗಳು ಸೃಷ್ಟಿಸುತ್ತಿರುವ ಬಿಜೆಪಿ ಗರೇ ನಿಮ್ಮ ಮಸಲತ್ತು ರಾಜ್ಯದ ಜನ ಗಮನಿಸುತ್ತಿದ್ದಾರೆ.
ನಾಡಿನ ಒಳಿತಿಗಾಗಿ ಹೋರಾಟ ಮಾಡಬೇಕಾಗಿರುವ ನೀವು ಇಂತಹ ನೀಚ ಹೇಳಿಕೆಗಳನ್ನು ನೀಡಿ ಅದೇ ವಿಷಯ ದೊಡ್ಡರಾಗಿ ಬಿಂಬಿಸಿ ರಾಜ್ಯದಲ್ಲಿ ಆತಾಂತಿ ಉಂಟು ಮಾಡುವದೇ ನಿಮ್ಮ ಕಾಯಕವಾಗಿದೆ. ಗಂಡು ಮೆಟ್ಟಿದ ನಾಡು, ಶರಣರ, ಸಂತರ ಬೀಡು ಕಲಬುರಗಿಯ ಹೆಮ್ಮೆ ಡಾ. ಮಲ್ಲಿಕಾರ್ಜುನ ಖರ್ಗೆಜಿಯವರ ಕರ್ಮಭೂಮಿ ಕಲಬುರಗಿಗೆ ಆಗಮಿಸುತ್ತಿರುವ ಬಿಜೆಪಿಯ ಗುಂಡಾಗಿರಿಗೆ ಹೆಸರಾಗಿರುವ ಕೋಮು, ಗಲಬೆ, ಆಶಾಂತಿವುಂಟು ಮಾಡುವುದೇ ಕಾಯಕವಾಗಿರಿಸಿಕೊಂಡ ಬಿಜೆಪಿ ಗರಿಗೆ ಸ್ವಾಗತ. ಬನ್ನಿ ಯಾವ ಪುರಷಾರ್ಥಕ್ಕೆ ಈ ಕಲಬುರಗಿ ಚಲೋ, ಹೋರಾಟ ಹಮ್ಮಿಕೊಂಡಿರುವಿರಿ ಎಂದು ಜನರ ಮುಂದೆ ಬಾಯಿಬಿಚ್ಚಿ ಮಾತಾನಾಡಬೇಕು ಎಂದು ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಅಗ್ರಪಡಿಸುತ್ತದೆ. ಜಮಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಾಮಲಿಂಗ ನಾಟೀಕಾರ, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಭೀಮಶ್ಯಾ ಖನ್ನಾ, ಮಡಿವಾಳಪ್ಪ ಕಟ್ಟಮನಿ, ಅಭಿಷೇಕ ಉಪಾಧ್ಯಾಯ, ಅರುಣಕುಮಾರ ಇನಾಮದಾರ, ಯಲ್ಲಾಲಿಂಗ ದೊಡಮನಿ, ಗೌತಮ ಉಪಾಧ್ಯಾಯ, ದುಂಡಪ್ಪಾ ಜಮಾದಾರ ಇದ್ದರು.