
ಕಲಬುರಗಿ,ಮೇ 3: ನಗರದ ಕೆಕೆಸಿಸಿಐ,ಚೈತನ್ಯಮಯಿ ಟ್ರಸ್ಟ್, ಕನ್ನಡ ಮತು ಸಂಸ್ಕøತಿ ಇಲಾಖೆ ಮತ್ತು ಹಂಪಿ ಕನ್ನಡ ವಿಶ್ವÀ ವಿದ್ಯಾಲಯ ಸಹಯೋಗದೊಂದಿಗೆ ಕೆಕೆಸಿಸಿಐನ ಎಸ್.ಎಸ್. ಪಾಟೀಲ ಸಭಾಂಗಣದಲ್ಲಿ ಚೈತನ್ಯಮಯಿ ಆರ್ಟಗ್ಯಾಲರಿಯ 23ನೇ ವಾರ್ಷಿಕ ಕಲಾ ಮಹೋತ್ಸವ ಸಮಾರಂಭ ಜರುಗಿತು.
ಕಾರ್ಯಕ್ರಮದಉದ್ಘಾಟನೆಯನ್ನು ಕಲಬುರಗಿದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ಮತ್ತುವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ.ಎಸ್. ಎಸ್. ಗುಬ್ಬಿ, ನಾಡೋಜ, ಜೆ.ಎಸ್. ಖಂಡೆರಾವ್, ಉಪಾಧ್ಯಕ್ಷ ಅಪ್ಪಕಣಕಿ ಮತ್ತು ಕೆ.ಕೆ.ಸಿ.ಸಿ.ಐ.ನ ಅಧ್ಯಕ್ಷ ಶರಣಬಸಪ್ಪ ಪಪ್ಪ್ಪಾ ನೆರವೆರಿಸಿದರು.ದತ್ತಾತ್ರೇಯ ಪಾಟೀಲರವರುತಮ್ಮ ಭಾಷಣದಲ್ಲಿ ಮಾನವನಜನ್ಮವು ಸಿಗುವುದೇ ತುಂಬ ಕಷ್ಟ.ಅದರಲ್ಲಿ ಎ.ಎಸ್.ಪಾಟೀಲ ಅವರುತಮ್ಮಜೀವನವನ್ನುಅರ್ಥಪೂರ್ಣವಾಗಿ ನಡೆದುಬಂದದ್ದನ್ನು ಮತ್ತು ಕಲಾ ಪ್ರೋತ್ಸಾಹಕ್ಕಾಗಿಯೇ ಶ್ರಮಿಸಿರುವುದನ್ನು ವಿಶೇಷವಾಗಿ ಶ್ಲಾಘಿಸಿದರು. ಟ್ರಸ್ಟಿನ ಅಧ್ಯಕ್ಷರಾದ ಮತ್ತು ಕೆಕೆಸಿಸಿಐನ ಆಡಳಿತ ಮಂಡಳಿಯ ಸದಸ್ಯ ದಿನೇಶ ಎ ಪಾಟೀಲ ರವರುತಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು.
ಹಿರಿಯಕಲಾವಿದ ಎ.ಎಸ್. ಪಾಟೀಲ ಅವರ ಚೈತನ್ಯ ಕಲಾ ದಾಸೋಹ ಎಂಬ ಸಾಕ್ಷ್ಯಚಿತ್ರವನ್ನು ನಟ, ನಿರ್ದೇಶಕ,ಚಿತ್ರಕಲಾವಿದ ನಾಗರಾಜಆರ್.ಕುಂಬಾರರವರ ನಿರ್ದೇಶನದಲ್ಲಿಕೇವಲ 25 ದಿನಗಳಲ್ಲಿ ತಯಾರಿಸಿದ ಸಾಕ್ಷ್ಯಚಿತ್ರವನ್ನುಡಾ. ಎಸ್. ಎಸ್. ಗುಬ್ಬಿ ಬಿಡುಗಡೆ ಮಾಡಿದರು.ಚೈತನ್ಯ ಶ್ರೀ ಕಲಾ ಪ್ರಶಸ್ತಿಯಿಂದ ಸನ್ಮಾನಿತರಾದ ಹಂಪಿಯಕನ್ನಡ ವಿಶ್ವವಿದ್ಯಾಲಯದ ಮುಖ್ಯಸ್ಥ ದೃಶ್ಯ ಕಲೆ ವಿಭಾಗದಡಾ. ಮೋಹನರಾವ್. ಬಿ. ಪಾಂಚಾಳ ಅವರು ಸನ್ಮಾನಿತರಾದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದಕೆ.ಕೆ.ಸಿ.ಸಿ.ಐ.ನ ಅಧ್ಯಕ್ಷ ಶರಣಬಸಪ್ಪಎಮ್. ಪಪ್ಪಾ ಅವರು ಮಾತನಾಡಿ,ಚಿತ್ರಸಂತೆಯು ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿತ್ತು.ಆದರೆಇತ್ತೀಚಿಗೆ ಎ.ಎಸ್. ಪಾಟೀಲರವರ ಮೂಲಕ ಕಲಬುರಗಿಯಲ್ಲಿಯು ಸಹ ಚಿತ್ರ ಸಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮುಖ್ಯಉದ್ದೇಶದಿಂದ ಮತ್ತು ಈ ಭಾಗದಜನರಲ್ಲಿಕಲೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವಕಾರ್ಯವನ್ನುಅವರು ಮಾಡಿದ್ದಾರೆ ಎಂದರು
ಕಾರ್ಯಕ್ರಮಕ್ಕೆ ಕೆ.ಕೆ.ಸಿ.ಸಿ.ಐದ ಮಾಜಿಅಧ್ಯಕ್ಷ ಉಮಕಾಂತ ನಿಗ್ಗುಡಗಿ,ಉಪಾಧ್ಯಕ್ಷರಾದ ಕೇದಾರಎಸ್. ರಘೋಜಿ, ಜಂಟಿ ಕಾರ್ಯದರ್ಶಿ ಗಿರೀಶಅಣಕಲ್, ಗೌರವಖಜಾಂಚಿ ಸಿ.ಎ. ಉತ್ತಮ ಬಜಾಜ್ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರದುಕಾನದಾರ, ರವಿಶಂಕರ ಎ. ಜಮದರಖಾನಿ, ಲಿಂಗರಾಜ ಇ. ಭಾವಿಕಟ್ಟಿ, ಜಗದೀಶ ಬಿ ಪಾಟೀಲ, ರಾಹುಲ ಟೆಂಗಳಿ, ನಮೃತಾ ಫಟಾಟೆ ಹಾಗೂ ಆಡಳಿತ ಮಂಡಳಿಯಮಾಜಿ ಸದಸ್ಯರಾದ ಮಹಾದೇವಖೇಣಿ ಮತ್ತು ವಿಶೇಷ ಆಹ್ವಾನಿತ ಮಹೇಶ ಮಠ್‍ರವರು ಮತ್ತುಚೈತನ್ಯಮಯಿಯ ಪದಾಧಿಕಾರಿಗಳಾದ ರಾಜಶೇಖರ್‍ಕರಪೂರ, ಡಾ. ಆನಂದಕಣಕಿ, ಪಿ.ಎನ್‍ರುದ್ರೇಶ್, ಆಕಾಶ್‍ಕರಪೂರ ಹಾಗೂ ವಿಜಯ ಬಿರಾದಾರ ಉಪಸ್ಥಿತರಿದ್ದರು.ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ರವಿಶಂಕರ ಜಮದರಖಾನಿರವರು ವಂದನಾರ್ಪಣೆಯನ್ನು ಸಲ್ಲಿಸಿದರು. ನಿರೂಪಣೆಯನ್ನುಡಾ.ಸುಜಾತಾ ಡಿ. ಪಾಟೀಲ ನೆರವೆರಿಸಿದರು.






















