ಚೈತನ್ಯಮಯಿ ಆರ್ಟ ಗ್ಯಾಲರಿಯ 22ನೇ ವಾರ್ಷಿಕ ಕಲಾ ಮಹೋತ್ಸವ

ಕಲಬುರಗಿ :ಜೂ.9:ಚೈತನ್ಯಮಯಿ ಟ್ರಸ್ಟಿನ ಚೈತನ್ಯಮಯಿ ಆರ್ಟ ಗ್ಯಾಲರಿಯ 22ನೇ ವಾರ್ಷಿಕ ಕಲಾ ಮಹೋತ್ಸವ ರವಿವಾರ ರಂದು ಸಂಜೆ ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪ ಜಯನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಸವ ಸಮಿತಿ ಅರಿವಿನ ಮನೆ 584 ನೆಯ ಕಾರ್ಯಕ್ರಮದ ಅಡಿಯಲ್ಲಿ ಹಿರಿಯ ಚಿತ್ರಕಲಾವಿದ ಡಾ. ಎ.ಎಸ್.ಪಾಟೀಲ ಅನುಭಾವ ನೀಡಲಿದ್ದಾರೆ. ಅನುಭಾವ ವಿಷಯವು ಹಿರಿಯ ಚಿತ್ರಕಲಾವಿದ ಸಿ.ಬಿ.ಸೋಮಶೆಟ್ಟಿ ಬೀದರ ವಿರಚಿತ ಗ್ರಂಥ “ಶ್ರೀ ಗುರುಬಸವ ಚಿತ್ರ ಚರಿತ” ಬಸವಣ್ಣನವರ ಜೀವನ ಸಾಧನೆಯ ಚಿತ್ರಸಂಪುಟ ಕುರಿತು ಸವಿಸ್ತಾರವಾಗಿ, ಚಿತ್ರಗಳ ಸಹಿತ ಪ್ರಾತ್ಯಕ್ಷಿಕೆ ಮುಖಾಂತರ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಶರಣ ಸಂಸ್ಕøತಿ ದೃಶ್ಯಕಲೆಯಲ್ಲಿ ಸಾಧನೆ ಮಾಡಿದ ಕಲಬುರಗಿಯ ಹಿರಿಯ ಚಿತ್ರಕಲಾವಿದರು ಹಾಗು “ಬಿಸಿಲು ಆರ್ಟ ಗ್ಯಾಲರಿಯ” ನಿರ್ದೇಶಕÀ ವಿ.ಬಿ. ಬಿರಾದಾರ ಅವರಿಗೆ “ಚೈತನ್ಯಶ್ರೀ ಕಲಾ ಪ್ರಶಸ್ತಿ” ಕೊಟ್ಟು ಗೌರವಿಸಲಾಯಿತು. ಈ ಪ್ರಶಸ್ತಿಯು (10,000) ಹತ್ತು ಸಾವಿರ ರೂಗಳು ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿದೆ. ಇಲ್ಲಿಯವರೆಗೆ 7 ಹಿರಿಯ ಚಿತ್ರಕಲಾವಿದರಿಗೆ ಈ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ.
ಅದರಂತೆ ಈ ವರ್ಷ ಲಿಂ. ಮಾತೋಶ್ರೀ ಕಾಂತಾಬಾಯಿ ಪಾಟೀಲ ಭಂಕೂರ ಅವರ ಸ್ಮರಣಾರ್ಥ ಮಹಿಳಾ ಸಾಧಕಿ, ಲೇಖಕಿ, ಗಾಯಕಿ, ಚಿತ್ರಕಲಾವಿದೆ ಅನ್ನಪೂರ್ಣ ಎಂ. ಮನ್ನಾಪೂರ ಕೊಪ್ಪಳ ಅವರಿಗೆ ಚೈತನ್ಯ ಕಲಾಪ್ರಶಸ್ತಿ ಕೊಟ್ಟು ಗೌರವಿಸಲಾಯಿತು. ಈ ಪ್ರಶಸ್ತಿಯು (ರೂ. 5000/-) ಐದು ಸಾವಿರ ರೂ.ಗಳು ಮಾತ್ರ ಪ್ರಶಸ್ತಿ ಪ್ರಮಾಣ ಪತ್ರ ಒಳಗೊಂಡಿದೆ.
ನಗರದ ಹಿರಿಯ ಚಿತ್ರಕಲಾವಿದ ಪಾಟೀಲ ಬಂದುಗಳು ಹಾಗೂ ಬಸವಾಅಭಿನಿಗಳು ಆಗಮಿಸಿದ್ದರು. ಶ್ರೀ ಗುರುಬಸವ ಚಿತ್ರ ಚರಿತ ಗ್ರಂಥದ ಪ್ರಕಾಶಕ ಸಿ.ಬಿ ಸೋಮಶೆಟ್ಟಿಯವರಿಗೆ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಚೈತನ್ಯಮಯಿ ಟ್ರಸ್ಟಿನ ಅಧ್ಯಕ್ಷ ದಿನೇಶ ಪಾಟೀಲ ಸ್ವಾಗತಿಸಿದರು, ಉದಂಡಯ್ಯ ಕರಿಬಾಲಕ ದಿ.ಎಸ್ ಪಾಟೀಲರ ಹಾಗೂ ಗ್ಯಾಲರಿಯ ಪರಿಚಯಸಿ ಕಾರ್ಯಕ್ರಮ ನಿರೂಪಿಸಿದರು. ಚೈತನ್ಯಮಯಿ ಟ್ರಸ್ಟಿನ ಖಜಾಂಚಿ ಡಾ ಸುಜಾತಾ ಪಾಟೀಲ ಅವರು ಸನ್ಮಾನಿತರ ಪರಿಚಯಸಿ ಶರಣು ಸಮರ್ಪಣೆ ಮಾಡಿದರು.