ಹುಳಿಯಾರು ಪದವಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ಸರ್ಟಿಫಿಕೇಟ್ ಕೋರ್ಸ್ ಆರಂಭ

ಹುಳಿಯಾರು, ಸೆ. ೨೨- ಶಿಕ್ಷಣವು ಕೇವಲ ಪಠ್ಯ ಪುಸ್ತಕಗಳ ಅಧ್ಯಯನವಲ್ಲ, ಅದು ಮೌಲ್ಯಗಳನ್ನು ಬೆಳೆಸಿ ಜೀವನವನ್ನು ರೂಪಿಸುವ ಪ್ರಕ್ರಿಯೆಯಾಗಿದೆ. ಈ ನಂಬಿಕೆಯನ್ನು ಆಧಾರವಾಗಿಸಿಕೊಂಡು ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಅಚಿಡಿeeಡಿ ಐಚಿuಟಿಛಿhಠಿಚಿಜ: ಖesume, ಅoveಡಿ ಐeಣಣeಡಿ ಚಿಟಿಜ Iಟಿಣeಡಿvieತಿ ಒಚಿsಣeಡಿಥಿ ಎಂಬ ಹದಿನೈದು ಗಂಟೆಗಳ ಛಿeಡಿಣiಜಿiಛಿಚಿಣe ಛಿouಡಿse ನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂಗೀತಾ. ಪಿ. ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮುಂಬರುವ ಅವಧಿಗಳಲ್ಲಿ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳು, ಸಂವಹನ ಕೌಶಲ್ಯ ಮತ್ತು ವೃತ್ತಿಪರವಾಗಿ ತಮ್ಮನ್ನು ಹೇಗೆ ಪ್ರಸ್ತುತಪಡಿಸುವುದು ಎಂಬುವುದರ ಕುರಿತು ತಿಳಿದುಕೊಳ್ಳುವರು. ಇವು ತಮ್ಮ ಮೊದಲ ಕೆಲಸಕ್ಕೆ ಸೀಮಿತವಲ್ಲ. ಆದರೆ ನಿಮ್ಮ ವೃತ್ತಿ ಜೀವನದ ಪ್ರಯಾಣದಲ್ಲಿ ಯಶಸ್ವಿಯಾಗಲು ಸಹಾಯ ಮಾಡುವ ಜೀವಮಾನದ ಸ್ವತ್ತುಗಳಾಗಿವೆ. ಈ ಕೋರ್ಸ್‌ನಲ್ಲಿ ಪ್ರಿ ಟೆಸ್ಟ್ ಮತ್ತು ಪೋಸ್ಟ್ ಟೆಸ್ಟ್ ಮೂಲಕ ಕಲಿಕೆಯ ಮೊದಲು ಮತ್ತು ಕಲಿಕೆಯ ನಂತರದ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಈ ಕೋರ್ಸ್‌ನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಅನ್ನು ಕೂಡ ವಿತರಿಸಲಾಗುವುದು ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರೊ. ವೀರಣ್ಣ ಎಸ್.ಸಿ., ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ಸ್ಪಷ್ಟ ಗುರಿಯನ್ನು ಹೊಂದಬೇಕು. ಪಠ್ಯಕ್ರಮದ ಜತೆಗೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುವಂತಹ ಕೌಶಲ್ಯಗಳನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಬರುವ ಅವಕಾಶಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಈ ಕೋರ್ಸಿನ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.


ಐಕ್ಯೂಎಸಿ ಸಂಯೋಜಕರಾದ ಡಾ. ಸರಸ್ವತಿ ಕೆ.ಬಿ. ಅವರು, ವಿದ್ಯಾರ್ಥಿಗಳಿಗೆ ಕಲಿಕೆಗಾಗಿರುವ ಒಂದು ಉತ್ತಮ ಅವಕಾಶ. ಎಲ್ಲರೂ ಹುರುಪಿನಿಂದ ಈ ಚಟುವಟಿಕೆಯಲ್ಲಿ ಭಾಗವಹಿಸಿ ಯಶಸ್ವಿ ಹೊಂದುವಂತಾಗಲಿ ಎಂದು ಹಾರೈಸಿದರು.


ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಯೋಗೇಶ್ ಬಿ. ಅವರು ರೆಸ್ಯೂಮ್, ಪತ್ರ ಬರೆಯುವುದು ಇವೆಲ್ಲ ಒಂದು ರೀತಿಯ ಕಲೆ. ಇದರ ಕುರಿತಂತೆ ಕಲಿತುಕೊಂಡು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.


ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ. ಸುಷ್ಮಾ ಎಲ್ ಬಿರಾದರ್ ಅವರು ಉದ್ಯೋಗ ಸಂದರ್ಶನದಲ್ಲಿ, ನಡೆ-ನುಡಿ, ಉಡುಪು, ಸಂವಹನ ಕೌಶಲ್ಯ, ಇತ್ಯಾದಿಗಳು ಬಹಳ ಮುಖ್ಯವಾಗುತ್ತವೆ ಅದನ್ನು ಈ ಕೋರ್ಸಿನ ಮೂಲಕ ಕಲಿತು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.


ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕ ರಮೇಶ್ ಎಸ್., ಉದ್ಯೋಗ ಸಂದರ್ಶನದಲ್ಲಿ ಹಲವಾರು ವಿಧಗಳಿವೆ. ಉದ್ಯೋಗ ಆಕಾಂಕ್ಷಿಗಳ ತಾಳ್ಮೆಯ ಪರೀಕ್ಷೆಯು ಅದರಲ್ಲಿ ಒಂದು, ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯ ಇವರಿಗಿದೆಯೇ ಎಂದು ಪರಿಶೀಲಿಸಿ ಉದ್ಯೋಗವನ್ನು ನೀಡಲಾಗುತ್ತದೆ. ರಿಸ್ಯುಮ್ ಒಂದು ಮಾನದಂಡ ರೆಸ್ಯುಮನ್ನ ಸರಿಯಾಗಿ ಬರೆದಿಲ್ಲವಾದರೆ ಸಂದರ್ಶನಕ್ಕೂ ಮೊದಲೇ ರಿಜೆಕ್ಟ್ ಆಗುವ ಸಾಧ್ಯತೆ ಬಹಳಷ್ಟು ಇರುತ್ತದೆ ಎಂದರು.


ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳು ಉತ್ತಮವಾಗಿ ನಡೆಸಿಕೊಟ್ಟರು. ಮಮತಾ ಪಿ. ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಪ್ರಾರ್ಥಿಸಿದರು. ವಾಯುಜ ಸ್ವಾಗತಿಸಿದರು. ಮಾನಸ ಸಿ.ಎಸ್. ವಂದಿಸಿದರು.


ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.