೩೦ ಸಾವಿರ ಕೋಟಿ ರಕ್ಷಣಾ ಉತ್ಪನ್ನಕ್ಕೆ ಕೇಂದ್ರದಿಂದ ಶೀಘ್ರ ಅನುಮೋದನೆ


ನವದೆಹಲಿ, ಜೂ.೧೦-ಭಾರತೀಯ ಸೇನಾಪಡೆಗಳಿಗಾಗಿ ತ್ವರಿತ ಪ್ರತಿಕ್ರಿಯೆ ನೀಡುವ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಗಳ ಮೂರು ರೆಜಿಮೆಂಟ್‌ಗಳನ್ನು ೩೦ ಸಾವಿರ ಕೋಟಿ ರೂಪಾಯಿ ಮೊತ್ತದ ರಕ್ಷಣಾ ಉತ್ಪನ್ನಗಳ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಶೀಘ್ರದಲ್ಲೇ ಅನುಮೋದನೆ ನೀಡುವ ನಿರೀಕ್ಷೆ ಇದೆ.
೨೫ ರಿಂದ ೩೦ ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿಕೂಲ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾದ ಹೆಚ್ಚು-ಚಲಿಸುವ ಕ್ಯೂ ಆರ್ – ಸ್ಯಾಮ್ ವ್ಯವಸ್ಥೆಗಳಿಗೆ ಅವಶ್ಯಕತೆ ಅಂಗೀಕರಿಸುವ ಬಗ್ಗೆ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ ಈ ತಿಂಗಳಾಂತ್ಯದಲ್ಲಿ ನಿರ್ಧಾರ ಕೈಗೊಳ್ಳಲಿದೆ. ಮೇ ೭ ರಿಂದ ೧೦ ರಂದು ನಡೆದ ಆಪರೇಷನ್ ಸಿಂಧೂರ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಉಡಾಯಿಸಿದ ಟರ್ಕಿಶ್ ಮೂಲದ ಡ್ರೋನ್‌ಗಳು ಮತ್ತು ಚೀನಿ ಕ್ಷಿಪಣಿಗಳ ಬಹು ಅಲೆ ತಡೆಯುವಲ್ಲಿ ಭಾರತದ ಅಸ್ತಿತ್ವದಲ್ಲಿರುವ ಬಹು-ಪದರದ ವಾಯು ರಕ್ಷಣಾ ಜಾಲ ನಿರ್ಣಾಯಕ ಪಾತ್ರ ವಹಿಸಿದ ಕೂಡಲೇ ಈ ಕ್ರಮ ಕೈಗೊಳ್ಳಲಾಗಿದೆ.
ಡಿಆರ್‍ಡಿಒ ಮತ್ತು ಸೇನೆ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ವಿವಿಧ ಹಗಲು ಮತ್ತು ರಾತ್ರಿ ಕಾರ್ಯಾಚರಣೆಯ ಸನ್ನಿವೇಶಗಳಲ್ಲಿ ಅವುಗಳ ಸಾಮರ್ಥ್ಯ ಮೌಲ್ಯಮಾಪನ ಮಾಡಲು ವಿವಿಧ ರೀತಿಯ ಬೆದರಿಕೆ ತಡೆಯುವ ವ್ಯವಸ್ಥೆ ಹೊಂದಿದೆ ಎನ್ನಲಾಗಿದೆ
ಯುದ್ಧತಂತ್ರದಯುದ್ಧಭೂಮಿಯಲ್ಲಿ ವಾಯು ರಕ್ಷಣೆ ಒದಗಿಸಲು ಟ್ಯಾಂಕ್‌ಗಳು ಮತ್ತು ಪದಾತಿ ದಳದ ಯುದ್ಧ ವಾಹನಗಳೊಂದಿಗೆ ಚಲಿಸಲು ವಿಶೇಷವಾಗಿ ತಯಾರಿಸಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ
ರಷ್ಯಾದ ಎಸ್-೪೦೦ ಭೂಮಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಜೊತೆಗೆ ಬರಾಕ್-೮ ಮಧ್ಯಮ ಶ್ರೇಣಿಯ ವ್ಯವಸ್ಥೆಗಳನ್ನು ಇಸ್ರೇಲ್‌ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ, ರಷ್ಯಾದ ಭುಜದಿಂದ ಹಾರಿಸುವ ಇಗ್ಲಾ-ಎಸ್ ಕ್ಷಿಪಣಿಗಳು, ಮೇಲ್ದರ್ಜೆರೇರಿಸಿದ ವಿಮಾನ ವಿರೋಧಿ ಬಂದೂಕುಗಳು ಮತ್ತು ಸ್ಥಳೀಯ ಸಂಯೋಜಿತ ಡ್ರೋನ್ ಪತ್ತೆ ಮತ್ತು ಪ್ರತಿಬಂಧಕ ವ್ಯವಸ್ಥೆ ಹೊಂದಲಾಗಿದೆ
ಡಿಆರ್‍ಡಿಒ ೬ ಕಿ.ಮೀ ಪ್ರತಿಬಂಧಕ ವ್ಯಾಪ್ತಿ ಹೊಂದಿರುವ ಅತ್ಯಂತ ಅಲ್ಪ-ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಮಹತ್ವಾಕಾಂಕ್ಷೆಯ ಕುಶಾ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ೩೫೦ ಕಿ.ಮೀ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ
ಭಾರತ, ೨೦೨೮-೨೦೨೯ ರ ವೇಳೆಗೆ ಈ ದೀರ್ಘ-ಶ್ರೇಣಿಯ ವ್ಯವಸ್ಥೆಯನ್ನು ಕಾರ್ಯಾಚರಣೆಗೆ ನಿಯೋಜಿಸಲು ಯೋಜಿಸಿದೆ, ರಕ್ಷಣಾ ಸಚಿವಾಲಯ ೨೧,೭೦೦ ಕೋಟಿ ರೂ. ವೆಚ್ಚದಲ್ಲಿ ಐದು ಸ್ಕ್ವಾಡ್ರನ್‌ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು.