
ವಿಜಯಪುರ, ಮೇ.5: ವಿಜಯಪುರದಲ್ಲಿ ತಂಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿದ ಜನಗಣತಿ ಅಧಿಕಾರಿಗಳು ಭಾರತ ಜನಗಣತಿ 2027ರ ಮಾಹಿತಿ ವಿವರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ವಲಯ ಆಯುಕ್ತರಾದ ಎಚ್.ಎಸ್. ಚಿತ್ತರಗಿ ಗಣತಿದಾರರಾದ ನೀಲಮ್ಮ ಸಜ್ಜನ ಹಾಗೂ ಮೇಲ್ವಿಚಾರಕರಾದ ಸಿದ್ದಪ್ಪ ದಾನಿ ಹಾಗೂ ಕಂದಾಯ ನಿರೀಕ್ಷಕರಾದ ಕುಮಾರ ಚವಾಣ್ ಉಪಸ್ಥಿತರಿದ್ದರು ಎಂದು ಪ್ರಕಟಣೆಗೆ ತಿಳಿಸಿದೆ.




















