
ಸೇಡಂ, ಜು ,03:ತಾಲೂಕಿನ ಕೊಡ್ಲಾ ಗ್ರಾಮದ ಸಮೀಪದಲ್ಲಿರುವ ಶ್ರೀ ಸಿಮೆಂಟ್ ಕಾರ್ಖಾನೆಯಿಂದ ದಿನನಿತ್ಯ ಹೊರಬರುತ್ತಿರುವ ವಿಷಪೂರಿತ ರಾಸಾಯನಿಕ ಹೊಗೆ ಮತ್ತು ಧೂಳಿನಿಂದ ಸುತ್ತ ಮುತ್ತಲಿನ ಗ್ರಾಮಗಳ ಜನರ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷರಾದ ಮೌನೇಶ್ ಬೆನಕನಹಳ್ಳಿ ನೇತೃತ್ವದಲ್ಲಿ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಆದಷ್ಟು ಬೇಗ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಾದ ಮುನಿಯಪ್ಪ, ವಸಂತ, ರಮೇಶ್, ಸಾಗರ, ವೆಂಕಟೇಶ್,ಮಂಜು, ಮಲ್ಲು, ಮಲ್ಲಿಕಾರ್ಜುನ, ಮಹೇಂದ್ರಕುಮಾರ್, ಸಂತೋಷ್, ಅಮೃತ, ಸುನೀಲ್, ಹಣಮಂತ, ರಮೇಶ್,ಲಕ್ಷ್ಮೀಕಾಂತ್, ಅಶೋಕ್, ಗೋಪಾಲ, ಇರ್ಫಾನ್,ಜಗ್ಗು, ಸಾಬಣ್ಣ,ರಾಕೇಶ್, ಕಲ್ಲಪ್ಪ, ದೇವರಾಜ್, ತೊಟ್ಟಪ್ಪ, ಚೇತನ್,ಬೀರಪ್ಪ, ಮೋನಪ್ಪ, ಶರಣಪ್ಪ,ಶಾಮಪ್ಪ,ಶಾಮರಾವ್, ಪರಶುರಾಮ ಇನ್ನಿತರು ಇದ್ದರು.































