ಬಸವನಬಾಗೇವಾಡಿ:ಅ.೨೭: ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ ಪ್ರಯುಕ್ತ ಶನಿವಾರ ಬಸವೇಶ್ವರ ವೃತ್ತದಲ್ಲಿ ಸಮುದಾಯದ ಬಾಂಧವರು ಸೇರಿ ಅಪ್ಪಣ್ಣನ ಭಾವಚಿತ್ರಕ್ಕೆ ಹಾಗೂ ಬಸವೇಶ್ವರ ಪ್ರತಿಭೆಗೆ ಮಾಲಾರ್ಪಣೆ ಮಾಡಿ ಪಟಾಕ್ಷಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಈ ಸಂದರ್ಭದಲ್ಲಿ ಸಮಾಜದ ಮುಖಂಡ ಗುರುಲಿಂಗ್ ಹಡಪದ ಮಾತನಾಡಿ ಸಮಾಜದ ಬಹುದಿನಗಳ ಬೇಡಿಕೆಯಾಗಿತ್ತು ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದ ಪ್ರಯುಕ್ತ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿದೆ ಸರ್ಕಾರಕ್ಕೆ ಸಮಾಜ ಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸಿದರು ಮುಂಬರುವ ದಿನಗಳಲ್ಲಿ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಈ ಮೂಲಕ ಸಮಾಜವನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿಯಾಗುವಂತೆ ಸರ್ಕಾರ ಕೈಜೋಡಿಸಬೇಕು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಸರಕಾರ ಈ ಸಮುದಾಯದ ಬಹುದಿನದ ಕನಸನ್ನು ನನಸು ಮಾಡಿದೆ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಸಚಿವರಾದ ಶ್ರೀ ಶಿವಾನಂದ ಪಾಟೀಲ್ ಅವರು ಈ ಸಮುದಾಯದ ಜನರಿಗೆ ಸಮುದಾಯ ಭವನ ಕಟ್ಟಲು ೨೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ ಅದೇ ರೀತಿಯಾಗಿ ಅಪ್ಪಣ್ಣ ಅವರ ಹುಟ್ಟೂರಾದ ಮಸಬಿನಾಳದಲ್ಲಿ ಅವರ ಸ್ಮಾರಕ ಕಟ್ಟಲು ೫೦ ಲಕ್ಷ ಹಣವನ್ನು ಮಾಡಿದ್ದಾರೆ ಎಂದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾರಿವಾಳ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಜಗದೇವಿ ಗುಂಡಳ್ಳಿ ಮಾತನಾಡಿದರು ಸಂಗಯ್ಯ ಕಾಳಸ್ತೇಶ್ವರ ಮಠ ಜೆಟ್ಟಿಂಗರಾಯ ಮಾಲಗಾರ ಮತಾಬ್ ಬೊಮ್ಮನಹಳ್ಳಿ ಸಮಾಜದ ಅಧ್ಯಕ್ಷರಾದ ಮಹಾಂತೇಶ್ ಹಡಪದ ಪ್ರಹ್ಲಾದ ಹಡಪದ ಸುಭಾಷ್ ಹಡಪದ ಅಶೋಕ್ ಬಾಗೇವಾಡಿ ಮಲ್ಲಿಕಾರ್ಜುನ ಹಡಪದ ಕಲ್ಲಪ್ಪ ಹಡಪದ ಚಂದ್ರಮ ಹಡಪದ ಮಹೇಶ್ ನಾಗೂರ ಗದಿಗೆಪ್ಪ ಹಡಪದ ಶಾಂತು ಚಿಕ್ಕುರ ರಾಜು ಹಡಪದ ಸಂಗಮೇಶ್ವರ ಹಡಪದ ಬಸವರಾಜ ಕೋರವಾರ ಈರಣ್ಣ ಹಡಪದ ಮುತ್ತು ಹಡಪದ ಮುನ್ನ ಶಾಬಾದಿ ಸಂಗಮೇಶ್ ಜಾಲಗೇರಿ ಇದ್ದರು
























