Home ಜಿಲ್ಲೆ ಸಂತ ಸೇವಾಲಾಲ್‍ರ ಸಂಭ್ರಮದ ಜಯಂತಿ

ಸಂತ ಸೇವಾಲಾಲ್‍ರ ಸಂಭ್ರಮದ ಜಯಂತಿ

ಕಮಲನಗರ:ಫೆ.16:ಪಟ್ಟಣದ ವಿಶ್ವಾಸನಗರದಲ್ಲಿ ರವಿವಾರ ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲ್‍ರ 287ನೇ ಜಯಂತಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕಮಲನಗರ ಪಿಎಸ್‍ಐ ಆಶಾ ರಾಠೋಡ್ ಅವರು ಶ್ರೀ ಸಂತ ಸೇವಾಲಾಲ್‍ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶ್ರಮಿಕ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್‍ರ ಕೊಡುಗೆ ಅಪಾರವಾಗಿದೆ ಎಂದರು.

ವಿಶ್ರಾಂತ ಪ್ರಾಂಶುಪಾಲ ಎಸ್.ಎನ್.ಶಿವಣಕರ್ ಮಾತನಾಡಿ, ಸಂತ ಸೇವಾಲಾಲ್‍ರು ನೊಂದವರ ಕಣ್ಣೀರು ಒರೆಸುತ್ತಿದ್ದರು. ಕೇವಲ ಬಂಜಾರ ಸಮುದಾಯ ಮಾತ್ರವಲ್ಲದೆ ಇತರರ ಸೇವೆ ಸಲ್ಲಿಸಿದ ಮಾನವೀಯತೆಯ ಸಮಾಜ ಸೇವಕರು ಹಾಗೂ ಸಾಕಾರ ಮೂರ್ತಿಗಳಾಗಿದ್ದರು ಎಂದು ಬಣ್ಣಿಸಿದರು.

ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ಅವರ ಮುಖ್ಯ ನೀತಿ ತತ್ವಗಳಾಗಿದ್ದವು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಬನ ರಾಠೋಡ್, ಪ್ರವೀಣ ಜಾಧವ್, ಧನಾಜಿ ಚವಾಣ್, ಅಂಕುಶ, ಅಜಯ ರಾಠೋಡ್, ಜೈಸಿಂಗ ಜಾಧವ, ಸಂತೋಷ ಜಾಧವ, ಭರತ ಜಾಧವ, ಪ್ರವೀಣ ಜಾಧವ, ಗೆಮಾ ನಾಯಕ, ವಿಶ್ವನಾಥ, ರಾಮ ರಾಠೋಡ್, ರಾಜು, ಅಪ್ಪಾರಾವ, ಪ್ರಲ್ಹಾದ್ ಜಾಧವ ಸೇರಿದಂತೆ ಸಮುದಾಯ ಗಣ್ಯರು ಇದ್ದರು.

ಬೈಕ್ ರ್ಯಾಲಿ : ಶ್ರೀ ಸಂತ ಸೇವಾಲಾಲ್‍ರ 287ನೇ ಜಯಂತಿ ಪ್ರಯುಕ್ತ ರವಿವಾರ ಬೈಕ್ ರ್ಯಾಲಿ ವಿಶ್ವಾಸನಗರದಿಂದ ಹಮ್ಮಿಕೊಳ್ಳಲಾಯಿತು.

ವಿಶ್ವಾಸನಗರದಿಂದ ಆರಂಭಗೊಂಡ ಬೈಕ್ ರ್ಯಾಲಿ ಮದನೂರು ಕ್ರಾಸ್, ಧರಿಹನುಮಾನ ಮಂದಿರ, ರೈಲ್ವೇ ಗೇಟ್, ಟಿಪ್ಪು ಸುಲ್ತಾನ ಚೌಕ್, ಬಸವೇಶ್ವರ ವೃತ್ತ ಮುಳಕ ತಹಶೀಲ್ದಾರ್ ಕಚೇರಿ, ಶಿವಾಜಿ ಚೌಕ್, ಅಕ್ಕಮಹಾದೇವಿ ವೃತ್ತ, ಅತಿಥಿ ಗ್ರಹ, ಅಲ್ಲಮಪ್ರಭು ವೃತ, ಬಸ್ ನಿಲ್ದಾಣ್ ಮೂಲಕ ಹಾದು ಮತ್ತೇ ವಿಶ್ವಾಸನಗರದಲ್ಲಿ ಮುಕ್ತಾಯವಾಯಿತು.