
ನವಲಗುಂದ,ಫೆ16 : ಪಟ್ಟಣದ ಬಸವೇಶ್ವರ ನಗರದಲ್ಲಿ ಬಂಜಾರ ಸಮಾಜದಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಪುಷ್ಪ ಸಲ್ಲಿಸಿ ಮಾತನಾಡಿದರು.
ನಂತರ ಮಹಿಳೆಯರು ಬಂಜಾರ ನೃತ್ಯ ಮಾಡಿ ಅದ್ದೂರಿಯಾಗಿ ಜಯಂತಿ ಆಚರಿಸಿದರು.
ಮಂಜುನಾಥ ಜಾದವ, ರಾಮಣ್ಣ ಲಮಾಣಿ, ಉಮೇಶ ಲಮಾಣಿ, ಸಂತೋಷ ಚವ್ಹಾಣ, ಮಂಜುನಾಥ ನಾಯಕ, ಮುತ್ತು ಲಮಾಣಿ, ಗೋಪಾಲ ಲಮಾಣಿ, ರವಿ ಲಮಾಣಿ, ಲಕ್ಷ್ಮಣ ಲಮಾಣಿ, ಚಂದ್ರು ಲಮಾಣಿ, ಕುಮಾರ ಕಲಾಲ ಇತರರು ಇದ್ದರು.






























