
ಆಳಂದ:ಜ.20: “ಸಂತ ವೇಮನರ ಕವಿತೆಗಳು ನಮ್ಮ ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಅವರು ಸಾಮಾಜಿಕ ಅಸಮಾನತೆ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಇಂದಿನ ಯುವಕರು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕು” ಎಂದು ರೆಡ್ಡಿ ಸಮಾಜದ ಅಧ್ಯಕ್ಷ ಹಾಗೂ ರಾಜಶೇಖರ್ ಮಹಾಸ್ವಾಮಿಗಳ ಬಿಎಡ್ ಕಾಲೇಜಿನ ಪ್ರಾಚಾರ್ಯ ಅಶೋಕ ರೆಡ್ಡಿ ಹೇಳಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ಸಂತ ಹಮ್ಮಿಕೊಂಡ ಸಂತ ವೇಮನ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂತ ವೇಮನರು 17ನೇ ಶತಮಾನದ ತೆಲುಗು ಕವಿ-ಸಂತರಾಗಿದ್ದು, ಅವರ ಕವಿತೆಗಳು ಸಾಮಾಜಿಕ ಸುಧಾರಣೆ, ಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಒತ್ತಿ ಹೇಳುತ್ತವೆ. ರೆಡ್ಡಿ ಸಮುದಾಯದಲ್ಲಿ ವೇಮನರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ ಮತ್ತು ಅವರ ಜಯಂತಿಯನ್ನು ಪ್ರತಿವರ್ಷ ಆಚರಿಸುವುದು ಸಾಂಪ್ರದಾಯಿಕವಾಗಿದೆ ಎಂದರು.
ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರ ಮಾತನಾಡಿ, ಸಂತ ವೇಮನರ ಆದರ್ಶಗಳು ಸಮಾಜದ ಏಕತೆಗೆ ಮಾರ್ಗದರ್ಶನ ನೀಡುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುಂಡಲಿಕ ಸಾಧು, ರೈತ ಶಿವಾನಂದ ರೆಡ್ಡಿ, ಮಲ್ಲಿಕಾರ್ಜುನ್ ಕುಸೇ, ಭೀಮರಾವ್ ಪಡಸಾವಳಗಿ, ಅಶೋಕ ರೆಡ್ಡಿ, ಸಾಧು ಚಂದ್ರಶೇಖರ್ ರೆಡ್ಡಿ, ಯಲ್ಲಾಲಿಂಗ ಪಾಟೀಲ್, ಸುದರ್ಶನ್ ರೆಡ್ಡಿ, ಸಿದ್ದಲಿಂಗ ರೆಡ್ಡಿ, ಸಾಧು ಶರಣಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲೂ ಸಂತ ವೇಮನ ಜಯಂತಿಯನ್ನು ಆಚರಿಸಲಾಯಿತು. ಇಲ್ಲಿ ಸಂತ ವೇಮನರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು ಅನುಗಾರ ಯೋಗೇಶ್ ಸಕ್ಕರಗಿ, ಮೋಹನ್ ಚಿತಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
























