
ತಿಪಟೂರು, ಜ. ೨೪- ತಾಲ್ಲೂಕಿನ ಕೋಟನಾಯಕನಹಳ್ಳಿ ಶ್ರೀ ರುದ್ರಮುನಿ ಸ್ವಾಮೀಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ೧೬೪ನೇ ಜಯಂತಿಯನ್ನು ವಿವೇಕ ಸಿಂಚನ ಕಾರ್ಯಕ್ರಮದಡಿ ಆಚರಿಸಲಾಯಿತು.
ತುರವೇಕೆರೆ ತಾಲ್ಲೂಕಿನ ಮಾದಿಹಳ್ಳಿ ರಾಮಕೃಷ್ಣಾಶ್ರಮದ ತದ್ಯುಕ್ತಾನಂದಜಿ ಮಹಾರಾಜರು ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ, ಸಾಧನೆ ಹಾಗೂ ಯುವ ಜನತೆಗೆ ನೀಡಿದ ಪ್ರೇರಣಾದಾಯಕ ಸಂದೇಶಗಳನ್ನು ತಿಳಿಸಿ ವಿವೇಕಾನಂದರ ಆದರ್ಶಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಶಾಲೆಯ ಆಡಳಿತಾಧಿಕಾರಿ ರಶ್ಮಿ ನಿರಂಜನ್, ಶಾಲಾ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.


























