ಸ್ವಾಭಿಮಾನದ 108ನೇ ಭೀಮ ಕೊರೇಗೌವ್ ವಿಜಯೋತ್ಸವ ಆಚರಣೆ

ಬೀದರ:ಜ.5:ಸ್ವಾಭಿಮಾನ ಹಾಗೂ ಸಮಾನತೆಯ ಸಂಕೇತವಾದ 108ನೇ ಭೀಮ ಕೊರೇಗೌವ್ ವಿಜಯೋತ್ಸವವನ್ನು ಬೀದರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನ, ಶಹಾಗಂಜ್‍ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮವು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶ್ರೀ ಮಾರುತಿ ಬೌದ್ಧೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಭೀಮ ಕೊರೇಗೌವ್ ಇತಿಹಾಸವು ಮಾನವ ಬದುಕಿಗೆ ಸ್ವಾಭಿಮಾನ ಹಾಗೂ ಸಮಾನ ಹಕ್ಕಿನ ಅರಿವು ನೀಡುವ ಮಹತ್ವದ ಹೋರಾಟವಾಗಿದ್ದು, ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂಗ್ಲೆಂಡ್‍ನ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಮರೆತುಹೋದ ಈ ಇತಿಹಾಸವನ್ನು ಭಾರತಕ್ಕೆ ಪರಿಚಯಿಸಿ ಹೊಸ ಇತಿಹಾಸ ನಿರ್ಮಿಸಿದರು ಎಂದು ಮಾರುತಿ ಬೌದ್ಧೆ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಶೇಷಿಕುಮಾರ್ ಎಸ್. ಪೆÇಲೀಸ್ ಪಾಟೀಲ್, ನಾಗನಾಥ್ ಸಿಗೋಡೆ, ಬಸವರಾಜ್ ಜಡಗೆ, ಮುಕೇಶ್ ಶಹಾಗಂಜ್, ಅಜಯ್, ದಿನೇಶ್ ಶಂಕರ, ರಾಹುಲ್ ಹಾಗೂ ಮಿಲಿಂದ್ ವಿನೋದ್ ಗುಪ್ತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.