
ಲಕ್ಷೆ÷್ಮÃಶ್ವರ,ಜ.೯: ದೊಡ್ಡೋರು ರಸ್ತೆಯಲ್ಲಿರುವ ಎಂಜಿಎA ಫೌಂಡೇಶನ್ ನ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಸಾರಿಗೆ ಇಲಾಖೆ ಪೊಲೀಸ್ ಇಲಾಖೆ ಮತ್ತು ಸಂಸ್ಥೆಯ ಆಶ್ರಯದಲ್ಲಿ ೩೭ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸ ಆಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ನ್ಯಾಮಗೌಡ ಅವರು ವಿದ್ಯಾರ್ಥಿಗಳು ರಸ್ತೆಯ ನಿಯಮಗಳ ಬಗ್ಗೆ ಈಗಲೇ ಅರಿವು ಮೂಡಿಸಿಕೊಳ್ಳಬೇಕು.
ವಾಹನಗಳ ಚಾಲನೆಯ ಸಂದರ್ಭದಲ್ಲಿ ರಸ್ತೆಗಳನ್ನು ದಾಟುವಾಗ ಯಾವ ಭಾಗದಲ್ಲಿ ಸಾಗಬೇಕು ಎಂಬ ಮತ್ತು ವಿದ್ಯಾರ್ಥಿಗಳು ವಯಸ್ಕರಾಗುವವರೆಗೆ ವಾಹನಗಳ ಚಾಲನೆಯನ್ನು ಮಾಡಬಾರದು ಎಂದು ಸಲಹೆ ನೀಡಿದರು.
ಸಾರಿಗೆ ಇಲಾಖೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಅರುಣ್ ಕಟ್ಟಿಮನಿಯವರು ವಿದ್ಯಾರ್ಥಿಗಳಿಗೆ ರಸ್ತೆಯ ನಿಯಮಗಳ ಸಮಗ್ರವಾಗಿ ವಿವರಿಸಿದರು ಮತ್ತು ವಿದ್ಯಾರ್ಥಿಗಳ ಸಂವಾದದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ಸಂಸ್ಥೆಯ ಬಸವೇಶ್ ಮಹಾಂತಶೆಟ್ಟರವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಇಂತಹ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಶನೀಯ
ಎಂದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ಗುರುರಾಜ್ ಪಾಟೀಲ್ ಕುಲಕರ್ಣಿ ಪಾಲ್ಗೊಂಡಿದ್ದರು.

























