ಬಾಗಲಕೋಟೆ, ಆ.೧೯: ಜಿಲ್ಲೆಯಲ್ಲಿ ಆಗಸ್ಟ ೨೭ ರಂದು ಆಚರಿಸಲ್ಪಡುವ ಗಣೇಶ ಉತ್ಸವ ಹಾಗೂ ಸೆಪ್ಟೆಂಬರ ೫ ರಂದು ಆಚರಿಸಲ್ಪಡುವ ಈದ್‌ಮಿಲಾದ ಹಬ್ಬವನ್ನು ಶಾಂತರೀತಿಯಿAದ, ಸಂಭ್ರಮ ಸಡಗರದಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಕರೆ ನೀಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗಣೇಶ ಉತ್ಸವ ಹಾಗೂ ಈದಮಿಲಾದ್ ಹಬ್ಬದ ಕುರಿತು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ದಕ್ಕೆ ಬರದಂತೆ ಹಬ್ಬವನ್ನು ಆಚರಿಸಬೇಕು. ಹಬ್ಬದ ಆಚರಣೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡಲಿದ್ದು, ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪಿಡಬ್ಲುಡಿ, ಪೊಲೀಸ್, ಹೆಸ್ಕಾಂ ಹಾಗೂ ನಗರಸಭೆಯಿಂದ ಪಡೆಯಬಹುದಾದ ಅನುಮತಿಯಲ್ಲಿ ಅಡೆತಡೆಯಾಗದಂತೆ ಏಕಗವಾಕ್ಷಿ ಪದ್ದತಿಯ ವ್ಯವಸ್ಥೆ ಮಾಡಲಾಗಿದೆ. ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಾಲನೆ ಆಗಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಗಣೇಶ ಉತ್ಸವ ಮಂಡಳಿಗಳು ಒಗ್ಗಟ್ಟಿನಿಂದ ಆಚರಣೆ ಮಾಡಬೇಕು. ಆಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಬರದಂತೆ ಪೊಲೀಸ್ ಸಿಬ್ಬಂದಿಗಳ ಜೊತೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕು. ಗಣೇಶ ವಿಸರ್ಜನೆ ಸಮಯದಲ್ಲಿ ಡಿಸೆ ಸೌಂಡ್ ಸಿಸ್ಟಮ್ ಹಚ್ಚುವದರಿಂದ ಧಾರ್ಮಿಕ ಭಾವನೆ ಮೂಡಲು ಸಾಧ್ಯವಿಲ್ಲ. ಇದರ ಬದಲಾಗ ಜಾನಪದ ಕಲಾತಂಡಗಳ ಮೂಲಕ ಅದ್ದೂರಿಯಾಗಿ ಮೆರವಣಿಗೆ ಮಾಡುವದರ ಜೊತೆಗೆ ನಗರಸಭೆ, ಗ್ರಾಮ ಪಂಚಾಯತಿಯಿAದ ನಿರ್ಮಿಸಲಾದ ಕೃತಕ ನೀರಿನ ತೊಟ್ಟಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರದ ರೀತಿಯಲ್ಲಿ ಹಬ್ಬವನ್ನು ಆಚರಣೆ ಆಗಬೇಕು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದು, ಇವುಗಳ ಮೂಲಕ ಇಲಾಖೆ ಎಲ್ಲವನ್ನು ಗಮನಿಸುತ್ತದೆ. ಸರ್ವಜನಿಕರ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಪೆಂಡಾಲ ಹಾಕುವಾಗ ಸಂಚಾರಕ್ಕೆ ಅಡಗಡೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಸಿಬ್ಬಂದಿಯ ಜೊತೆ ಗಣೇಶ ಮಂಡಳಿಯಿAದ ವ್ಯಾಲೆಂಟರ್‌ಗಳನ್ನು ಸಹ ನಿಯೋಜಿಸಲು ತಿಳಿಸಿದ ಅವರು ಮೆರವಣಿಗೆಯಲ್ಲಿ ಯಾವ ರೀತಿಯ ಡಿಜೆ ಸೌಂಡ್ ಸಿಸ್ಟಮ್ ಅಳವಡಿಸುತ್ತೀರಿ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ಗಣೇಶ ಉತ್ಸವ ಮಂಡಳಿಯವರು ಪ್ರತಿ ವರ್ಷದಂತೆ ಈ ವರ್ಷವೂ ಡಿಜೆ ಸೌಂಡ್ ಸಿಸ್ಟಮ್‌ಗೆ ಅವಕಾಶ ನೀಡಲು ವಿನಂತಿಸಿದರೆ ಇನ್ನು ಕೆಲವರು ಡಿಸೆ ಬಳಸುವದಿಲ್ಲವೆಂದು ತಿಳಿಸಿದರು. ಈದ್ ಮಿಲಾದ್ ಹಬ್ಬದ ನಿಮಿತ್ಯ ಹಳೆಯ ಬಾಗಲಕೋಟೆ ಮತ್ತು ನವನಗರದಲ್ಲಿ ತಲಾ ಒಂದು ದಿನ ಮೆರವಣಿಗೆ ಅವಕಾಶ ನೀಡುವಂತೆ ಸಮುದಾಯದ ಮುಖಂಡರು ಸಭೆಯಲ್ಲಿ ವಿನಂತಿಸಿಕೊAಡರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಸೇರಿದಂತೆ ಗಣೇಶ ಉತ್ಸವ ಸಮಿತಿಯ ಮುಖಂಡರು ಹಾಗೂ ಈದ್‌ಮಿಲಾದ್ ಆಚರಣೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.


























