
ಗುಳೇದಗುಡ್ಡ,ಜು.೪: ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಿಂದೂ ಮುಸ್ಲಿಂ ಸಮಾಜದ ಹಿರಿಯರು ಜಾಗೃತಿ ವಹಿಸಬೇಕು ಎಂದು ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಮೊಹರಂ ಹಬ್ಬದ ಶಾಂತಿಪಾಲನ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಮುಸ್ಲಿಂ ಎಲ್ಲರೂ ಕೂಡಿಕೊಂಡು ಮೊಹರಂ ಹಬ್ಬವನ್ನು ಗುಳೇದಗುಡ್ಡ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬಹಳ?ÀÄ್ಟ ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಿಸೋಣ. ಪೊಲೀಸರ ಕಾರ್ಯಕ್ಕೂ ಕೂಡ ಸಹಕಾರ ನೀಡಬೇಕು. ಯಾವುದಾರರೂ ಅಹಿತಕರ ಘಟನೆಗಳು ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ಮುಟ್ಟಿಸಬೇಕು ಎಂದರು.
ಸಭೆಯಲ್ಲಿ ಎಂ.ಎA. ಮಕಾನದಾರ, ರೆಹಮಾನ್ ತೆಳ್ಳಿಗುತ್ತಿ, ಗೋಪಾಲ ಜಾದವ್ ಯಮನಪ್ಪ ವಡ್ಡರ, ರಾಜು ಸಂಗಮ, ಕಲಿಲ ಕೊತ್ತಲ, ಖಾದರಷಾ ಮಕಾನದಾರ, ರಾಜೇಶಸಾಬ್ ಮುಂಡಾಸದ, ಮೈಬೂಬಸಾಬ ಮಕಾನದಾರÀ, ಸಿಬ್ಬಂದಿಯಾದ ಮುತ್ತಣ್ಣ ಭಜಂತ್ರಿ, ಅಶೋಕ್ ಕೋಟಿ, ಶರಣು ಕೂಡ್ಲೆಪ್ಪನವರ, ಎಚ್ ವೈ ಮಾಗಿ, ಬೀರಪ್ಪ ಮುಲ್ಲಾನವರ್ ಮತ್ತಿತರರು ಇದ್ದರು.