ಪುಸ್ತಕ,ಪೆನ್ನು ಸಿಹಿ ಹಂಚಿ ಸ್ವಾತಂತ್ರ್ಯ ದಿನ ಆಚರಣೆ

ಕೋಲಾರ,ಆ.೧೫: ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ಮಾರಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಕಡೆಯಿಂದ ಪುಸ್ತಕ, ಪೆನ್ನುಗಳು, ಸಿಹಿ ಹಂಚಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಕ್ಕಳ ಜೊತೆ ಸೇರಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಅವರು ಮಕ್ಕಳಿಗೆ ಸರ್ಕಾರಿ ಶಾಲೆಗಳ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.


ಈ ಸಂದರ್ಭದಲ್ಲಿ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಬಂಗಾರಪೇಟೆ ತಾಲೂಕ ಅಧ್ಯಕ್ಷ ಪ್ರವೀಣ್ ಕುಮಾರ್, ನಿವೃತ್ತ ಸೈನಿಕ ಮಂಜುನಾಥ್, ಕಾರ್ಯದರ್ಶಿ ಬಾಲು, ಗಣೇಶ್, ಅನಿಲ್, ಸಂತೋಷ್, ಮನೋಜ್, ರಾಜಾರೆಡ್ಡಿ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಇದ್ದರು.