ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿ: ಪಿಎಸ್ ಐ ಶರಣಪ್ಪ ಜಾಕ್ನಳ್ಳಿ

ಸೇಡಂ, ಫೆ,28: ಮುಂಬರುವ ಪವಿತ್ರ ರಂಜಾನ್ ಮಾಸ ಹಾಗೂ ಬಣ್ಣಗಳ ಹಬ್ಬ ಹೋಳಿಯನ್ನು ಸೌಹಾರ್ದತೆ ಮತ್ತು ಶಾಂತಿಯಿಂದ ಆಚರಿಸುವಂತೆ ಪಿಎಸ್ ಐ ಶರಣಪ್ಪ ಜಾಕ್ನಳ್ಳಿ ಹೇಳಿದರು. ತಾಲೂಕಿನ ಮಳಖೇಡ ಪೆÇೀಲಿಸ್ ಠಾಣೆಯಲ್ಲಿ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ನಾಡು ವಿವಿಧತೆಯಲ್ಲಿ ಏಕತೆಯನ್ನು ಕಂಡ ನಾಡು ರಂಜಾನ್ ಮತ್ತು ಹೋಳಿ ಹಬ್ಬಗಳು ಒಂದೇ ಸಮಯದಲ್ಲಿ ಬಂದಿರುವುದು ಸಂತೋಷದ ವಿಷಯ ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ, ಪರಸ್ಪರ ಗೌರವದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು. ಈ ವೇಳೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ರಾಜಶೇಖರ ಪುರಾಣಿಕ,ಪಿ.ಎಲ್.ಡಿ. ಬ್ಯಾಂಕ್,ನ ಮಾಜಿ ನಿರ್ದೇಶಕರಾದ ಬಸವರಾಜ ಮಾಲಿ ಪಾಟೀಲ್, ಹಿಂದೂ ಸಮ್ಮೇಳನದ ಅಧ್ಯಕ್ಷರಾದ ಶರಣು ಅವಂಟಿ,ಹಸನಪ್ಪ ಬೀರನಳ್ಳಿ, ರಾಜಪ್ಪ ಮಂಗಾ, ಹಣಮಂತ, ದೇವೇಂದ್ರಪ್ಪ ಪಿಲ್ಲಿ, ಪೆÇೀಲಿಸ್ ಸಿಬ್ಬಂದಿ ಸಂಜಯಕುಮಾರ ಬಿರಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು