
ತಾಳಿಕೋಟೆ : ಮೇ.21:ಹಿಂದೂ ಮುಸ್ಲಿಂ ಬಾಂದವರು ಸದಾ ಭಾವೈಕ್ಯತೆಯೊಂದಿಗೆ ಸಾಗಿಬಂದ ತಾಳಿಕೋಟೆ ನಗರದಲ್ಲಿ ಎಲ್ಲ ಹಬ್ಬಗಳಲ್ಲಿ ಎರಡೂ ಬಾಂದವರು ಸಕ್ರೀಯವಾಗಿ ಭಾಗವಹಿಸಿ ತೋರಿಸುತ್ತಾ ಸಾಗಿರುವ ಪ್ರೀತಿ ಬಾಂದವ್ಯ ಎಂದಿನಂತಿರಲಿ ಈ ಭಾರಿಯ ಬಕ್ರೀದ್ ಹಬ್ಬದಲ್ಲಿಯೂ ಕೂಡಾ ಶಾಂತಿ ಮತ್ತು ಸೌಹಾರ್ದತೆ ಸಂಖೇತವಾಗಲಿ ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀಮತಿ ಜ್ಯೋತಿ ಖೋತ್ ಅವರು ಹೇಳಿದರು.
ಇದೇ ದಿ.28 ರಂದು ಮುಸ್ಲಿಂ ಬಾಂದವರ ವತಿಯಿಂದ ಆಚರಿಸಲಾಗುತ್ತಿರುವ ಬಕ್ರೀದ್ ಹಬ್ಬದ ನಿಮಿತ್ಯವಾಗಿ ಬುಧವಾರರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಯಾವುದೇ ಹಬ್ಬದ ಸಡಗರವಿರಲಿ ಇನ್ನೊಂದು ಧರ್ಮಕ್ಕೆ ತೊಂದರೆಯಾಗಬಾರದು ಸಹೋದರತೆಯಿಂದ ಕೂಡಿ ಆಚರಿಸುವಂತಾಗಬೇಕು ಅಂದಾಗ ಆ ಹಬ್ಬಕ್ಕೆ ಅರ್ಥಬರುತ್ತದೆ ಎಂದ ಅವರು ತಾಳಿಕೋಟೆ ಪಟ್ಟಣದ ಜನರು ಶಾಂತಿಪ್ರೀಯರಾಗಿದ್ದೀರಿ ಎಲ್ಲ ಹಬ್ಬಗಳನ್ನು ಸಹೋದರತೆಯಿಂದ ಕೂಡಿ ಆಚರಿಸುತ್ತಾ ಬಂದಿರುವದು ಸಂತಸದ ಸಂಗತಿಯಾಗಿದೆ ಈ ಭಾರಿಯ ಬಕ್ರೀದ್ ಹಬ್ಬದ ಸಮಯದಲ್ಲಿ ಎರಡೂ ಧರ್ಮಿಯರು ಕೋಮು ಸೌಹಾರ್ದತೆ ಕಾಪಾಡಿಕೊಂಡು ಸಾಗಬೇಕೆಂದ ಅವರು ಹಬ್ಬದ ಆಚರಣೆಯ ಸಂದರ್ಬದಲ್ಲಿ ಯಾವುದೇ ಸಣ್ಣಪುಟ್ಟ ಘಟನೆಗಳು ನಡೆದರೂ ಸಹ ಪೊಲೀಸ್ ಸಿಬ್ಬಂದಿಗಳಾಗಲಿ ಅಧಿಕಾರಿ ವರ್ಗದವರ ನದುರಿಗೆ ತರುವಂತಹ ಕೆಲಸ ಮಾಡಬೇಕು ಮುಂದೆ ಆಗುವ ಕೆಟ್ಟ ಕಾರ್ಯಗಳನ್ನು ತಡೆಗಟ್ಟಿದಂತಾಗಲಿದೆ ಎಂದ ಅವರು ಹಬ್ಬವು ಸಂಭ್ರಮದಿಂದ ಕೂಡಿದ್ದರೂ ಕೂಡಾ ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ಸಾಗಲಿ ಕೋಮು ಸಔಹಾರ್ದತೆಯಿಂದ ಕೂಡಿರಲಿ ಎಂದ ಅವರು ನಗರದ 3 ಈದ್ಗಾಗಳಲ್ಲಿ ಬೆಳಿಗ್ಗೆ ನಮಾಜ ಕಾರ್ಯ ನಡೆಯುತ್ತದೆ ಎಂಬ ಮಾಹಿತಿ ಇದೆ ಇವುಗಳನ್ನು ಹೊರತು ಪಡಿಸಿ ಬೇರೆಡೆ ಮಾಡುತ್ತಿದ್ದರೆ ಮೊದಲೇ ಮಾಹಿತಿ ಒದಗಿಸಬೇಕೆಂದು ಸಮಾಜದ ಮುಖಂಡರಿಗೆ ತಿಳಿಹೇಳಿದರು.
ವೇದಿಕೆಯ ಮೇಲೆ ಪ್ರೋಪೇಷನರಿ ಪಿಎಸ್‍ಐ ಶರ್ಮಿಳಾ ಅವರು ಇದ್ದರು.
ಈ ಸಮಯದಲ್ಲಿ ಮುಖಂಡರುಗಳಾದ ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ(ನಾವದಗಿ), ಶಮಶುದ್ದೀನ ನಾಲಬಂದ, ಶಪೀಕ್ ಇನಾಮದಾರ, ಜಾವದ ಕೇಂಭಾವಿ, ಫಯಾಜ್ ಉತ್ನಾಳ, ಜಮಾದಾರ, ಮಂಜು ಶೆಟ್ಟಿ, ಡಿ.ವ್ಹಿ ಪಾಟೀಲ, ಮೈನು ಬೇಪಾರಿ, ರಾಮಣ್ಣ ಕಟ್ಟಿಮನಿ, ಸಂಜೀವ ಬರದೇನಾಳ, ಮಂಜೂರ ಬೇಪಾರಿ, ಮೊದಲಾದವರು ಉಪಸ್ಥಿತರಿದ್ದರು.






















