
ಅಥಣಿ :ಮೇ.24: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಎಲ್ಲರೂ ಪರಸ್ಪರ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆಯೊಂದಿಗೆ ಆಚರಿಸುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಹೇಳಿದರು.
ಅವರು ಪಟ್ಟಣದ ಪೆÇಲೀಸ್ ಸಮುದಾಯ ಭವನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತತೆಯಿಂದ ಎಲ್ಲರೂ ಸೇರಿ ಹಬ್ಬವನ್ನು ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವುದು, ಸಂಚಾರಕ್ಕೆ ತೊಂದರೆಯಾಗುವಂತೆ ವರ್ತಿಸುವುದು ಕಾನೂನು ಪ್ರಕಾರ ಅಪರಾಧ ವದಂತಿ ಹಬ್ಬಿಸುವವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕೆಲವು ಕೀಡಗೇಡಿಗಳು ನೈತಿಕ ಪೆÇೀಲಿಸ್ ಗಿರಿ ಮಾಡಿ ಕಾನೂನು ಕೈಗೆತ್ತಿಕೊಳ್ಳುವುದು ಮಾಡಬಾರದು ಎಲ್ಲದಕ್ಕೂ ಕಾನೂನು ಇದೆ ಸರ್ಕಾರದ ನಿಯಮಗಳ ಉಲ್ಲಂಗನೆಯಾದ ಬಗ್ಗೆ ತಮ್ಮ ಗಮನಕ್ಕೆ ಬಂದರೆ ತಾವು ಕಾನೂನು ಕೈಗೆತ್ತಿಕೊಳ್ಳದೇ. ತಕ್ಷಣ ಪೆÇೀಲಿಸರಿಗೆ ಮಾಹಿತಿ ನೀಡಬೇಕು ತಪ್ಪು ಕಂಡ ಬಂದರೆ ಪೆÇೀಲಿಸ್ ಇಲಾಖೆ ಅಂತವರ ವಿರುದ್ಧ ಕಠಿಣ ಕಾನೂನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಆನಂತರ ಪಿಎಸ್‍ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ, ಹಬ್ಬದ ದಿನ ಪ್ರಮುಖ ಮಸೀದಿ, ಈದ್ಗಾ ಮೈದಾನ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗುವುದು ಸಾರ್ವಜನಿಕರು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸಿ ಶಾಂತಿ ಕಾಪಾಡಬೇಕು ತುರ್ತು ಸಂದರ್ಭದಲ್ಲಿ 112 ಅಥವಾ ಠಾಣೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಮನವಿ ಮಾಡಿದರು
ಈ ವೇಳೆ ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್ ನಾಲಬಂದ ಮಾತನಾಡಿ ಅಥಣಿ ಭಾವೈಕ್ಯತೆಯ ಕೇಂದ್ರವಾಗಿದ್ದು. ಇಲ್ಲಿ ಎಲ್ಲಾ ಧರ್ಮದವರು ಯಾವುದೇ ಹಬ್ಬವಿರಲಿ ಒಟ್ಟಾಗಿ ಒಂದಾಗಿ ಪರಸ್ಪರ ಸಹೋದರತೆ ಸಹಬಾಳ್ವೆಯಿಂದ ಆಚರಿಸುತ್ತೇವೆ. ಇಲ್ಲಿಯವರೆಗೆ ಅಥಣಿಯಲ್ಲಿ ಯಾವುದೇ ಘಟನೆಗಳು ನಡೆದಿಲ್ಲ ನಡೆಯಲು ಬಿಡುವುದಿಲ್ಲ ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಹಬ್ಬವನ್ನು ಆಚರಿಸುತ್ತೇವೆ ಎಂದರು
ಆನಂತರ ಅಥಣಿ ತಾಲೂಕಾ ಮೈನಾರಿಟಿ ಆಂಡ್ ಸೋಷಿಯಲ್ ವೆಲ್ಫೇರ್ ಕಮೀಟಿ ಅಧ್ಯಕ್ಷ ಅಯ್ಯಾಜ ಮಾಸ್ಟರ್. ಕರವೇ ತಾಲೂಕಾ ಅಧ್ಯಕ್ಷ ಶಬ್ಬೀರ ಸಾತಬಚ್ಚೆ ಮುಖಂಡರಾದ ಮಂಜು ಹೋಳಿಕಟ್ಟಿ. ಶಿವಾನಂದ ಸೌದಾಗರ ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಶಾಂತಿಯುತವಾಗಿ ಹಬ್ಬ ಆಚರಿಸುವುದಾಗಿ ಸಮುದಾಯದ ಮುಖಂಡರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಸೈಯ್ಯದಅಮೀನ್ ಗದ್ಯಾಳ. ಉಪಾಧ್ಯಕ್ಷ ಜುಬೇರ ನಾಲಬಂದ. ಆಸೀಫ್ ತಾಂಬೋಳಿ. ಸಲಾಮ್ ಕಲ್ಲಿ, ರಿಯಾಜ ಸನದಿ, ಸಯ್ಯದ ಗಡ್ಡೇಕರ, ಮಹಾದೇವ ಯಕ್ಕಂಚಿ ಸೇರಿದಂತೆ ಇನ್ನಿತರ ಪೆÇಲೀಸ್ ಅಧಿಕಾರಿಗಳು. ಸಮಾಜದ ಮುಖಂಡರು ಉಪಸ್ಥಿತರಿದ್ದರು.






















