Home ಜಿಲ್ಲೆ ಕಲಬುರಗಿ ಶಾಂತಿ-ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ : ಸಿಪಿಐ ಲಖನ್ ಮಸಗೂಪ್ಪಿ

ಶಾಂತಿ-ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ : ಸಿಪಿಐ ಲಖನ್ ಮಸಗೂಪ್ಪಿ

ಅಫಜಲಪುರ:ಮೇ.25: ಬರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಸಂಕೇತವಾಗಿ ಆಚರಿಸಲು ಅಫಜಲಪುರ ಪೆÇಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಪೆÇಲೀಸ್ ಅಧಿಕಾರಿಗಳು ಭಾಗವಹಿಸಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಹಕಾರ ನೀಡುವ ಭರವಸೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಪಿಎಸ್‍ಐ ಸೋಮಲಿಂಗ ಒಡೆಯರ್,ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೆÇಲೀಸರಿಗೆ ಸಹಕಾರ ನೀಡಬೇಕು. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಡಬಾರದು. ಪರಸ್ಪರ ಗೌರವ ಮತ್ತು ಸಹನಶೀಲತೆಯಿಂದ ಹಬ್ಬವನ್ನು ಆಚರಿಸಬೇಕು,ಎಂದು ಹೇಳಿದರು.
ಸಿಪಿಐ ಲಖನ್ ಮಸಗೂಪ್ಪಿ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಚಿಕ್ಕ ಮಕ್ಕಳು ಹಾಗೂ ಯುವಕರು ತಿಳಿಯದೆ ಏನಾದರೂ ತಪ್ಪು ಮಾಡಿದರೆ ಹಿರಿಯರು ಅವರಿಗೆ ತಿಳುವಳಿಕೆ ಹೇಳಿ ತಡೆಗಟ್ಟಬೇಕು. ಸಣ್ಣ ವಿಚಾರಗಳಿಗೆ ಕಿರಿಕಿರಿ ಮಾಡದೆ, ಸಮಾಜದಲ್ಲಿ ದ್ವೇಷ ಉಂಟಾಗದಂತೆ ಎಲ್ಲರೂ ನಡೆದುಕೊಳ್ಳಬೇಕು,ಎಂದು ಹೇಳಿದರು.
ದಲಿತ ಮುಖಂಡ ಭೀಮರಾಯ ಗೌರ ಮಾತನಾಡಿ ಜಾತಿ-ಧರ್ಮಕ್ಕಿಂತ ಮಾನವೀಯತೆ ದೊಡ್ಡದು. ಸಮಾಜದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ,ಎಂದರು.
ರಾಜು ಬಡದಾಳ ಮಾತನಾಡಿ, ಎಲ್ಲಾ ಜಾತಿ-ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಬಕ್ರೀದ್ ಹಬ್ಬವನ್ನು ಸಹೋದರತ್ವದಿಂದ ಆಚರಿಸೋಣ,ಎಂದು ಹೇಳಿದರು.
ಗುರು ಚಾಂದಕವಟೆ ಮಾತನಾಡಿ, “ನಮ್ಮ ನಾಡು ಶರಣರ ನಾಡು, ಸಂತರ ನಾಡು. ಹಿಂದೂ-ಮುಸ್ಲಿಂ ಅಣ್ಣ ತಮ್ಮಂದಿರಂತೆ ಬದುಕಬೇಕು. ಸಮಾಜದಲ್ಲಿ ಯಾವುದೇ ಭೇದಭಾವಕ್ಕೆ ಅವಕಾಶ ಇರಬಾರದು,ಎಂದು ಹೇಳಿದರು.
ಮಂಜೂರು ಪಟೇಲ್ ಮಾತನಾಡಿ, “ಮೊಹಮ್ಮದ್ ಪೈಗಂಬರ್ ಅವರು ಸುಮಾರು 1400 ವರ್ಷಗಳ ಹಿಂದೆಯೇ ಶಾಂತಿ, ಮಾನವೀಯತೆ ಹಾಗೂ ಸಮಾನತೆಯ ಸಂದೇಶ ನೀಡಿದ್ದಾರೆ,ಎಂದು ತಿಳಿಸಿದರು.
ಮಕಬುಲ್ ಪಟೇಲ್ ಮಾತನಾಡಿ ಹಬ್ಬದ ವೇಳೆ ಮತ್ತೊಬ್ಬರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆದುಕೊಳ್ಳುತ್ತೇವೆ,ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಂತೇಶ ಬಳೂಂಡಗಿ, ಶಂಕು ಮ್ಯಾಕೇರಿ, ಚಂದ್ರಶೇಖರ ಕರಜಗಿ, ರಾಜು ಆರೇಕಾರ, ಮಹಾನಿಂಗ ಅಂಗಡಿ, ಪ್ರವೀಣ್ ಕಲ್ಲೂರ, ಬಾಗಪ್ಪ ಕೊಳ್ಳಿ ಸೇರಿದಂತೆ ಅನೇಕ ಗಣ್ಯರು ಹಾಗೂ ಪೆÇಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.