ಶಾಂತಿ ಮತ್ತು ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ:ಸಿಪಿಐ

ತಾಳಿಕೋಟೆ:ಜೂ.೫: ಬರಲಿರುವ ದಿ. ೭ ಶನಿವಾರರಂದು ಜರುಗಲಿರುವ ಜಾಗತಿಕವಾಗಿ ಮುಸ್ಲಿಂ ಸಮೂದಾಯದಿಂದ ಆಚರಿಸಲಾಗುತ್ತಿರುವ ಬಕ್ರೀದ್ ಹಬ್ಬ ಇದು ವಾರ್ಷಿಕ ಹಬ್ಬವಾಗಿದ್ದರೂ ತ್ಯಾಗದ ಹಬ್ಬವಾಗಿ ಪರಿಣಮಿಸಿದೆ ಈ ಹಬ್ಬವನ್ನು ಆಚರಿಸುವ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಬೇಕೆಂದು ಸಿಪಿಐ ಮಹ್ಮದಪಶುಉದ್ದೀನ ಅವರು ನುಡಿದರು.
ಬುಧವಾರರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಕುರಿತು ಕರೆಯಲಾದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಉಪಸ್ಥಿತ ಹಿಂದೂ-ಮುಸ್ಲಿA ಬಾಂದವರಿಗೆ ತಿಳುವಳಿಕೆ ನೀಡುತ್ತಿದ್ದ ಅವರು ಶಾಂತಿ ಇದ್ದಲ್ಲಿ ಅಭಿವೃದ್ದಿಗೆ ಅವಕಾಶವಿದೆ ಶಾಶ್ವತವಾಗಿ ಇರುವಂತಹ ನಿವೇಲ್ಲರೂ ಎಂದಿನAತೆ ಸಹ ಬಾಳ್ವೆಯಿಂದ ಮುಂದುವರೆಯಬೇಕೆAದರು. ತ್ಯಾಗದ ಹಬ್ಬವಾದ ಬಕ್ರೀದ್ ಹಬ್ಬ ಪ್ರವಾದಿ ಇಬ್ರಾಹಿಂ ಅವರ ಮಗನ ತ್ಯಾಗವನ್ನು ಸ್ಮರಿಸುತ್ತದೆ ಮತ್ತು ಪವಿತ್ರ ನಗರವಾದ ಮೆಕ್ಕಾಗೆ ಹಜ್ಜ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ ಇದನ್ನು ಅರೀತು ಮುಸ್ಲಿಂ ಬಾಂದವರು ನಡೆಯಬೇಕೆಂದರು. ಯಾವುದೇ ತರಹದ ಅಹಿತಕರ ಘಟನೆಗಳು ಜರುಗಬಾರದೆಂಬ ಉದ್ದೇಶದಿಂದ ಇಂದು ಶಾಂತಿ ಸಭೆಯನ್ನು ಕರೆಯಲಾಗಿದೆ ಎಲ್ಲರೂ ಈ ಹಬ್ಬದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಬೇಕೆಂದರು. ಹಬ್ಬ ಆಚರಣೆ ಕುರಿತು ತಾಳಿಕೋಟೆ ಪಟ್ಟಣದಲ್ಲಿ ಯಾವ ಯಾವ ಸ್ಥಳಗಳಲ್ಲಿ ನಮಾಜ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ ಎಂಬುದರ ಕುರಿತು ವಿವರಣೆ ಪಡೆದ ಅಧಿಕಾರಿಗಳು ಶಾಂತಿವAತರಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನೆಮ್ಮದಿಯಿಂದ ಆಚರಣೆ ಮಾಡಿಕೊಳ್ಳಿ ಕಿಡಿಗೇಡಿತನಕ್ಕೆ ಅವಕಾಶ ನೀಡದೇ ಶಾಂತಿ ಕಾಪಾಡಲು ಮುಂದಾಗಿ ಎಂದ ಅವರು ಜನದಟ್ಟನೆಯಲ್ಲಿ ಮಾಸ್ಕನ್ನು ಧರಿಸಿಕೊಳ್ಳುವ ಕಾರ್ಯ ಮಾಡಿ ಎಂದು ಹೇಳಿದರಲ್ಲದೇ ಈಗಾಗಲೇ ಯಾವುದೇ ತರಹದ ಸಾಗಾಣಿಕೆಯಾಗಬಾರದೆಂಬ ಉದ್ದೇಶದಿಂದ ತಾಳಿಕೋಟೆ ಪಟ್ಟಣದ ಈ ಭಾಗದಲ್ಲಿ ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗುತ್ತಿದೆ ಯಾವುದೇ ತರಹದ ಘಟನೆ ಜರುಗಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಕಾರಣ ಎಲ್ಲರೂ ಏಚ್ಚರದಿಂದ ತಮ್ಮ ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ನಡೆಯಬೇಕೆಂದರು.
ಇನ್ನೋರ್ವ ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐ ರಾಮನಗೌಡ ಸಂಕನಾಳ ಅವರು ಮಾತನಾಡಿ ಮುಸ್ಲಿಂ ಸಮೂದಾಯದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ ಈ ಪಟ್ಟಣದಲ್ಲಿಯ ಕಳೆದ ೩ ವರ್ಷಗಳಿಂದಲೂ ೩ಹಬ್ಬಗಳ ಆಚರಣೆಯನ್ನು ನಾನೂ ನೋಡಿದ್ದೇನೆ ಈ ಹಿಂದಿನAತೆಯೇ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಎಲ್ಲರೊಂದಿಗೆ ಪ್ರೀತಿ ಪ್ರೆಮದೊಂದಿಗೆ ಬರೆತು ಹಬ್ಬಗಳನ್ನು ಆಚರಿಸಿಕೊಂಡು ಬರಬೇಕು ಈಗಾಗಲೇ ಈ ಕುರಿತು ಕೆಲವೆಡೆ ಪೊಲೀಸ್ ಪಾಯಿಂಟ್‌ಗಳನ್ನು ಹಾಕಲಾಗುತ್ತದೆ ಕಾರಣ ಎಲ್ಲ ಕೋಮಿನವರು ಈ ಹಬ್ಬದಲ್ಲಿ ಪಾಲ್ಗೊಂಡು ಎಂದಿನAತೆ ಸೌಹಾರ್ದತಾ ಭಾವನೆಯೊಂದಿಗೆ ಸಾಗಬೇಕೆಂದರು.
ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ಹಬ್ಬಗಳಲ್ಲಿ ಮುನ್ನೇಚ್ಚರಿಕೆ ಕುರಿತು ಎಂದಿನAತೆ ಇಂದು ಶಾಂತಿ ಸಭೆ ಕರೆಯಲಾಗಿದೆ ಬಕ್ರೀದ್ ಹಬ್ಬ ಕುರಿತು ಕರೆದಂತಹ ಈ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡುವಂತವರಾಗಿದ್ದೇವೆ ಸುರುಕುಂಬ ಅಂತಹ ಪೇವನ್ನು ಸಹ ಎಲ್ಲರೂ ಸೌಹಾರ್ದತೆ ಭಾವನೆಯಿಂದ ಎಲ್ಲರೂ ಕುಡಿದು ಸಹೋದರ ಭಾವನೆಯನ್ನು ಎಂದಿನAತೆ ಮೂಡಿಸಿಕೊಳ್ಳುತ್ತಾ ಸಾಗುತ್ತೇವೆಂದರು.
ಇನ್ನೋರ್ವ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ, ಇಮಾಮಸಾಬ ಕಾಳಗಿ, ಜಾವೇದ ಕೇಂಭಾವಿ, ಪೀರಮಹ್ಮದ ಖಾಜಿ, ಅವರು ಮಾತನಾಡಿ ತಾಳಿಕೋಟೆ ಪಟ್ಟಣದಲ್ಲಿ ೩ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಶಾಹೀದಗಾ ದಲ್ಲಿ, ಅಂಜುಮನ್ ಇದ್ಗಾದಲ್ಲಿ, ಮಿಲತ್‌ನಗರ ಮೈಧಾನದಲ್ಲಿ ಪ್ರಾರ್ಥನಾ ಕಾರ್ಯವು ನಡೆದು ಬಕ್ರೀದ್ ಹಬ್ಬದ ಆಚರಣೆ ಕುರಿತು ಈ ಹಿಂದಿನಿAದ ಸಾಗಿಬಂದAತಹ ವಿವರಣೆಯನ್ನೂ ಸಹ ಈ ಸಮಯದಲ್ಲಿ ನೀಡಿ ಹಬ್ಬದ ಆಚರಣೆಯ ಕುರಿತು ತಿಳಿಸಲಾಗುತ್ತದೆ ಎಂದರು.
ಈ ಸಮಯದಲ್ಲಿ ಮೋದಿನಸಾಬ ನಗಾರ್ಚಿ, ಶಪೀಕ್ ಇನಾಮದಾರ, ಇಮಾಮಸಾಬ ಕಾಳಗಿ, ಶಶಿಧರ ಡಿಸಲೆ, ಮೈಹಿಬೂಬ ಕೇಂಭಾವಿ, ಅಬುಬಕರ ಲಾಹೋರಿ, ನಬಿ ಲಾಹೋರಿ, ನಿಸಾರ ಬೇಪಾರಿ, ಹುಸೇನಬಾಷಾ ಜಮಾದಾರ, ಬಸವರಾಜ ಬಿರಾದಾರ, ಎಂ.ಎA.ಬೇಪಾರಿ, ಎನ್.ಆಯ್.ಕಡು, ಜೆ.ಎಂ.ಕೇAಭಾವಿ, ಜೆ.ಎನ್.ಬಿಳವಾರ, ಐ.ಎಲ್.ಡಿಗ್ಗಿ, ಬಸ್ಸು ಮಾದರ, ಮೊದಲಾದವರು ಉಪಸ್ಥಿತರಿದ್ದರು.
ಬಸವರಾಜ ಹಡಗಲಿ ಸ್ವಾಗತಿಸಿ ನಿರೂಪಿಸಿದರು. ಸಿದ್ದನಗೌಡ ಬಿರಾದಾರ ವಂದಿಸಿದರು.