ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ:ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ: ಮೇ.29: ಯಾವುದೇ ಜಾತಿ ಧರ್ಮದಲ್ಲಿ ಬರುವ ಹಬ್ಬಗಳನ್ನು ಅವರವರ ಆಚಾರ ವಿಚಾರಕ್ಕೆ ಧಕ್ಕೆ ಬರದಂತೆ ಶಾಂತಿಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಕ್ರೀದ ಹಬ್ಬದ ಆಚರಣೆ ನಿಮಿತ್ಯ ಅನಧಿಕೃತ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ತಡೆಗಟ್ಟಲು ಕುರಿತು ಮುಂಜಾಗ್ರತೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್.7 ರಂದು ಆಚರಿಸಲ್ಪಡುವ ಆಚರಿಸಲ್ಪಡುವ ಬಕ್ರೀದ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ಅಲ್ಲದೇ ಒಂಟೆಗಳ ವಧೆ ಮತ್ತು ಸಾಗಾಣಿಕೆಯನ್ನು ಸಹ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೂ ಔರಾದ ತಾಲ್ಲೂಕಿನ ವನಮಾರಪಳ್ಳಿ ಮತ್ತು ಕಮಲನಗರ ತಾಲ್ಲೂಕಿನ ಕಮಲನಗರನಲ್ಲಿ ಹಾಗೂ ಹುಲಸೂರ ತಾಲ್ಲೂಕಿನ ಹುಲಸೂರ ಚೆಕ್ ಪೆÇೀಸ್ಟ ಹಾಗೂ ಬೀದರ ತಾಲ್ಲೂಕಿನ ಶಹಾಪೂರ ಗೋಟನಲ್ಲಿ ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಿ ಜೂನ.1 ರಿಂದ 7 ರವರೆಗೆ ಜಾನುವಾರುಗಳ / ಒಂಟೆಗಳ ಸಾಗಾಣಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪೆÇೀಲೀಸ್ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಕ್ರೀದ್ ಹಬ್ಬದ ದಿನದಂದು ಉಂಟಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ನಗರದ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಿದರು. ಪಿಂಜರಾಪೆÇೀಲ್ ಯೋಜನೆ ಅಡಿ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರನ್ವಯ ಹಸು, ಕರು, ಎತ್ತು ಇವುಗಳನ್ನು ಒಟ್ಟಾರೆ ವಧೆ ಮಾಡುವಂತಿಲ್ಲ. 13 ವರ್ಷಗಳ ಎಮ್ಮೆ, ಕೋಣಗಳನ್ನು ಪಶುವೈದ್ಯಾಧಿಕಾರಿಗಳ ದೃಢೀಕರಣದೊಂದಿಗೆ ಮಾತ್ರ ವಧೆ ಮಾಡಬಹುದಾಗಿದೆ. ತಪ್ಪಿದಲ್ಲಿ ಮೊದಲ ಸಲಕ್ಕೆ ರೂ.50,000 ದಿಂದ 5,00,000/- ದಂಡ ಇಲ್ಲವೇ 3 ವರ್ಷದಿಂದ 7 ವರ್ಷಗಳ ಜೈಲು ಶಿಕ್ಷೆ ಹಾಗೂ 2ನೇ ಸಲಕ್ಕೆ 1,00,000 ರಿಂದ 10,00,000/- ದಂಡ ಇಲ್ಲವೇ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ ಎಂದು ತಿಳಿಸಿದರು.
ಜಾನುವಾರು ಸಾಗಾಣಿಕೆಯನ್ನು ಮಾಡುವಾಗ, ವಾಹನದ ಜೊತೆಗೆ ಜಾನುವಾರುಗಳ ಮಾಲೀಕರ ವಿಳಾಸ, ಎಲ್ಲಿಗೆ ಸಾಗಾಣಿಕೆ ಮಾಡಲಾಗುವುದು ಎಂಬುದರ ವಿವರ ಪಶುವೈದ್ಯರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರಗಳನ್ನು ಹೊಂದಿರಬೇಕು ಹಾಗೂ ವಾಹನದಲ್ಲಿ 100 ಕೆ.ಜಿ. ಕೆಳಗಿನ ಜಾನುವಾರುಗಳಿಗೆ 1×1.5 ಚ.ಮೀ. ಮತ್ತು 100 ಕೆ.ಜಿ. ಮೇಲಿನ ಜಾನುವಾರುಗಳಿಗೆ 1×2 ಚ.ಮೀ. ಸ್ಥಳಾವಕಾಶ ಒದಗಿಸಿ ಕೊಡಬೇಕು / ಇಲ್ಲವಾದಲ್ಲಿ prevention of Cruelty to animals Act ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರಾದ ನರಸಪ್ಪ ಎ. ಡಿ, ಪಿಎಸ್‍ಐ ತಸ್ಲೀಮಾ, ಆರ್.ಟಿ.ಒ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.