
ಚಿಂಚೋಳಿ;ಫೆ.6: ತಾಲೂಕು ಗಡಿಭಾಗವಿರುವುದರಿಂದ ಅಪರಾಧ ಪ್ರಕರಣಗಳು,ಅಕ್ರಮ ಚಟುವಟಿಕೆಗಳು,ಕಳ್ಳತನಗಳು ಪತ್ತೆ ಹಚ್ಚಲು ಸಿಸಿ ಕ್ಯಾಮೆರಾಗಳು ಪೋಲಿಸರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧೀಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರಮುಖ ಸ್ಥಳಗಳು ಮತ್ತು ಜನಬೀಡು ಪ್ರದೇಶಗಳಲ್ಲಿ,ಪ್ರಮುಖ ವೃತ್ತಗಳು ಗುರುತಿಸಿ ಓಟ್ಟಾರೆ 10ಕಡೆಗಳಲ್ಲಿ 36ಸಿಸಿ ಕ್ಯಾಮರಾಗಳು ಅಳವಡಿಕೆ ಪ್ರಗತಿ ಕಾಮಗಾರಿಗಳು ಪರೀಶೀಲಿಸಿ ಸುದ್ದಿಗಾರರೋಂದಿಗೆ ಮತನಾಡಿದ ಅವರು,ಗೃಹ ಇಲಾಖೆ ವತಿಯಿಂದ ರಸ್ತೆ ಸುರಕ್ಷಾತ ನಿಧಿ ಯೋಜನೆ (ಸಿಟಿಆರ್‍ಎಸ್) ಅಡಿಯಲ್ಲಿ ಸಿಸಿ ಕ್ಯಾಮೆರಾ ಕಾಮಗಾರಿ ಪ್ರಗತಿಯಲ್ಲಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳು ಗುರುತಿಸಿ ನೂತನ ತಾಂತ್ರಿಕವುಳ್ಳ ಡೇ-ನೈಟ್ ಸ್ವಚ್ಚವಾಗಿ ಕಾಣುವ ಹೈ ಕ್ವೂಲೀಟಿವುಳ್ಳ ಸಿಸಿ ಕ್ಯಾಮರಾಗಳು ಅಂದಾಜು 100-200ಮೀಟರ್‍ವರೆಗೆ ಸ್ವಷ್ಟವಾಗಿ ಕಾಣುವ ಕ್ಯಾಮರಾಗಳು ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ,ಎತ್ತರ ಹೆಚ್ಚಿಸಬೇಕು ಕಡಿಮೆ ಮಾಡಬೇಕು ಎಂಬುವುದು ಮತ್ತು ಸಿಸಿ ಕ್ಯಾಮೆರಾಗಳಲ್ಲಿ ರಸ್ತೆಗೆ ಹೋಗುವ ವಾಹನಗಳ ನಂಬರ್ ಪ್ಲೇಟ್ ಚನ್ನಾಗಿ ಕಾಣುವಂತೆ ಕಾಮಗಾರಿ ನಡೆಸುವಂತೆ ಈಗಾಗಲೇ ಕಾಮಗಾರಿ ವಿಕ್ಷಿಸಿ ನಿರ್ಧೆಶನ ನೀಡಿದ್ದೇನೆ ಎಂದು ಹೇಳಿದರು.
ಡಿವೈಎಸ್ಪಿ ಸಂಗಮನಾಥ ಹೀರೇಮಠ,ಸಿಪಿಐ ಕಪಿಲದೇವ,ಪಿಎಸ್‍ಐ ಗಂಗಮ್ಮ ಜೀನಕೇರಿ,ಪಿಎಸ್‍ಐ ಅಮರ ಕುಲಕರ್ಣಿ ಮತ್ತು ಶಿವಶಂಕರ ಸುಭೇದಾರ,ಮಿರಿಯಾಣ ಪಿಎಸ್‍ಐ ಮಡಿವಾಳಪ್ಪ ಬಾಗೋಡಿ,ಮಲ್ಲಿಕಾರ್ಜುನ ಕಲಬುರ್ಗಿ ಸೇರಿದಂತೆ ಪೋಲಿಸರು ಸಿಬ್ಬಂದಿಗಳು ಇದ್ದರು.



























