
ಕಲಬುರಗಿ,ನ.14-ಮನೆ ಬಾಗಿಲು ಮುರಿದು 2.70 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಜಿಡಿಎ ಧರಿಯಾಪೂರ ಲೇಔಟ್‍ನಲ್ಲಿ ನಡೆದಿದೆ.
ಶಿವಲೀಲಾ ಮಂಜುನಾಥ ಗೋಲಗೇರಿ ಎಂಬುವವರ ಮನೆ ಬೀಗ ಮುರಿದು ಕಳ್ಳರು ಮನೆಯಲ್ಲಿದ್ದ 1.50 ಲಕ್ಷ ರೂ.ನಗದು, 1 ಲಕ್ಷ ರೂ.ಮೌಲ್ಯದ 5 ಗ್ರಾಂ.ಬಂಗಾರದ ಎರಡು ಸುತ್ತುಂಗುರ, 15 ಸಾವಿರ ರೂ.ಮೌಲ್ಯದ 15 ತೊಲೆ ಬೆಳ್ಳಿ ಆಭರಣ, 5 ಸಾವಿರ ರೂ.ಮೌಲ್ಯದ 5 ತೊಲೆ ಬೆಳ್ಳಿ ನಾಣ್ಯ ಸೇರಿ 2.70 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
1.60 ಲಕ್ಷ ರೂ.ಮೊತ್ತದ ಪಡಿತರ ಅಕ್ಕಿ ಜಪ್ತಿ
ಕಲಬುರಗಿ,ನ.14-ಸಾರ್ವಜನಿಕ ವಿತರಣೆಯ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕ ನವೀನ್ ಎಂ, ಫರಹತಾಬಾದ ಪೊಲೀಸ್ ಠಾಣೆ ಪಿಐ ಹುಸೇನ್ ಬಾಷಾ, ಎಎಸ್‍ಐ ರಾಮು ರಾಠೋಡ್, ಸಿಬ್ಬಂದಿಗಳಾದ ರಘುವೀರ ತಿವಾರಿ, ಸಾಜಿದ್ ಪಾಷಾ ಅವರು ದಾಳಿ ನಡೆಸಿದ್ದಾರೆ.
ಫರಹತಾಬಾದದಿಂದ ಕಲಬುರಗಿ ಕಡೆಗೆ ಗೂಡ್ಸ್ ವಾಹನದಲ್ಲಿ ಅಕ್ಕಿ ಸಾಗಿಸುತ್ತಿದ್ದ ವೇಳೆ ನಂದಿಕೂರ ತಾಂಡಾ ಹತ್ತಿರ ಗೂಡ್ಸ್ ವಾಹನವನ್ನು ಜಪ್ತಿ ಮಾಡಿದ್ದಾರೆ. ಗೂಡ್ಸ್ ವಾಹನದಲ್ಲಿ 1.60 ಲಕ್ಷ ರೂ.ಮೊತ್ತದ 40 ರಿಂದ 45 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದ್ದು, ಈ ಸಂಬಂಧ ಪಡಿತರ ಅಕ್ಕಿ ಖರೀದಿಸುತ್ತಿದ್ದ ಶರಣು ಅವರಾದಿ, ಪಡಿತರ ಅಕ್ಕಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಫರಹತಾಬಾದ ಗ್ರಾಮದ ಸುಶೀಲಾ ಅಲಿಯಾಸ್ ಸುಸಲಾಬಾಯಿ ಮತ್ತು ಗೂಡ್ಸ್ ವಾಹನ ಚಾಲಕ ಇಕ್ಬಾಲ್ ಕಾಲೋನಿಯ ಮಹಿಬೂದ್ದೀನ್ ತಂದೆ ಅನ್ಸರ್ ಖಾನ್ ಎಂಬುವವರ ವಿರುದ್ಧ ಕಲಂ 3 ವiತ್ತು 7 ಅಗತ್ಯ ವಸ್ತುಗಳ ಕಾಯ್ದೆ ಅನುಸಾರ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























