ಟ್ಯಾಕ್ಟರ್ ಜಗ್ಗಾಟ ಸ್ಪರ್ಧೆ ಏರ್ಪಡಿಸಿದ ಆಯೋಜಕರ ಮೇಲೆ ಪ್ರಕರಣ ದಾಖಲು

ಬಸವನ ಬಾಗೇವಾಡಿ: ಅ.25:ಪಟ್ಟಣದಲ್ಲಿ ಗೆಳೆಯರ ಬಳಗ ಹಾಗೂ ಕರವೇ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡ ಟ್ಯಾಕ್ಟರ್ ಜಗ್ಗುವ ಸ್ಪರ್ಧೆಯಲ್ಲಿ ಕಟ್ಟಡದ ಮೇಲೆ ಕುಳಿತು ಸ್ಪರ್ಧೆ ವೀಕ್ಷಿಸುತ್ತಿದ್ದ ವೇಳೆ ಪತ್ರಾಸ್ ಖುಷಿದು ಇವರು ಯುವಕರು ಮೇಲಿಂದ ಬಿದ್ದು ಗಾಯಗೊಂಡ ಘಟನೆ ಸಂಬಂಧಿಸಿ ದಂತೆ ಟ್ರ್ಯಾಕ್ಟರ್ ಸ್ಪರ್ಧೆ ಆಯೋಜಕರ ಮೇಲೆ ಪ್ರಕರಣ ದಾಖಲಾಗಿವೆ
ಟ್ರ್ಯಾಕ್ಟರ್ ಸ್ಪರ್ಧೆ ಆಯೋಜನೆಗೆ ಪೆÇಲೀಸ ಇಲಾಖೆ ಅನುಮತಿ ನೀಡದೆ ಸ್ಪರ್ಧೆ ಆಯೋಜಿಸದಂತೆ ಇಲಾಖೆಯಿಂದ ನೋಟಿಸ್ ನೀಡಿದರು ನಿರ್ಲಕ್ಷಿಸಿ ಪಟ್ಟಣದ ಗೆಳೆಯರ ಬಳಗ ಕರವೇ ಮುಖಂಡರು ಟ್ರಾಕ್ಟರ್ ಸ್ಪರ್ಧೆ ಆಯೋಜಿಸಿದ ಕಾರಣ ವೀಕ್ಷಣೆಗೆ ಬಂದಿದ್ದ ಯುವಕರು ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡರು. ಅವಗಡಕ್ಕೆ ಕಾರಣರಾದ ಆಯೋಜಕರಾದ ಪುರಸಭೆ ಉಪಾಧ್ಯಕ್ಷ ಹಾಗೂ ಕರ್ವೆ ಮುಖಂಡ ಅಶೋಕ ಹಾರಿವಾಳ ಸಂಗಮೇಶ ಹಾರಿವಾಳ ಸಚಿನ್ ಹಾರಿವಾಳ ದಾನೇಶ್ ಬಡಿಗೇರ ಗುರುವಂದಾಲ ಹಾಗೂ ಇತರರ ಮೇಲೆ ಗಾಯಗೊಂಡವರ ಪರವಾಗಿ ಒಂದು ದೂರು ಮತ್ತು ಪೆÇಲೀಸ್ ಇಲಾಖೆಯಿಂದ ಸ್ವಯಂ ಪ್ರೇರಿತವಾಗಿ ಸರ್ಕಾರಿ ದೂರು ಸೇರಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೆÇಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ