ಕಾರು ಡಿಕ್ಕಿ; ಆಟೊ ಚಾಲಕ ಸಾವು

ಕಲಬುರಗಿ,ಸೆ.4-ಆಟೊಗೆ ಕಾರು ಡಿಕ್ಕಿ ಹೊಡೆದು ಆಟೊ ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಸಂಚಾರ ಪೊಲೀಸ್ ಠಾಣೆ-1ರ ವ್ಯಾಪ್ತಿಯ ಸೋಮನಾಥಹಳ್ಳಿ ಸಮೀಪದ ಪೆಟ್ರೋಲ್ ಪಂಪ್ ಹತ್ತಿರ ನಡೆದಿದೆ.
ಸೋಮನಾಥಹಳ್ಳಿಯ ಮರೆಪ್ಪ ಮುಗಳಗೈ ಮೃತಪಟ್ಟವರು.
ಇವರು ತಮ್ಮ ಅಪೆ ಆಟೊ ಚಾಲನೆ ಮಾಡಿಕೊಂಡು ಸೋಮನಾಥಹಳ್ಳಿಯಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.