
ಆನೇಕಲ್. ಮೇ. ೨೭- ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು ಜೊತೆಗೆ ಕ್ರೀಡೆ. ಪ್ರತಿಭಾ ಕಾರಂಜಿ. ಬಿಸಿಯೂಟ ಯೋಜನೆ. ಉಚಿತ ಪೋತ್ಸಾಹ ಯೋಜನೆಗಳು. ಕನ್ನಡ ಮತ್ತು ಇಂಗ್ಲೀಷ್ ಭೋಧನಾ ಮಾದ್ಯಮ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದು ಪೋಷಕರು ತಪ್ಪದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಚಂದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ ಮನವಿ ಮಾಡಿದರು.
ಅವರು ಬನಹಳ್ಳಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಚಂದಾಪುರ ಕ್ಲಸ್ಟರ್ ಮಟ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ. ದಾಖಲಾತಿ ಜಾಗೃತಿ ಜಾಥ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು. ಈವತ್ತಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲಿ ದೊರೆಯುವಂತಹ ಎಲ್ಲಾ ರೀತಿಯಾದ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಂದಾಪುರ ಕ್ಲಸ್ಟರ್ ಮಟ್ಟದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾದ ಕಲಿಕಾ ಸಾಮಾಗ್ರಿಗಳನ್ನು ಸ್ವಂತ ಹಣದಿಂದ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಇಓ ಗುರುಮೂರ್ತಿ. ಇಸಿಓ ವಾಣಿಶ್ರೀ. ಸಿಆರ್ ಪಿಚಂದ್ರಶೇಖರ್. ಸನ್ ಸೇರಾ ಪೌಂಡೇಶನ್ ನ ಈರಪ್ಪ. ಸಾವಿತ್ರೀ ಬಾಯಿ ಪುಲೆ ಸಂಘದ ಸರೋಜಮ್ಮ. ರೂಪ ಸರಳ. ಓಬಿಎಲ್ ಎಪ್ ನ ಇಂದಿರಾ ಪ್ರಕಾಶ್. ಕಾರ್ತಿಕ್. ಮುಖ್ಯ ಶಿಕ್ಷಕರಾದ ಸುಗುಣ. ದೀಪ. ಲತಾ. ಗೋಪಮ್ಮ. ಭಾರತಿ. ವಿದ್ಯಾವತಿ. ನಾಗರತ್ನ. ಹಾಗೂ ಸಹ ಶಿಕ್ಷಕರು ಬಾಗವಹಿಸಿದ್ದರು





























