
ಕಲಬುರಗಿ,ಡಿ.6: ವಿದ್ಯಾರ್ಥಿಗಳಿಗಳು ಉತ್ತಮ ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆಯುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಅಫಜಲಪುರ ತಾಲೂಕಿನ ಮಣ್ಣೂರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉಪನಿರ್ದೇಶಕ ಸುರೇಶ ಅಕ್ಕಣ್ಣ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು. ಉಪನ್ಯಾಸಕರಿಗೂ, ಕಾಲೇಜಿಗೂ, ನಿಮ್ಮ ತಂದೆ ತಾಯಿಗೂ ಕೀರ್ತಿ ತನ್ನಿ. ಪರೀಕ್ಷೆಗೆ ಕೇವಲ ಮೂರು ತಿಂಗಳ ಉಳಿದಿದ್ದು ಸ್ಮಾರ್ಟ್ ವರ್ಕ್ ಮಾಡಿ ಅಭ್ಯಾಸದ ಮೇಲೆ ಹೆಚ್ಚು ಮನಸ್ಸು ಕೇಂದ್ರೀಕರಣ ವಹಿಸಿ ಪಾಠ ಪ್ರವಚನಗಳನ್ನು ಗ್ರಹಿಸಿಕೊಳ್ಳಬೇಕು ಉತ್ತಮ ಫಲಿತಾಂಶ ತಂದು ಕಾಲೇಜಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಕಲಬುರಗಿ ನಗರದ ದಿಶಾ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜೂರಿ ಮಾತನಾಡಿ, ಶಿಕ್ಷಣದಿಂದ ಮಾತ್ರ ನಿಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಅದಕ್ಕಾಗಿ ಜೀವನದಲ್ಲಿ ಕಷ್ಟಪಟ್ಟು ಓದಿ ಜೀವನ ರೂಪಿಸಿಕೊಳ್ಳಬೇಕು ಈ ಸಲ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ 11, 000 ರೂ ನಗದು ಬಹುಮಾನ ಕೊಡಲಾಗುವುದು ಎಂದು ಹೇಳಿ ಪೆÇ್ರೀತ್ಸಾಹದಾಯಕ ಮಾತುಗಳನ್ನಾಡಿದರು. ಪ್ರಾಶುಪಾಲರ ಸಂಘದ ಅಧ್ಯಕ್ಷ ಬಸವರಾಜ ಬಿರಾಜದಾರ,ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಸನದಿ ಮಾತನಾಡಿದರು.ಗ್ರಾಮದ ಗಣ್ಯರಾದ ಗಡ್ಡೆಪ್ಪ ಬಸನಕರ್ ಕಾಲೇಜಿನ ಉಪನ್ಯಾಸಕರುಗಳು ಹಾಗೂ ಉಪಸ್ಥಿತರಿದ್ದರು.































