ಜು.೨ ನಂದಿ ಬೆಟ್ಟದಲ್ಲಿ ಸಚಿವ ಸಂಪುಟದ ಸಭೆ

ಕೋಲಾರ,ಜೂ,೩೦- ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಜುಲೈ ೨ ರಂದು ಆಯೋಜಿಸಿರುವ ಸಚಿವ ಸಂಪುಟ ಸಭೆಯ ಅಜೆಂಡಾದಲ್ಲಿ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ನಿರಂತರ ಬರಗಾಲದ ಕಳಂಕಕ್ಕೆ ಗುರಿಯಾಗಿರುವ ಕುರಿತಾದ ವಿಷಯವನ್ನು ಸೇರ್ಪಡೆ ಮಾಡಿ ಪರಿಹಾರದ ಕಂಡು ಕೊಳ್ಳುವ ಚರ್ಚೆಗಳಾಗ ಬೇಕು. ಜನಪರವಾದ ಮಹತ್ವ ತೀರ್ಮಾನವನ್ನು ಪ್ರಕಟಿಸ ಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಅಂಜನೇಯರೆಡ್ಡಿ ಆಗ್ರಹ ಪಡೆಸಿದರು.


ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈಗಾಗಲೆ ಮುಖ್ಯ ಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧವಾಗಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಅವಿಭಜಿತ ಜಿಲ್ಲೆಂiiಲ್ಲಿ ಕಳೆದ ಮೂರು ದಶಕಗಳಿಂದ ಶಾಶ್ವತ ನೀರಾವರಿಗಾಗಿ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆಯಾದರೂ ನಿರೀಕ್ಷಿತ ಪರಿಹಾರವು ಇನ್ನು ಸಿಗದಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾಧಿಸಿದರು,


ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೬೯ ದಿನ ಹಾಗೂ ಕೋಲಾರದಲ್ಲಿ ೩೬೦ ಕ್ಕೂ ಹೆಚ್ಚು ದಿನಗಳು ನಿರಂತರವಾಗಿ ಪ್ರತಿಭಟನಾ ಧರಣಿ, ಪಾದಯಾತ್ರೆ , ಕೋಲಾರ ಬಂದ್, ಹೆದ್ದಾರಿ ಬಂದ್, ಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ನಮ್ಮ ಮೇಲೆ ಹಲವಾರು ಪೊಲೀಸ್ ಕೇಸ್‌ಗಳನ್ನು ಹಾಕಿಸಿ ಕೊಂಡಿದ್ದರೂ ಸಹ ಈವರೆಗೆ ಸೂಕ್ತವಾದ ಸ್ಪಂದನೆ ಸಿಗಲಿಲ್ಲ ಇನ್ನು ನಮ್ಮ ಆಳಿವು ಉಳಿವು ಪ್ರಶ್ನೆಯಾಗಿದ್ದು ಶೂನ್ಯ ಫಲಿತಾಂಶ ಕಂಡು ಬಂದಿದೆ ಎಂದು ಬೇಸರ ವ್ಯಕ್ತ ಪಡೆಸಿದರು,


ನಮ್ಮ ಜನಪ್ರತಿನಿಧಿಗಳಿಗೆ ನೀರಾವರಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಹೊರತಾಗಿ ನೀರಾವರಿ ಹೋರಾಟಗಾರರೊಂದಿಗೆ ಮುಖ್ಯ ಮಂತ್ರಿ, ಸಚಿವರು, ಶಾಸಕರುಗಳು ಸಭೆ ಕರೆದು ಚರ್ಚಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮುಖಂಡರು ವಿಫಲರಾಗಿದ್ದಾರೆ. ಸಾರ್ವಜನಿಕರ ಮೂಲಭೂತ ಸೌಲಭ್ಯದಲ್ಲಿ ಪ್ರಮುಖವಾದ ನೀರಿನ ವಿಷಯದ ಬಗ್ಗೆ ಗಂಭೀರ ಚಿಂತನೆಯು ಅವರಿಗೆ ಇಲ್ಲದಿರುವುದು ದುರಾದೃಷ್ಠಕರ ಸಂಗತಿಯಾಗಿದೆ. ವಿವಿಧ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಗಳು, ಪರಿಸರ ಇಲಾಖೆಯ ತಮ್ಮ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಎಲ್ಲರೂ ನೊಣುಚಿಕೊಳ್ಳುವ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆಂದು ವ್ಯಸನ ವ್ಯಕ್ತಪಡಿಸಿದರು,


ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಮೂರು ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿ ಅಂತರ್ಜಲ ಪಾತಳ ಸೇರಿದ್ದು ಕುಡಿಯುವ ನೀರಿಗೂ ತತ್ವಾರ ಬಂದಿದೆ.ಅಂತರ್ಜಲದಲ್ಲಿ ಪ್ಲೋರೈಡ್, ನೈಟ್ರೇಟ್ ಜೂತೆಗೆ ಯುರೇನಿಯಂ ಮತ್ತು ಆರ್ಸೆನಿಕ್ ಎಂಬ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಕಳವಳಕಾರಿಯಾಗಿದೆ. ಇದರಿಂದಾಗಿ ಜನಜನುವಾರುಗಳಿಗೆ ಅನೇಕ ಮಾರಂಣಾತಿಕ ಕಾಯಿಲೆಗಳು ಅನುಭವಿಸ ಬೇಕಾಗ ಬಹುದು ಎಂದು ಧೃಡ ಪಡೆಸಿ ವೈಜ್ಞಾನಿಕ ಸಂಸ್ಥೆಗಳು ಸ್ವಷ್ಟವಾದ ಎಚ್ಚರಿಕೆಯ ವರದಿಯನ್ನು ನೀಡಿದ್ದರೂ ಸಹ ಸಚಿವ ಸಂಪುಟದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಕೊಳ್ಳದೆ ವರದಿಗಳನ್ನು ಕಸದ ಬುಟ್ಟಿಗೆ ಎಸೆದು ನಿರ್ಲಕ್ಷಿಸಿರುವುದು ನೀರಾವರಿ ಹೋರಾಟಗಾರರನ್ನು ಕೆರಳಿಸಿದೆ ಎಂದು ಕಿಡಿ ಕಾರಿದರು,


ಈ ಸಂಬಂಧವಾಗಿ ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಸಭೆ ಸೇರಿ ಚರ್ಚಿಸ ಬೇಕಾಗಿರುವುದು ಪ್ರಮುಖ ಜವಾಬ್ದಾರಿಯಾಗಿದೆ. ಈ ಕುರಿತು ಮೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಶಾಸಕರು ಸಹ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯವಾದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಪ್ರಯತ್ನ ಮಾಡ ಬೇಕಾಗಿದೆ ಎಂದು ಸಲಹೆ ನೀಡಿದರು,


ಪ್ರಶ್ನೆಯೊಂದಕ್ಕೆ ಅವಿಭಜಿತ ಜಿಲ್ಲೆಯ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆಯನ್ನು ರೂಪಿಸಿ ಮಂಜೂರು ಮಾಡಲಾಯಿತು, ಟೆಂಡರ್ ಪ್ರಕ್ರಿಯೆಗಳು ನಡೆದು ಕಾಮಗಾರಿಗಳನ್ನು ಕೈಗೆತ್ತಿ ಕೊಂಡ ನಂತರ ಈ ಯೋಜನೆಯನ್ನು ಇತರೆ ೭ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಕೊನೆಯ ಭಾಗವಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಾಗಿರುವುದು ದುರಾದೃಷ್ಟಕರವಾಗಿದೆ. ೨೪ ಟಿ.ಎಂ.ಸಿ. ನೀರಾವರಿ ಯೋಜನೆ ಇಂದು ೮ ಟಿ.ಎಂ.ಸಿ.ಗೆ ಇಳಿದಿದೆ. ೮ ಸಾವಿರ ಕೋಟಿ ಯೋಜನೆಯು ೨೦ ಸಾವಿರ ಕೋಟಿ ಯೋಜನೆಯಾಗಿ ಪರಿಷ್ಕರಿಸಲಾಗಿದೆ. ನಮಗೆ ಇದ್ಯಾವುದರ ಬಗ್ಗೆ ಆಸಕ್ತಿ ಇಲ್ಲ, ನಮಗೆ ನ್ಯಾಯಾ ಸಿಗುತ್ತದೆ ಎಂಬ ಭರವಸೆಯೂ ಇಲ್ಲವಾಗಿದೆ. ನಮಗೆಬೇಕಾಗಿರುವುದು ನೀರಿನ ಸೌಲಭ್ಯವಷ್ಟೆ ಎಂದರು.


ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿಯ ಕೊಳಚೆ ನೀರನ್ನು ಎರಡು ಬಾರಿ ಪರಿಷ್ಕರಿಸಿ ಶುದ್ದಿಕರಿಸಿ ವಿತರಿಸುವ ನೀರನ್ನು ಮೂರು ಭಾರಿ ಸಂಸ್ಕರಿಸಿ ವಿತರಿಸ ಬೇಕೆಂಬ ಕರಾರು ಇರುವುದನ್ನು ಉಲ್ಲಂಘಿಸಿ ಎರಡು ಭಾರಿ ಮಾತ್ರ ಸಂಸ್ಕರಿಸಿ ವಿತರಿಸುವ ಮೂಲಕ ಸಾರ್ವಜನಿಕರನ್ನು ವಂಚಿಸಲಾಗುತ್ತಿದೆ. ಮೂರು ಭಾರಿಯ ಸಂಸ್ಕರಣೆಯ ಕುರಿತು ಗೊಂದಲ ಸೃಷ್ಠಿಸಿದೆ. ಕೃಷ್ಣ ನದಿ ನೀರಿನಲ್ಲೂ ನಮ್ಮ ಪಾಲು ಇದೆ. ಇವೆಲ್ಲಾವನ್ನು ನಾವುಗಳನ್ನು ಕೇಳುತ್ತೇವೆ ಎಂಬ ಮಾಹಿತಿಯನ್ನು ಅರಿತು ಸಚಿವ ಸಂಪುಟ ಸಭೆ ೧೯ ರಂದು ನಂದಿ ಗಿರಿದಾಮದಲ್ಲಿ ಇರುವುದನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಮೂಲಕ ಪಲಾಯಾನ ಸೂತ್ರವನ್ನು ಪಾಲಿಸಿದೆ ಈಗಾ ಜುಲೈ ೨ ರಂದು ನಂದಿಗಿರಿ ಧಾಮದಲ್ಲಿ ಸಭೆಯನ್ನು ಮತ್ತೆ ಆಯೋಜಿಸಿರುವುದರಿಂದ ಮುಖ್ಯ ಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಿಗೆ ನಮ್ಮ ಮನವಿಯನ್ನು ಅಜೆಂಡಾದಲ್ಲಿ ಸೇರ್ಪಡೆ ಮಾಡಿ ಚರ್ಚಿಸಲು ಅವಕಾಶ ಕಲ್ಪಿಸ ಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು


ಪ್ರಶ್ನೆಯೊಂದಕ್ಕೆ ಜು೧೯ರ ಸಭೆಯನ್ನು ಮುಂದೂಡಿದ ಮಾರನೇ ದಿನವೇ ಮುಖ್ಯ ಮಂತ್ರಿಗಳು ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ವಿವರಗಳನ್ನು ಪಡೆದು ಕೊಂಡಿದ್ದಾರೆ. ಉಪಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ನಡೆಸಿದರು. ಜಲ ನಿಗಮದ ಸಭೆಯನ್ನು ನಡೆಸಿ ವಿವರಗಳನ್ನು ಪಡೆದಿರುವುದು ನಮ್ಮ ಮನವಿಗೆ ಎಚ್ಚತ್ತು ಕೊಂಡು ನಡೆದಿರುವ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.


ಕೆ.ಸಿ.ವ್ಯಾಲಿಯ ನೀರನ್ನು ಎರಡೂ ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ೧೩೬ ಜಿಲ್ಲೆಗಳಿಗೆ ಹಾಗೂ ಎಚ್.ಎನ್.ವ್ಯಾಲಿಯ ಸಂಸ್ಕರಣೆಯ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ೬೦ ಕೆರೆಗಳನ್ನು ತುಂಬಿಸುವ ಯೋಜನೆಯೂ ಕಳೆದ ೫-೬ ವರ್ಷಗಳಿಂದ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ನಾವು ನಿಮ್ಮನ್ನು ಯಾವೂದೇ ರೀತಿಯ ಲೆಕ್ಕಗಳು, ವೆಚ್ಚವನ್ನು ಕೇಳುತ್ತಿಲ್ಲ ನಾವು ಕೇಳುತ್ತಿರುವುದು ನೀರಿನ ಗುಣ ಮಟ್ಟವಾಗಿದೆ. ಕೆ.ಸಿ.ವ್ಯಾಲಿ ನೀರು ೩ನೇ ಹಂತದ ಸಂಸ್ಕರಣೆ ಮಾಡಲು ಡಿ. ನೋಟಿಫೀಕೇಷನ್‌ನಲ್ಲಿ ಕಡ್ಡಾಯಗೊಳಿಸಿದ್ದರೂ ಸಹ ಕಸದ ಬುಟ್ಟಿಗೆ ಹಾಕಿ ಎರಡನೇ ಹಂತದ ಸಂಸ್ಕರಣೆಯಲ್ಲಿ ನೀರನ್ನು ಹರಿಸಲಾಗುತ್ತಿದೆ. ಪರಿಸರ ಇಲಾಖೆಯ ಅಪಾಯದ ಮುಂಸ್ಸೂಚನೆಯ ನೋಟಿಸ್‌ಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ವೈಜ್ಞಾನಿಕ ಸಂಶೋಧನೆ ಸಂಸ್ಥೆಗಳ ವರದಿಗಳನ್ನು ತಿರಸ್ಕರಿಸಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು,


ಕೆರೆಗಳನ್ನು ಅಭಿವೃದ್ದಿ ಪಡೆಸುವುದಕ್ಕೆ ಹಣದ ಕೊರತೆ ಏನಾದರೂ ಇರಬಹುದು ಎನ್.ಜಿ.ಓಗಳು ಕೆರೆಗಳನ್ನು ಅಭಿವೃದ್ದಿ ಪಡೆಸುತ್ತಿವೆ,ಜನಪ್ರತಿನಿಧಿಗಳಿಗೆ ಸಾವಿರಾರು ಕೋಟಿಗಳ ಕಾಮಗಾರಿಗಳ ನೆಪದಲ್ಲಿ ನೊರಾರು ಕೋಟಿಗಳು ಜೇಬು ತುಂಭುವಂತಾದರೆ ಸಾಕು. ಕೃಷ್ಣ ನದಿಯ ನೀರಿನಲ್ಲಿ ನಮಗೆ ಬರಬೇಕಾದ ಪಾಲಿನ ನೀರಿನ ಬಗ್ಗೆ ಯಾವ ಜನಪ್ರತಿನಿಧಿಗಳ ಚಕಾರ ಎತ್ತುತ್ತಿಲ್ಲ. ಕೃಷ್ಣ ನದಿ ನೀರನ್ನು ಪೆನ್ನಾರ್‌ಗೆ ಲಿಂಕ್ ಮಾಡಲು ಹೇಳುತ್ತಿಲ್ಲ ಎಂದು ಅಕ್ಷೇಪಿಸಿದರು,


ಇವೆಲ್ಲಾ ವಿಷಯಗಳನ್ನು ಸಚಿವ ಸಂಪುಟದಲ್ಲಿ ಗಂಭೀರವಾಗಿ ಪರಿಗಣಿಸಿ ಚರ್ಚಿಸ ಬೇಕು ಇಲ್ಲವಾದಲ್ಲಿ ೩ ಜಿಲ್ಲೆಗಳ ಪತ್ರಿರೋಧವನ್ನು ಎದುರಿಸ ಬೇಕಾಗುತ್ತದೆ. ಜನರ ಭವಿಷ್ಯಕ್ಕಿಂತ ರಾಜಕೀಯ ಪಕ್ಷಗಳು ದೊಡ್ಡದಲ್ಲ ಎಂದು ಪ್ರತಿಪಾದಿಸಿದರು.


ಮುಖಂಡ ಹೊಳಲಿ ಪ್ರಕಾಶ್ ಮಾತನಾಡಿ ನೀರಾವರಿ ವಷಯದ ಬಗ್ಗೆ ಆಡಳಿತ ಸರ್ಕಾರಕ್ಕೆ ಯಾವೂದೇ ಕಾಳಜಿ ಇಲ್ಲ ನಶೆಯ ಅಮಲಿನಲ್ಲಿ ಇದೆಯೋನೂ ಗೊತ್ತಿಲ್ಲ. ಪರಿಸರ ಇಲಾಖೆ, ವಿಜ್ಞಾನದ ಸಂಶೋಧನಾ ಸಂಸ್ಥೆಗಳು ನೀಡಿರುವ ಎಚ್ಚರಿಕೆ ವರದಿಗಳನ್ನು ನಿರ್ಲಕ್ಷಿಸಿದೆ ಈ ಬಗ್ಗೆ ವಿರೋಧ ಪಕ್ಷಗಳು ಮಂದ ಸರ್ಕಾರಗಳಿಗೆ ಚುರುಕು ಮುಟ್ಟಿಸುವಲ್ಲಿ ವಿಫಲವಾಗಿದೆ. ಮೂರು ಜಿಲ್ಲೆಗಳಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು ಅವುಗಳನ್ನು ಅಭಿವೃದ್ದಿ ಪಡೆಸ ಬೇಕು. ಅಂತರ್ಜಲ ಮಟ್ಟವನ್ನು ಅಭಿವೃದ್ದಿ ಪಡೆಸ ಬೇಕೆಂಬ ಯಾವೂದೇ ಕಾಳಜಿ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ ಎಂದು ವ್ಯಂಗವಾಡಿದರು,


ಕುರುಬರ ಪೇಟೆ ವೆಂಕಟೇಶ್ ಮಾತನಾಡಿ ನಾವೂ ನೀರಾವರಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲಿನ ಸಮೃದ್ದಿ ಮಂಜುನಾಥ್, ವರ್ತೂರು ಪ್ರಕಾಶ್ ಇವರುಗಳು ೩೬೫ ದಿನದ ಪ್ರತಿಭಟನಾ ಧರಣಿಯಲ್ಲಿ ಒಂದು ದಿನವೂ ಬಾರದೆ ಇರುವುದು ಅವರ ನಿರ್ಲಕ್ಷತೆಯ ಪರಮಾವಧಿಯಾಗಿದೆ ಎಂದು ಖಂಡಿಸಿದರು,


ಪತ್ರಿಕಾಗೋಷ್ಠಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ವಿ.ಕೆ.ರಾಜೇಶ್, ಅಬ್ಬಣಿ ಶಿವಪ್ಪ, ಕಲ್ವಮಂಜಲಿ ರಾಮು, ಚಂಬೆ ರಾಜೇಶ್, ಕನ್ನಡ ಮಿತ್ರ ವೆಂಕಟಪ್ಪ, ದಲಿತ ನಾರಾಯಣಸ್ವಾಮಿ, ಎ.ಪಿ.ಎಂ.ಸಿ. ಪುಟ್ಟರಾಜು, ಸಾವುಕಾರ್ ಶಂಕರಪ್ಪ, ಶೇಷಾದ್ರಿ, ಸೋಮು, ಚೇತನ್ ಬಾಬು, ಉಪಸ್ಥಿತರಿದ್ದರು.