
ಚಿತ್ತಾಪುರ: ಪಟ್ಟಣದ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸ್ ಚಾಲಕರೊಬ್ಬರು ಡಿಪೋ ಮ್ಯಾನೇಜರ್‌ರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ತಮ್ಮ ಅಳಲನ್ನು ಮಾಧ್ಯಮದ ಮೂಲಕ ಹೊರಹಾಕಿದ್ದಾರೆ.
ಪ್ರತಿ ತಿಂಗಳು ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹಣ ನೀಡದಿದ್ದರೆ ಕರ್ತವ್ಯದಲ್ಲಿ ತೊಂದರೆ ನೀಡಲಾಗುತ್ತಿದೆ ಎಂದು ಚಾಲಕ ಆರೋಪಿಸಿದ್ದಾರೆ. ಜತೆಗೆ, ಜಾತಿ ಆಧಾರದ ಮೇಲೆ ಬಸ್ ಚಲಾಯಿಸಲು ಅವಕಾಶ ನೀಡಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ತಾರತಮ್ಯ ಮತ್ತು ಕಿರುಕುಳ ನೀಡುವುದರ ಬಗ್ಗೆ ಡೀಪೋ ಮ್ಯಾನೇಜರ್ ಗೊಲ್ಲಾಳಪ್ಪ ಬಿರಾದಾರ ಅವರಿಗೆ ಪ್ರಶ್ನಿಸಿದರೆ ಮನಬಂದAತೆ ಮಾತನಾಡಿ ಕರ್ತವ್ಯ ದಲ್ಲಿ ಲೋಪ ಎಸಗಿದಿಯಾ ನಿನ್ನ ಮೇಲೆ ಕ್ರಮ ಕೈಗೊಳ್ಳುತ್ತೆನೆ ಸುಖಾ ಸುಮ್ಮನೆ ನೋಟಿಸ್ ಜಾರಿ ಮಾಡುತ್ತಾರೆ,ನೇರವಾಗಿ ಹಣ ಕೋಡದೆ ಇದ್ದರೆ ನೋಟೀಸ್ ಜಾರಿ ಮಾಡಿ ಸಂಬಳದಲ್ಲಿ ಹಣ ಕಟ್ ಮಾಡುವ ಹಾಗೆ ಮಾಡುತ್ತಾರೆ.
ಇಂತಹ ನಿರಂತರ ಕಿರುಕುಳ ಹಾಗೂ ಒತ್ತಡದಿಂದ ತೀವ್ರವಾಗಿ ನೊಂದಿರುವುದಾಗಿ ಹೇಳಿರುವ ಚಾಲಕ ಸುನೀಲ್ “ನನ್ನ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರವಾಗಿಲ್ಲ. ಇದೀಗ ಮಾಧ್ಯಮದ ಮೂಲಕವಾದರೂ ನನಗೆ ನ್ಯಾಯ ಒದಗಿಸಬೇಕು” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಮೇಲಿನ ಒತ್ತಡದಿಂದ ಮಾನಸಿಕವಾಗಿ ನೊಂದಿದ್ದು ಪರಿಹಾರ ಸಿಗದೇ ಇದಲ್ಲಿ ಅವರ ಹೆಸರಲ್ಲಿ ಆತ್ಮಹತ್ಯೆ ಮಾಡಿಕೊಳ್ಳೆನೆ ಎಂದರು.
ನಿಷ್ಪಕ್ಷಪಾತ ತನಿಖೆಗೆ ಆಗ್ರಹ: ಚಾಲಕ ಮಾಡಿರುವ ಹಣದ ಬೇಡಿಕೆ ಹಾಗೂ ಜಾತಿ ತಾರತಮ್ಯದ ಆರೋಪಗಳ ಕುರಿತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜತೆಗೆ, ಚಾಲಕನಿಗೆ ಯಾವುದೇ ರೀತಿಯ ಪ್ರತೀಕಾರದ ಕ್ರಮ ಕೈಗೊಳ್ಳದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಇಂತಹ ಡಿಪೋ ಮ್ಯಾನೇಜರ್ ಅವರನ್ನು ಅಮಾನತ್ತು ಮಾಡಬೇಕು ಎಂಬ ಆಗ್ರಹಿಸಿದ್ದಾರೆ.































