ನ್ಯಾಯಮೂರ್ತಿಗಳ ವರದಿ ಸುಟ್ಟು ಸಂವಿಧಾನ ಕಾನೂನಿಗೆ ಅಪಮಾನ: ಮಾದಿಗ ಸಮಾಜ ಸಹಿಸುವುದಿಲ್ಲ:ವಿಜಯಕುಮಾರ್ ಆಡಕಿ

ಸೇಡಂ, ಆ,19: ಕಳೆದ ವರ್ಷ ಸುಪ್ರೀಂಕೋರ್ಟಿನಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ (ಆಗಸ್ಟ್ 1 ರಂದು) ಆಯಾ ರಾಜ್ಯಗಳಿಗೆ ಮಹತ್ವದ ತೀರ್ಮಾನ ನೀಡಿತು ಅದರಂತೆ ಇಲ್ಲಿನ ರಾಜ್ಯ ಕಾಂಗ್ರೆಸ್ ಸರ್ಕಾರ ಜಾಳಗೊಳಿಸುವಲ್ಲಿ ವಿಳಂಬ ಮಾಡಿ ನ್ಯಾ. ಎಚ್.ಎನ್. ನಾಗಮೋಹನ್‍ದಾಸ್ ಆಯೋಗ ರಚಿಸಿ ಅವರಿಂದ ವರದಿ ಸರ್ಕಾರ ಪಡೆದಿದೆ, ಆದರೆ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿಯವರು ಆ ವರದಿಯನ್ನು ಸುಟ್ಟು ಸಂವಿಧಾನಕ್ಕೆ ಹಾಗೂ ಕಾನೂನಿಗೆ ಅಪಮಾನ ಮಾಡಿರುವರ ಜೊತೆಗೆ ಆಯೋಗಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸ್ವಾಮೀಜಿಯಗಳ ನಡೆಗೆ ಮಾದಿಗ ಸಮಾಜ ಸಹಿಸುವುದಿಲ್ಲ ಎಂದು ಮಾದಿಗ ಸಮಾಜದ ಹಿರಿಯ ಮುಖಂಡರು ಹೋರಾಟಗಾರರಾದ ವಿಜಯಕುಮಾರ್ ಆಡಕಿ ಹೇಳಿದರು.
ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ತಾಲೂಕಾ ಮಾದಿಗ ಸಮಾಜದಿಂದ ಸ್ವಾಮೀಜಿಗಳ ವಿರುದ್ಧ ಘೋಷಣೆ ಕೂಗುತ್ತಾ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಎರಡುವರೆ ಗಂಟೆಗೂ ಹೆಚ್ಚು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹೊಲೆಯ ಮಾದಿಗರು ಅಣ್ಣ ತಮ್ಮಂದಿರಂತೆ ಇದ್ದು ಅವರ ನಡುವೆ ವಿಷ ಬೀಜ ಬಿತ್ತುವಂತಹ ಕೆಲಸ ಮಾಡಬೇಡಿ ತಕ್ಷಣ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಆಯೋಗದ ನಿವೃತ್ತ ನ್ಯಾಯಮೂರ್ತಿಗಳಿಗೆ ಕ್ಷಮೆ ಕೇಳಬೇಕೆಂದು ಎಂದರು. ತಾಲೂಕ ಮಾದಿಗ ಸಮಾಜದ ಅಧ್ಯಕ್ಷ ಮಾರುತಿ ಕೊಡಂಗಲಕರ್, ಚಿಂಚೋಳಿಯ ಮಾದಿಗ ಸಮಾಜದ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ ರಾಜು ಮುಕ್ಕಣ್ಣ ಜಗನ್ನಾಥ ಚಿಂತಪಳ್ಳಿ, ಮಾತನಾಡಿದರು. ತಹಸಿಲ್ದಾರ್ ಶ್ರೇಯಾಂಕ್ ಧನುಶ್ರೀ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಈ ವೇಳೆಯಲ್ಲಿ ಸಮಾಜದ ಹಿರಿಯರಾದ ಬಸಣ್ಣ ರನ್ನೆಟ್ಲಾ, ಶಿವಪುತ್ರ ಮೊಘಾ,ದತ್ತು ಮುಗಟಿ, ಸಂತೋಷ್ ಇಂಜಳ್ಳಿಕರ್, ಶ್ರೀಶೈಲ ಎಮ್ ಜಿ, ದೇವೇಂದ್ರ ಕಣೆಕಲ್ ಬಸವರಾಜ ಕಾಳಗಿ ರಾಮು ಕಣೆಕಲ್,ಸುಂದರ ಮಂಗಾ, ಲೋಕೇಶ್ ಹಂದರಕಿ, ಶಾಂತು ಚಿಂತಪಳ್ಳಿ, ಹಣಮಂತ್ ಭರತನೂರ,ಸುನಿಲ್ ಸಲಗರ,ಮಲ್ಲು ಕೊಡಂಬಲ್,ದೀಪಕ್ ಎಂ.ಜಿ. ಅಶೋಕ್ ಪಿರಂಗಿ ಭೀಮು ಮುಧೋಳ,ಮಾರುತಿ ಹೆಡ್ಡಳ್ಳಿಕರ್, ಸುರೇಶ್ ಇವಣಿ, ಮೈಲಾರಿ ಕಾಸ್ಕರ್, ಜಗನ್ನಾಥ್ ಬಿಜನಳ್ಳಿ, ಅನಿಲ್ ರನ್ನೆಟ್ಲಾ, ರವೀಂದ್ರ ಕಾಂಬಳೆ, ಸೇರಿದಂತೆ ಮಾದಿಗ ಸಮಾಜದ ಯುವಕರು ಹಿರಿಯರು ಇದ್ದರು.


ಒಬ್ಬ ಸ್ವಾಮಿಗಳಾಗಿ ಸಮಾಜದಲ್ಲಿ ಶಾಂತಿಯ ಸಂದೇಶ, ಸಾರುವ ನಿಟ್ಟಿನಲ್ಲಿ ಪವಿತ್ರ ಕೆಲಸ ಮಾಡಬೇಕು, ಸರಿ ತಪ್ಪುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗಬೇಕು ಆದರೆ ಹೊಲೆಯ ಮಾದಿಗರ ನಡುವೆ ವಿಷಬೀಜ ಬಿತ್ತುವಂತಹ ಕೆಲಸ ಸ್ವಾಮಿಗಳು ಮಾಡಬಾರದು, ಆಯೋಗದ ವರದಿ ಸುಟ್ಟು ಸಂವಿಧಾನಕ್ಕೆ ಕಾನೂನಿಗೆ ಅಪಮಾನ ಮಾಡಿರುವುದು ನಮ್ಮ ಮಾದಿಗ ಸಮಾಜ ಸಹಿಸುವುದಿಲ್ಲ.
ಮಾರುತಿ ಕೊಡಂಗಲಕರ್ ಅಧ್ಯಕ್ಷರು

ಮಾದಿಗ ಸಮಾಜ ಸೇಡಂ

ಜ್ಞಾನಪ್ರಕಾಶ ಸ್ವಾಮೀಜಿಯವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿವಿ ಕೊಡದೆ ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುತ್ತಾರೆ ಎಂಬ ಭರವಸೆ ನಮಗಿದೆ.

ಜಗನ್ನಾಥ ಚಿಂತಪಳ್ಳಿ ಮಾದಿಗ ಸಮಾಜದ ಹಿರಿಯ ಮುಖಂಡರು ಸೇಡಂ

ಸುಪ್ರೀಂ ಕೋರ್ಟ್ ಆದೇಶದಂತೆ ಮುಖ್ಯಮಂತ್ರಿಗಳು ತಕ್ಷಣ ನಾಳೆ ನಡೆಯುವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು, ಒಂದು ವೇಳೆ ಮುಂದೂಡಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಸರ್ವನಾಶವಾಗುತ್ತದೆ.

ಗೋಪಾಲರಾವ್ ಕಟ್ಟಿಮನಿ ಮಾದಿಗ ಸಮಾಜದ ಮುಖಂಡರು ಚಿಂಚೋಳಿ

35 ವರ್ಷಗಳಿಂದ ಸದಾಶಿವ ಆಯೋಗ ವರದಿ ಜಾರಿಗಾಗಿ ಹೋರಾಟ ಮಾಡಿಕೊಂಡು ಮಾದಿಗ ಸಮಾಜದವರು ಬರುತ್ತಿದ್ದೇವೆ,ಇತ್ತೀಚೆಗೆ ರಾಜ್ಯ ಸರ್ಕಾರ ನ್ಯಾ ಎಚ್.ಎನ್.ನಾಗಮೋಹನ್‍ದಾಸ್ ಆಯೋಗ ರಚಿಸಿ ವರದಿ ಪಡೆದ ಮೇಲೆ ವರದಿ ಸರಿ ಇಲ್ಲ ಎಂದು ಸುಟ್ಟು ಅವೈಜ್ಞಾನಿಕವಾಗಿದೆ ಎಂದು ಹೇಳುವ ಜ್ಞಾನಪ್ರಕಾಶ್ ಸ್ವಾಮೀಜಿಯವರೆ ಸಮಾಜದಲ್ಲಿ ಶಾಂತಿ ಬಿತ್ತುವ ಕೆಲಸ ಮಾಡಿ ವಿಷ ಬೀಜ ಬಿತ್ತುವ ಕೆಲಸ ಮಾಡಿದರೆ ನಮ್ಮ ಮಾದಿಗ ಸಮಾಜ ಸುಮ್ಮನೆ ಕುಂದುವುದಿಲ್ಲ ಎಚ್ಚರ.
ರಾಜು ಮುಕ್ಕಣ್ಣ ಮಾದಿಗ ಸಮಾಜದ ಹಿರಿಯ ಮುಖಂಡರು