ಕಲಬುರಗಿ,ನ.24-ಹಾಡು ಹಗಲೇ ಮನೆಯೊಳಗೆ ನುಸುಳಿ ಅಲಮಾರಿ ಬೀಗ ಮುರಿದು 4.40 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಬಿದ್ದಾಪುರ ಕಾಲೋನಿಯಲ್ಲಿ ನಡೆದಿದೆ.
ಕಾಳಪ್ಪ ಮಾಳಗಿ ಎಂಬುವವರ ಮನೆಯೊಳಗೆ ನುಸುಳಿ ಕಳ್ಳರು ಅಲಮಾರಿ ಬೀಗ ಮುರಿದು 1.90 ಲಕ್ಷ ರೂ.ನಗದು, 1.60 ಲಕ್ಷ ರೂ.ಮೌಲ್ಯದ ಬಂಗಾರದ ಮಂಗಳಸೂತ್ರ, 80 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಲಾಕೆಟ್, 10 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಉಂಗುರ ಸೇರಿ 4.40 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

























