Home ಜಿಲ್ಲೆ ಬೆಂಗಳೂರು ಸಿಎಂ ತವರು ಜಿಲ್ಲೆಗೆ ಬಂಪರ್

ಸಿಎಂ ತವರು ಜಿಲ್ಲೆಗೆ ಬಂಪರ್

ಬೆಂಗಳೂರು, ಮಾ. ೬- ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಮೈಸೂರಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಲಿಂಗಾಂಬುದಿ ಸಸ್ಯ ತೋಟ ಅಭಿವೃದ್ಧಿಗೆ, ತಾಂಡವಪುರದಲ್ಲಿ ಸಿಲ್ಕ್ ಪಾರ್ಕ್, ಮೈಸೂರಿನ ಜಯದೇವ ಆಸ್ಪತ್ರೆ ಮೇಲ್ದರ್ಜೇಗೆ, ಮೈಸೂರನ್ನು ೨ನೇ ಐಟಿ ಸಿಟಿ ಮಾಡುವ ಘೋಷಣೆಗಳನ್ನು ಮಾಡಲಾಗಿದ್ದು, ಮೈಸೂರಿನಲ್ಲಿ ಆಧುನಿಕ ಲ್ಯಾಂಡ್ರಿ ನಿರ್ಮಿಸುವ ಘೋಷಣೆಯನ್ನು ಮಾಡಲಾಗಿದೆ.


ಮೈಸೂರಿನಲ್ಲಿ ಕಾವಾ ಆವರಣದಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ಕಲಾ ಗ್ಯಾಲರಿ ನಿರ್ಮಾಣ, ಮೈಸೂರಿನ ದಡ್ಡಹಳ್ಳಿಯಲ್ಲಿ ಸೈಕ್ಲಿಂಗ್ ಕ್ರೀಡೆಗಾಗಿ ವೆಲೋಡ್ರೋಮ್ ನಿರ್ಮಾಣ, ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲ ಸೌಕರ್ಯ ಅಭಿವೃದ್ಧಿಗೆ ೧೦ ಕೋಟಿ, ಮೈಸೂರು ಫಿಲಂಸಿಟಿ ನಿರ್ಮಾಣಕ್ಕೆ ೫೦೦ ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ.


ಖ್ಯಾತ ಚಲನಚಿತ್ರ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತನೆ, ಮೈಸೂರಿನ ಬದನವಾಳ ಖಾದಿ ಗ್ರಾಮೋದ್ಯಕ್ಕೆ ಗಾಂಧೀಜಿ ಭೇಟಿ ನೀಡಿದ ನೆನಪಿಗಾಗಿ ಸ್ಮಾರಕ ಸ್ಥಂಭಗಳ ನಿರ್ಮಾಣ, ಮೈಸೂರಿಗೆ ಪ್ರಾಯೋಜಿಕವಾಗಿ ಇ ಕೋರ್ಟ್, ಮೈಸೂರು ತಾಲ್ಲೂಕಿನ ಬಿದ್ರಹಳ್ಳಿ ಹುಂಡಿ ಬಳಿ ಕಾಲುವೆ ಆಧುನೀಕರಣ, ಟಿ. ನರಸೀಪುರು ಕಾಲುವೆ ಆಧುನೀಕರಣ, ಕಬನಿ ಬಲದಂಡೆ ನಾಲಾಯ ಆಧುನೀಕರಣ, ಟಿ ನರಸೀಪುರ ತಾಲ್ಲೂಕಿನ ರಾಜರಾಜೇಶ್ವರಿ ಕಾಲುವೆ ಹಾಗೂ ಹಾರೋಹಳ್ಳಿ ಹೈಲೆವೆಲ್ ಕಾಲುವೆ ಸುಧಾರಣೆ, ಟಿ.ನರಸಿಪುರ ತಾಲ್ಲೂಕಿನ ಆರ್.ಪಿ. ಕಾಲುವೆಯ ಹಾರೋಹಳ್ಳಿ ಪಿಕ್‌ಪ್ ಕಾಲುವೆ ಹಾಗೂ ಬಂಡಿ ಬಚ್ಚಟು ಶಾಖಾ ಕಾಲುವೆ ಸುಧಾರಣೆ, ಮೈಸೂರು ತಾಲ್ಲೂಕಿನ ಚಿಕ್ಕಂಕನಹಳ್ಳಿಯ ಕೆರೆಯ ಅಡಿಯಲ್ಲಿರುವ ಕಿಗ್ಗಾಲುವೆ ಮತ್ತು ಮೆಗ್ಗಾಲುವೆಗಳ ಆಧುನೀಕರಣ. ಕಬನಿ ಅಣೆಕಟ್ಟೆಯ ಮೇಲ್ಭಾಗದಲ್ಲಿ ಪುನರುಜ್ಜೀವನ ಕಾಮಗಾರಿ, ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆ.


ವರುಣ ಕ್ಷೇತ್ರದ ಗ್ರಾಮಗಳ ಕೆರೆಗಳಿಗೆ ಏತ ನೀರಾವರಿ ಕಾಮಗಾರಿ, ವರುಣ ಕೆರೆ ಪುನರುಜ್ಜೀವನ ಮತ್ತು ಸಂರಕ್ಷಣೆ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸರಣಿ ಚೆಕ್‌ಡ್ಯಾಂ ನಿರ್ಮಾಣ ಮೈಸೂರು ಜಿಲ್ಲೆಯ ಹೆಮ್ಮಿಗೆ-ಮುದುಗರನೂರು ಸ್ಪೀಡರ್ ನಾಲೆ ಅಭಿವೃದ್ಧಿ ನಂಜನಗೂಡು ತಾಲ್ಲೂಕು ಕಾರ್ಯ ಗ್ರಾಮದಲ್ಲಿರುವ ಇಂಗು ಕೆರೆಯ ಅಭಿವೃದ್ಧಿ ಕಾಮಗಾರಿ, ವರುಣ ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶಮಿಕ ವಸತಿ ಶಾಲೆ, ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ ಆರಂಭ, ಕಟ್ಟೆ ಮಳವಾಡಿ ಕಾಲುವೆ ಹಾಗೂ ಒಡಕೆಕಟ್ಟೆ ಹೈಲೆವೆಲ್ ಕಾಲುವೆಗಳ ಸುಧಾರಣೆ, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲತೆಗಾಗಿ ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಸ್ಥಾಪನೆ, ಮೈಸೂರಿನಲ್ಲಿ ಪ್ಯಾರಾ ಮೆಡಿಕರ್ ಕೋರ್ಸ್ ಆರಂಭ, ಮೈಸೂರಿನಲ್ಲಿ ಸ್ಲೈಡರ್ ಎಲೆಕ್ಟ್ರಿಕ್ ಯೂತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪನೆ ಹೀಗೆ ಮೈಸೂರು ಜಿಲ್ಲೆಗೆ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ.