ವಿಧಾನ ಪರಿಷತ್ ಸದಸ್ಯರ ಗುಂಡಾ ವರ್ತನೆ

ಸಂಜೆವಾಣಿ ವಾರ್ತ
ಹುಮನಾಬಾದ್: ಜ.೬:ಬೀದರ್ ನಗರದಲ್ಲಿ ನಿವೇಶನವೊಂದರ ನಿರ್ಮಾಣ ಹಾಗೂ ಹುಮನಾಬಾದ್ ಪಟ್ಟಣದ ೨೦೪-೨೦೫ ಸರ್ವೇ ನಂಬರ್ ಜಮೀನು ವಿಷಯ ಪ್ರಸ್ತಾಪಿಸಿದಾಗ ವಿಧಾನ ಪರಿಷತ್ ಸದಸ್ಯಭೀಮಾರಾವ ಪಾಟೀಲ ಅವರು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಲು ಬಂದಿದ್ದರು ಎಂದು ಶಾಸಕ ಡಾ. ಸಿದ್ದು ಪಾಟೀಲ ಹೇಳಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಅಕ್ರಮವಾಗಿ ನಡೆಯುತ್ತಿದೆ ಎಂಬುವುದರ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಿದ್ದೆ.
ಅಷ್ಟೇರಲ್ಲೇ ವಿಪ ಸದಸ್ಯ ಭೀಮಾರಾವ ಪಾಟೀಲ ಮಧ್ಯ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆಗೆ ಯತ್ನಿ-ಸುತ್ತಿದ್ದಂತೆ ಪೊಲೀಸರು ಬಂದು ತಡೆದಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸಮ್ಮುಖದಲ್ಲಿ ಗೂಂಡಾ ವರ್ತನೆ ಮಾಡಿದ್ದಾರೆ.
ಇದನ್ನು ಜಿಲ್ಲೆಯ ಜನರು ಗಮನಿಸಿದ್ದಾರೆ. ಒಬ್ಬ ಶಾಸಕರ ಮೇಲೆ ಹಲ್ಲೆ ಮಾಡುತ್ತಿದ್ದಾಗ ಇನ್ನೂ ಜನ ಸಾಮಾನ್ಯರ ಪರಿಸ್ಥಿತಿ ಏನು?. ಇವರ ಗುಂಡಾ ವರ್ತನೆ ತಾಳಲಾರದೆ ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಎಂದರು.