ಎಂ.ಬಿ ಪಾಟೀಲರ ಕುರಿತ ಯತ್ನಾಳ ಹೇಳಿಕೆಗೆ ಬುಳ್ಳಾ ಖಂಡನೆ

ಬೀದರ್: ಅ.31:ರಾಜ್ಯದ ಭಾರಿ ಕೈಗಾರಿಕೆ ಖಾತೆ ಸಚಿವರಾದ ಎಂ.ಬಿ ಪಾಟೀಲ ಅವರ ಕುರಿತು ವಿಜಯಪುರ ನಗರ ಶಾಸಕರು ಹಾಗೂ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಅವರು ನೈಕ್ಸಲೈಟ್ ಎಂಬ ಅಸಂಸ್ಕøತ ಪದ ಬಳಿಕೆ ಮಾಡಿರುವುದನ್ನು ಜಾಗತಿಕ ಲಿಂಗಾಯತ ಸಮನ್ವಯ ಸಮಿತಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಖಂಡಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಯತ್ನಾಳ ಓರ್ವ ಅಸುಸಂಸ್ಕೃತ ವ್ಯಕ್ತಿ. ಇಂಥ ಮನಸ್ಥಿತಿ ಇರುವುದರಿಂದಲೇ ಬಿಜೆಪಿಯವರು ಇವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. 2028ರಲ್ಲಿ ವಿಜಯಪುರ ಜನರು ಯತ್ನಾಳರನ್ನು ಸೋಲಿಸಿ ಮನೆಗೆ ಕಳಿಸುವುದರಲ್ಲಿ ಸಂದೇಹವಿಲ್ಲವೆಂದು ತಿಳಿಸಿದರು.
ಎಂ.ಬಿ ಪಾಟೀಲ ಅವರು ಲಿಂಗಾಯತರ ಬಲಿಷ್ಟ ನಾಯಕ. ಅದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಸಮಾವೇಶ ಜರುಗಿತು. ಆ ಸಮಾವೇಶದಲ್ಲಿ ಎಂ.ಬಿ ಪಾಟೀಲರು ಐದಾರು ಬಸ್‍ಗಳ ಮೂಲಕ ಅಲ್ಲಿಯ ಬೆರಳೆಣಿಕೆಯಷ್ಟು ಜನರನ್ನು ಕರೆಸಿದ್ದಾರೆ. ಒಟ್ಟಾರೆ ಸಮಾವೇಶದಲ್ಲಿ ಕೇವಲ ಐದಾರು ಸಾವಿರ ಜನರಿದ್ದರು ಎಂಬ ಯತ್ನಾಳೆ ಹೇಳಿಕೆ ಹಾಸ್ಯಾಸ್ಪದ. ಬರೀ ಬೀದರ್‍ನಿಂದ ಪ್ರತ್ಯೇಕ ರೈಲನ್ನು ಈ ಕಾರ್ಯಕ್ರಮಕ್ಕಾಗಿ ಓಡಿಸುವ ಮೂಲಕ ಇಲ್ಲಿಂದಲೆ ಸಾವಿರಾರು ಬಸವ ಭಕ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಯತ್ನಾಳಗೆ ಗೊತ್ತಾಗಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಯತ್ನಾಳ ನಿತ್ಯ ಹೊಸ ಹೊಸ ಹೇಳಿಕೆ ನೀಡುತ್ತ ತಾನು ಒಬ್ಬ ಹೀರೊ ಎನಿಸಿಕೊಳ್ಳಲಿಕ್ಕೆ ಹೊರಟಿದ್ದಾರೆ. ಆದರೆ ವಿಜಯಪುರ ಜನ ತುಂಬ ಬುದ್ದಿವಂತರಿದ್ದು, ಇವರ ನಿತ್ಯದ ನಡೆ ಅವಲೋಕಿಸುತ್ತಿದ್ದಾರೆ. ಇಂಥವರ ನಡೆಯನ್ನು ಜನ ಮುಂದೊಂದು ದಿನ ತಿರಸ್ಕರಿಸುವುದು ಗ್ಯಾರಂಟಿ. ಯತ್ನಾಳ ಅವರ ಬಾಯಿ ಹಾಗೂ ಮೆದುಳಿಗೆ ಕಲೆಕ್ಷನ್ ಇಲ್ಲ. ಹಾಗಾಗಿ ಸ್ವಲ್ಪ ದಿನದಲ್ಲಿ ಅವರು ಹುಚ್ಚರಾಗುವುದು ಪಕ್ಕಾ ಎಂದರು.
ನಮ್ಮದು ಸುಸಂಸ್ಕೃತ ನಾಡು. ಬಸವಣ್ಣನವರು ಬಾಳಿ ಬದುಕಿದ ನೆಲೆ ಇದು. ಇಂಥ ನೆಲದಲ್ಲಿ ಈ ರೀತಿಯ ಅವಿವೇಕಿತನ ಉಳ್ಳುವವರು ಬದುಕುತ್ತಿರುವುದು ದೊಡ್ಡ ದುರಂತ. ಇದು ಹೀಗೆ ಮುಂದುವರೆದರೆ ಬಸವಾನುಯಾಯಿಗಳು ಉಗ್ರ ಅವತಾರ ತಾಳಿ ಈ ಚಳಿಗಾಲದಲ್ಲಿ ಯತ್ನಾ:ಳರ ಚಳಿ ಬಿಡಿಸುತ್ತಾರೆಂಬುದು ಅರಿವಿರಲಿ. ನಮ್ಮ ನಾಡಿನಲ್ಲಿ ಮಠಾಧೀಶರಿಗೆ ಅಪಾರ ಗೌರವವಿದೆ. ಆದರೆ ಇತ್ತಿಚೀಗೆ ಕನೇರಿ ಸ್ವಾಮಿಜಿಗಳು ಬಸವ ಸಂಸ್ಕೃತಿ ಅಭಿಯಾನ ಕುರಿತು ತುಚ್ಛ ಪದ ಬಳಿಕೆ ಮಾಡಿ ನಿಂದಿಸಿರುವುದು ಇಡೀ ಕಾವಿಧಾರಿಗಳಿಗೆ ಮಾಡಿದ ಘೋರ ಅಪಮಾನ. ಸ್ವಾಮಿಜಿಗಳ ನಡೆಯನ್ನು ಸಹ ತಿವೃವಾಗಿ ಖಂಡಿಸುವುದಾಗಿ ಬುಳ್ಳಾ ತಿಳಿಸಿದ್ದಾರೆ.