ವಿವೇಕದಿಂದ ವ್ಯಕ್ತಿತ್ವ ನಿರ್ಮಾಣ: ದೊಡ್ಡಿ

ಕಲಬುರಗಿ,ಜ.16-ಮನುಷ್ಯನು ತಾನು ಧರಿಸುವ ವಸ್ತ್ರಗಳಿಂದÀ ವ್ಯಕ್ತಿತ್ವ ನಿರ್ಮಾಣ ವಾಗುವುದಿಲ್ಲ. ವಿವೇಕದಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಎಸ್.ದೊಡ್ಡಿ ಹೇಳಿದರು.
ನಗರದ ಗಂಗಾಧರ ಬಕ್ಕಪ್ರಭು ಪ್ರೌಡ ಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕøತಿಕ ಛಾಯಾಚಿತ್ರ ಕಲಾ ಸಂಸ್ಥೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.
ಸಂಸ್ಥೆಯ ಅದ್ಯಕ್ಷ ಶರಣಪ್ಪ ಚ ಶಿಂಪಿ ಮಾತನಾಡುತ್ತ ಇಂದಿನ ಯುವಕರಲ್ಲಿ ಪ್ರತಿಭೆ ಬಹಳ ಇದೆ ಆದರೆ ಸೂಕ್ತ ವೇದಿಕೆಗಳ ಕೊರತೆ ಇದೆ ಆದ ಕಾರಣ ಇಂತಹ ಸಂಘ ಸಂಸ್ಥೆಗಳು ಯುವಕರಿಗೆ ವೇದಿಕೆ ವದಗಿಸಿದರೆ ನಮ್ಮ ಯುವಕರಿಗೆ ಸ್ಪೂರ್ತಿ ಕೊಡಬಹುದು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಸಿ ತೋಟದ ಪ್ರಾಸ್ತಾವಿಕ ನುಡಿದರು. ಮುಖ್ಯ ಅತಿಥಿಯಾಗಿ ಮುಖ್ಯ ಗುರುಗಳಾದ ಗೀತಾ ಗಾಸ್ಕರ ಸಹ ಶಿಕ್ಷಕಿಯಾದ ಗೀತಾ ಹಿರೇಮಠ ಹಾಗೂ ಸುಚಿತಾ ಖೇಡ. ಹಾಗೂ ಶಾಲೆಯ ಸಿಂಬಂದಿಗಳು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.