Home ಜಿಲ್ಲೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಬಜೆಟ್

ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಬಜೆಟ್

ಬಸವನಬಾಗೇವಾಡಿ :ಮಾ.೭:೧೭ನೇ ಬಾರಿಗೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ಟಿನಲ್ಲಿ ವಿದ್ಯಾರ್ಥಿಗಳ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡುವ ಪ್ರಗತಿಪರ ಬಜೆಟ್ ಆಗಿದೆ ಕೈಗಾರಿಕೆಗಳಿಗೆ ಸಬ್ಸಿಡಿ ಹಾಗೂ ಕೌಶಲ್ಯ ಅಭಿವೃದ್ಧಿ ಕೃಷಿ ನಿರಾವರಿ ರಸ್ತೆ ಗುಡಿ ಕೈಗಾರಿಕೆ ತೋಟಗಾರಿಕೆಗೆ ಹೀಗೆ ಹಲವಾರು ಆಯಾಮಗಳಿಗೆ ಹೆಚ್ಚಿನ ಅನುದಾನವನ್ನು ತಮ್ಮ ಬಜೆಟ್ಟಿನಲ್ಲಿ ಘೋಷಣೆ ಮಾಡುವ ಮುಖಾಂತರ ದೀನ ದಲಿತರ ಬಡವರ ನಿರುದ್ಯೋಗಿಗಳ ಪರ ವಿದ್ಯಾರ್ಥಿಗಳ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಳಿಗೆ ಅನುದಾನವನ್ನು ಘೋಷಣೆ ಮಾಡಿರುವರು ಕಾರಣ ಇದೊಂದು ಉತ್ತಮವಾದ ಬಜೆಟ್ ಆಗಿದೆ ನ್ಯಾಯವಾದಿಗಳಾದ ರವಿ ರಾಠೋಡ್ ತಿಳಿಸಿದ್ದಾರೆ.