
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಗರ ಪಾಲಿಕೆಗಳ ಆಯವ್ಯಯಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ವಾಸ್ತವಿಕ ಆದಾಯ ಮೂಲಗಳಿಗೆ ಹೊಂದಿಕೆಯಾಗದಂತೆ -೨೦,೨೨೦.೫೮ ಕೋಟಿ ಮೊತ್ತದ ಬಜೆಟ್ ಮಂಡನೆಯಾಗಿರುವುದು “ಭ್ರಮಾ ಲೋಕದ ಕನಸು” ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಆರೋಪಿಸಿದರೆ.
ಕೇಂದ್ರ (-೩,೪೨೭.೩೪ ಕೋಟಿ), ಉತ್ತರ (-೪,೩೪೪ ಕೋಟಿ), ದಕ್ಷಿಣ (-೩,೮೨೬.೪೩ ಕೋಟಿ), ಪೂರ್ವ (-೩,೮೯೦ ಕೋಟಿ) ಮತ್ತು ಪಶ್ಚಿಮ (-೪,೭೩೨.೮೧ ಕೋಟಿ) ೫ ನಗರ ಪಾಲಿಕೆಗಳು ಭಾರೀ ಮೊತ್ತದ ಆಯವ್ಯಯ ಮಂಡಿಸಿದ್ದು, ಇದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂಬ ಟೀಕೆ ಕೇಳಿಬಂದಿದೆ.
ಆದಾಯಕ್ಕಿಂತ ಹೆಚ್ಚಾದ ನಿರೀಕ್ಷೆಗಳು:
ಪಾಲಿಕೆಗಳ ಪ್ರಮುಖ ಆದಾಯ ಮೂಲಗಳು ಆಸ್ತಿ ತೆರಿಗೆ, ನಕ್ಷೆ ಮಂಜೂರಾತಿ ಶುಲ್ಕ, ರಸ್ತೆ ಅಗೆತ ಶುಲ್ಕ, ವ್ಯಾಪಾರ ಪರವಾನಗಿ ಮತ್ತು ಜಾಹೀರಾತು ಶುಲ್ಕ ಸೇರಿ ಒಟ್ಟು ಸುಮಾರು -೫,೮೦೦ ಕೋಟಿ ಮಾತ್ರ ಸಂಗ್ರಹ ಸಾಧ್ಯತೆ ಇದೆ. ರಾಜ್ಯ ಸರ್ಕಾರದಿಂದ ಘೋಷಿತ -೭,೦೦೦ ಕೋಟಿ ಅನುದಾನ ಕೂಡ ಸಂಪೂರ್ಣವಾಗಿ ಸಿಗುವ ಅನುಮಾನವಿದೆ. ಹೀಗಾಗಿ ಒಟ್ಟು ಆದಾಯ- ೧೨,೮೦೦ ಕೋಟಿ ಮೀರದು ಎನ್ನಲಾಗಿದೆ.
ಆದರೂ -೨೦,೦೦೦ ಕೋಟಿ ಮೀರಿ ಬಜೆಟ್ ಮಂಡಿಸಿರುವುದು ಅಸಂಗತ ಎಂದು ಹೇಳಲಾಗಿದೆ..
ಜಾಹೀರಾತು ಹಾಗೂ ಖಾತಾ ಪರಿವರ್ತನೆ ಗುರಿ ಪ್ರಶ್ನೆ
ಕೇಂದ್ರ ಪಾಲಿಕೆಯು ಜಾಹೀರಾತು ಗಳಿಂದಲೇ -೧೯೨ ಕೋಟಿ ಆದಾಯ ನಿರೀಕ್ಷಿಸಿರುವುದು ಪ್ರಶ್ನೆಗೆ ಗುರಿಯಾಗಿದೆ. ಹಿಂದಿನ ಬಿಬಿಎಂಪಿ ಅವಧಿಯಲ್ಲಿ ಗರಿಷ್ಠ -೩೦ ಕೋಟಿ ಮಾತ್ರ ಸಂಗ್ರಹವಾಗಿತ್ತು.
‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಮೂಲಕ -೧,೫೦೦ ಕೋಟಿ ಸಂಗ್ರಹ ಗುರಿ ಇಟ್ಟಿರುವುದೂ ಅಸಾಧ್ಯವೆಂದು ಹೇಳಲಾಗಿದೆ. ಸರ್ಕಾರ ವಿಧಿಸಿರುವ ಶುಲ್ಕ ಹೆಚ್ಚಳದಿಂದ ನಾಗರಿಕರು ಈ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂಬುದು ಆಕ್ಷೇಪ.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ
ಪೂರ್ವ, ಕೇಂದ್ರ ಮತ್ತು ದಕ್ಷಿಣ ಪಾಲಿಕೆಗಳ ವಾರ್ಡ್‌ಗಳಿಗೆ -೨.೨೫ ರಿಂದ -೨.೫೦ ಕೋಟಿ ಮೀಸಲಿದ್ದರೆ, ಪಶ್ಚಿಮ ಮತ್ತು ಉತ್ತರ ಪಾಲಿಕೆಗಳಿಗೆ ಕೇವಲ–೧.೫೦ ಕೋಟಿ ಮೀಸಲಾಗಿರುವುದು ತಾರತಮ್ಯ ಎಂದು ಆರೋಪಿಸಲಾಗಿದೆ.
ಹಣಕಾಸು ಆಯೋಗ, ಬಾಂಡ್‌ಗಳ ಮೇಲೂ ಅನುಮಾನ
ಜನಪ್ರತಿನಿಧಿಗಳ ಕೊರತೆಯಿಂದ ಕೇಂದ್ರದ ಹಣಕಾಸು ಆಯೋಗದ ಅನುದಾನ ಸಿಗುವ ಸಾಧ್ಯತೆ ಕಡಿಮೆ. ಮುನಿಸಿಪಲ್ ಬಾಂಡ್ ಮೂಲಕ ಆದಾಯ ನಿರೀಕ್ಷೆಯೂ ವಾಸ್ತವಿಕವಲ್ಲ ಎಂದು ಹೇಳಲಾಗಿದೆ
ಸರ್ಕಾರದಿಂದ ಸ್ಪಷ್ಟನೆಗೆ ಒತ್ತಾಯ
ಹಿಂದೆ -೯,೦೦೦ ಕೋಟಿ ಬಿಬಿಎಂಪಿ ಬಜೆಟ್ ತಿರಸ್ಕರಿಸಿದ್ದ ರಾಜ್ಯ ಸರ್ಕಾರ, ಈಗ -೨೦,೨೨೦ ಕೋಟಿ ಆಯವ್ಯಯದ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಎನ್ ಅರ್ ರಮೇಶ್ ಎನ್.ಆರ್ ತಿಳಿಸಿದ್ದಾರೆ.


















