ದೇವನಹಳ್ಳಿ ಬೆಂ ಗ್ರಾಆ೧೧:ಬೌದ್ಧ ಧರ್ಮ ಬಹಳ ಹಳೆಯ ಧರ್ಮ ಈ ಧರ್ಮದ ನಾಲ್ಕು-ಐದನೇ ಶತಮಾನದ ಪುರಾವೆಗಳು ಇಂದು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಘಟ್ಟ ಗ್ರಾಮದಲ್ಲಿ ಕೆಲವು ಪುರಾವೆಗಳು ದೊರಕಿದ್ದು ಅವುಗಳನ್ನು ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಸಚಿವ ಕೆ ಹೆಚ್ ಮುಮಿಯಪ್ಪ ತಿಳಿಸಿದ್ರು.
ಅನುಭವ ಮಂಟಪ ಮುರಘಾ ಮಠದಲ್ಲಿಂದು ಭವ್ಯವಾಗಿ ನಡೆದ ‘ ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ’ ಮಹೋತ್ಸವದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರು ಭಾಗವಹಿಸಿ ಬುದ್ಧ?ಬಸವ ಮೂರ್ತಿಗೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬಸವೇಶ್ವರ ನಾಡಿನಲ್ಲಿ ಬುದ್ಧ ಸ್ಮರಣೆ ಮತ್ತು ದಲೈ ಲಾಮಾ ಅವರ ೯೦ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಸಂತೋಷಕರವಾಗಿದೆ ಎಂದರು
ಬೌದ್ಧ ಧರ್ಮ ಬಹಳ ಹಳೆಯ ಧರ್ಮ ಈ ಧರ್ಮದ ನಾಲ್ಕು-ಐದನೇ ಶತಮಾನದ ಪುರಾವೆಗಳು ಇಂದು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ರಾಜಘಟ್ಟ ಗ್ರಾಮದಲ್ಲಿ ಕೆಲವು ಪುರಾವೆಗಳು ದೊರಕಿದ್ದು ಅವುಗಳನ್ನು ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಸಂಶೋಧನೆ ನಡೆಸುತ್ತಿದ್ದಾರೆ.
ಇತ್ತೀಚಿಗೆ ೧೫ ದಿನದಗಳ ಹಿಂದೆ ಅಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ಬೌದ್ಧ ಧರ್ಮದ ಗುರುಪೀಠ, ಪ್ರಾಥನೆಯ ಮಂದಿರದ ಅನೇಕ ಪುರಾತನ ಅವಶೇಷತೆಗಳನ್ನು ನೋಡಿದ್ದೇವೆ. ಇದು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸ್ಥಳ ಅಂತ ಗುರುತಿಸಲ್ಪಟ್ಟಿದೆ
ಅದನ್ನು ಸಂಶೋಧನಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ನೇತ್ರತ್ವದಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ.
ಇದರ ಮುಖಾಂತರ ಮತ್ತೆ ದಕ್ಷಿಣ ಭಾರತದಲ್ಲಿ ನಾಲ್ಕು-ಐದನೇ ಶತಮಾನದಲ್ಲಿ ಇದ್ದ ಒಂದು ಗುರುತುಗಳನ್ನು ಪುನರ್ಜೀವನಗೊಳಿಸಿ, ಈ ಧರ್ಮದ ಸಂದೇಶವನ್ನು ಭಾರತದ ಉದ್ದಕ್ಕೂ ಜಗತ್ತಿಗೂ ತಲುಪಿಸುವ ಚಿಂತನೆಯನ್ನು ಕರ್ನಾಟಕ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ನಾವೆಲ್ಲಾರೂ ಚಿಂತನೆ ಮಾಡುತ್ತಿದ್ದೇವೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂಬಿ.ಪಾಟೇಲ್, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಯೋಜನೆ ಮತ್ತು ಅಂಕಿಅಂಶ ಸಚಿವ ಡಿ. ಸುಧಾಕರ್, ಚಿತ್ರದುರ್ಗ ಮಠದ ಮಾದಾರ ಚನ್ನಯ್ಯ ಸ್ವಾಮೀಜಿ, ನಿರಂಜನಾನಂದ ಪುರಿ ಸ್ವಾಮೀಜಿ,ಸಿದ್ದಾರೂಡಾ ಸ್ವಾಮೀಜಿ ,ಪ್ರಸನ್ನಾಂದಪುರಿ ಸ್ವಾಮೀಜಿ ,ವಚನಾಂದ ಸ್ವಾಮೀಜಿ,ಮಾಜಿ ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ,ಶಾಸಕರಾದ ರಘು ಮೂರ್ತಿ,ವೀರೇಂದ್ರ ಪಪ್ಪಿ, ಆಧಿಜಾಂಭವ ಅಭಿವೃಧ್ದಿ ನಿಗಮದ ಅಧ್ಯಕ್ಷರಾದ ಜಿ.ಎಸ್ .ಮಂಜುನಾಥ್, ಬಹುಜನ ಸಮಾಜದ ಅಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ, ಬುಧ್ದ ಧರ್ಮದ ಅನುಯಾಯಿಗಳು ಮುಖಂಡರು ಉಪಸ್ಥಿತರಿದ್ದರು….

























