ಜೇವರಗಿ,ನ.10:ಜಗತ್ತಿನಲ್ಲಿ ನುಡಿದಂತೆ ನಡೆದು ಶಾಂತಿಯುತ ದಮ್ಮ ಸ್ಥಾಪಿಸಿದ ಕೀರ್ತಿ ಗೌತಮ ಬುದ್ಧರಿಗೆ ಸಲ್ಲುತ್ತದೆ. ಬುದ್ಧನ ತತ್ವ ಇಂದಿಗೂ ಆದರ್ಶವಾಗಿವೆ ಎಂದು ಉಪನ್ಯಾಸಕ ನಿಜಲಿಂಗದೊಡ್ಡಮನಿ ಹೇಳಿದರು.
ಹುಣ್ಣಿಮೆಯ ನಿಮಿತ್ಯ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌತಮ ಬುದ್ಧರು ಹುಣ್ಣಿಮೆ ದಿನವನ್ನು ಕತ್ತಲಿನಿಂದ ಬೆಳಕಿನೆಡೆಗೆ ಎಂದು ಭಾವಿಸಿದ್ದರು. ಜನರಿಗೆ ಅಂಧಕಾರದಿಂದ ವೈಚಾರಿಕತೆಯ ಕಡೆಗೆ ಸೆಳೆಯಲು ಜನರನ್ನು ಜಾಗೃತಗೊಳಿಸಿದರು. ಗೌತಮ ಬುದ್ಧರು ಭೋದಿಸಿದ ಉಪದೇಶಗಳು ಜಗತ್ತಿನಲ್ಲಿ ಜನರಿಗೆ ದಾರಿದೀಪವಾಗಿವೆ ಎಂದರು.
ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕವಾಡ, ಸಿದ್ರಾಮ ಕಟ್ಟಿ, ರಾಜಶೇಖರ ಶಿಲ್ಪಿ, ಪ್ರಭಾಕರ ಸಾಗರ, ರವಿ ಕುಳಗೇರಿ, ಅಶೋಕ ದೊಡ್ಡಮನಿ, ಶ್ರೀಹರಿ ಕರಕಳ್ಳಿ, ಸಿದ್ದು ಕೇರೂರ, ಮಹೇಶ ಕೋಕಿಲೆ, ಯಶವಂತ ಬಡಿಗೇರ, ಮಲ್ಲಮ್ಮ ಕೊಬ್ಬಿನ್, ಜಗದೇವಿ ಜಟ್ನಾಕರ್, ವಿಶ್ವರಾಧ್ಯ ಗಂವ್ಹಾರ, ದೇವೀದ್ರ ವರ್ಮಾ, ಗುಂಡಪ್ಪ ಜಡಗಿ, ಮಾಪಣ್ಣ ಕಟ್ಟಿ, ರಾಜು ಕಟ್ಟಿಸಂಗಾವಿ ಇದ್ದರು.























