ಕೋಲಾರ,ಅ,೨೩- ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-೭೫ ರ ಕೆಂದಟ್ಟಿ ಬಳಿ ೨೬ ವರ್ಷದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಶವವನ್ನು ಆಟೋವೊಂದರಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಮಂಗಳವಾರ ಪತ್ತೆಯಾಗಿದ್ದು ಕೆಲವೇ ಗಂಟೆಗಳಲ್ಲಿ ಕೋಲಾರದ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾಗಿರುವ ವ್ಯಕ್ತಿಯನ್ನು ಬಂಗಾರಪೇಟೆ ತಾಲ್ಲೂಕು ಎಳೆಸಂದ್ರ ಗ್ರಾಮದ ಅಪ್ರೀದ್ (೨೬) ಎಂದು ಗುರುತಿಸಲಾಗಿದ್ದು,ಕೊಲೆ ವಿಷಯ ತಿಳಿದು ಕೆಂದಟ್ಟಿ ಸೇರಿದಂತೆ ಸುತ್ತಮುತ್ತಲ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಯಾರೋ ದಾರಿಹೋಕರು ನೀಡಿದ ಸುಳಿವಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವೃತ್ತ ನಿರೀಕ್ಷಕ ಕಾಂತರಾಜು ನೇತೃತ್ವದಲ್ಲಿ ತನಿಖೆ ನಡೆಸಿದರು.
ರಸ್ತೆ ಬದಿ ನಿಲ್ಲಿಸಿದ್ದ ಆಟೋದಲ್ಲಿ ಶವ ಪತ್ತೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿರುವ ಹಿನ್ನಲೆಂiiಲ್ಲಿ ಮೈಮೇಲೆಲ್ಲ ಗಾಯಗಳು ಕಂಡು ಬಂದಿತ್ತು. ಈ ಸಂಬಂಧವಾಗಿ ಕೊಲೆಯಾದ ಅಫ್ರೀದ್ ತಮ್ಮ ಅಪ್ರೋಸ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದನು.
ಈ ಸಂಬಂಧವಾಗಿ ವಿಚಾರಣೆ ವೇಳೆ ಕೊಲೆಯಾದ ಅಫ್ರೀದ್‌ನ ಸಹೋದರ ಅಪ್ರೋಸ್ ವಿಚಾರಣೆಯ ವೇಳೆಯಲ್ಲಿ ಅನುಮಾನಸ್ಪದವಾಗಿ ಹೇಳಿಕೆಗಳು ನೀಡುತ್ತಿದ್ದರಿಂದ ಸಂಶಯಗೊಂಡು ತೀವ್ರವಾಗಿ ವಿಚಾರಣೆಗೆ ಒಳಪಡೆಸಿದಾಗ ಸತ್ಯಾಂಶವನ್ನು ವಿವರಿಸಿ ಈ ಕೊಲೆಯನ್ನು ನಾನು ಮತ್ತು ನನ್ನ ಸಹಚಾರನ ನೆರವಿನೊಂದಿಗೆ ಮಾಡಿರುವುದಾಗಿ ಒಪ್ಪಿ ಕೊಂಡಿದ್ದಾನೆ,’
ಮನೆಯಲ್ಲಿನ ಕುಟುಂಬದ ಕಲಹದ ಹಿನ್ನಲೆಯಲ್ಲಿ ಬೇಸತ್ತು ತನಗೆ ಕಿರುಕುಳ ನೀಡುತ್ತಿದ್ದರಿಂದ ತನ್ನ ಅಣ್ಣನನ್ನು ಸಹಚಾರ ಇಬ್ರಾಹಿಂ ನೆರವಿನೊಂದಿಗೆ ಮಾರಾಕಾಸ್ತ್ರಗಳಿಂದ ಬೀಕರವಾಗಿ ಹತ್ಯೆ ಮಾಡಿ ಕೋಲಾರದ ಹೆದ್ದಾರಿಯ ಕೆಂದಟ್ಟಿ ಸಮೀಪದಲ್ಲಿ ಆಟೋದಲ್ಲಿ ಶವವನ್ನು ಬಿಟ್ಟು ಬಂದಿರುವುದಾಗಿ ಅಫ್ರೀದ್ ವಿವರಿಸಿದ್ದಾನೆ.
ಗ್ರಾಮಾಂತರ ಪೊಲೀಸರು ಪ್ರಕರಣ ಸಾಕ್ಷಾಧಾರಗಳ ಸಮೇತ ದಾಖಲಿಸಿ ಕೊಂಡು ಆರೋಪಿಗಳನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡೆಸಿ ನ್ಯಾಯಾಂಗ ಬಂಧನಕ್ಕೆ ಒಳಪಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.



























