
ವಿಜಯಪುರ, ಆ. 31: ಸೊಲ್ಲಾಪುರದ ಶ್ರೀ ಸ್ವಾಮಿ ಸಮರ್ಥ ಸಾಂಸ್ಕøತಿಕ ಭವನದಲ್ಲಿ ಆ.30ರಂದು ನಡೆದ 3ನೇ ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ-2026ರಲ್ಲಿ ವಿಜಯಪುರ ಜಿಲ್ಲೆಯ ಕರಾಟೆ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ವಿಜಯಪುರದ ಕ್ರೀಡಾಪಟುಗಳು 1 ಬಂಗಾರ, 3 ಬೆಳ್ಳಿ ಹಾಗೂ 13 ಕಂಚಿನ ಪದಕ ಸೇರಿದಂತೆ ಒಟ್ಟು 17 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕರ ಫೈಟಿಂಗ್ ವಿಭಾಗದಲ್ಲಿ ಕುಮಾರ ಅಬ್ದುಲ್ ವೈಯಿದ್ ಆರ್. ಜಮಾದಾರ (8 ವರ್ಷದೊಳಗಿನ 25 ಕೆ.ಜಿ.) ಬಂಗಾರ ಪದಕ ಪಡೆದರು. ಸಾಯಿಪ್ರಸಾದ ಯ. ವಾಗೋಲಿ (10 ವರ್ಷದೊಳಗಿನ 35 ಕೆ.ಜಿ.) ಹಾಗೂ ಸೌರಭ ಜಿ. ನೌರಾಜ (14 ವರ್ಷದೊಳಗಿನ 48 ಕೆ.ಜಿ.) ಕಂಚಿನ ಪದಕ ಪಡೆದರು. ಸುಜಲ ತು. ಲೋಹಾರ (17 ವರ್ಷದೊಳಗಿನ 44 ಕೆ.ಜಿ.) ಬೆಳ್ಳಿ ಪದಕ ಗಳಿಸಿದರು.
ಪುರುಷರ ಬ್ಲ್ಯಾಕ್ ಬೆಲ್ಟ್ ಫೈಟಿಂಗ್ ವಿಭಾಗದಲ್ಲಿ ರಿಯಾಜ್ ಎಂ. ಜಮಾದಾರ (40 ವರ್ಷದೊಳಗಿನ 60 ಕೆ.ಜಿ.) ಹಾಗೂ ಬಸವರಾಜ ಬಾಗೇವಾಡಿ (48 ವರ್ಷದೊಳಗಿನ 55 ಕೆ.ಜಿ.) ಕಂಚಿನ ಪದಕ ಪಡೆದರು.
ಬಾಲಕಿಯರ ಫೈಟಿಂಗ್ ವಿಭಾಗದಲ್ಲಿ ಶ್ರೇಯಾ ಎನ್. ಪೂಜಾರಿ, ಆರತಿ ಎಂ. ಕೋಳಿ, ತಂಜಿವಿನಿ ಟಿ. ಸಿಂಧ್, ಪ್ರತೀಕ್ಷಾ ಪಿ. ಪೆÇೀತದಾರ, ಅಕ್ಷತಾ ಎಂ. ಕುಂಬಾರ, ಪಲ್ಲವಿ ಎಸ್. ಕುಂಬಾರ, ನೇಹಾ ಎನ್. ಪೂಜಾರಿ, ಕೃತಿಕಾ ಎನ್. ಹೊಟ್ಕರ ಹಾಗೂ ಪೂನಂ ವಿ. ಜಾದವ ಅವರು ಕಂಚಿನ ಪದಕ ಪಡೆದರು. ವೈಭವಿ ಎನ್. ಕಾಂಬಳೆ ಹಾಗೂ ಶಿವಾನಿ ಎಸ್. ಘಾಟಕಗೆ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಕ್ರೀಡಾಪಟುಗಳ ಈ ಸಾಧನೆಗೆ ಆಯೋಜಕ ಈಶ್ವರ ಎಸ್., ನಿರ್ಣಾಯಕರು, ಮುಖ್ಯ ತರಬೇತುದಾರ ಉತ್ನಾಳದ ಬಸವರಾಜ ಬಾಗೇವಾಡಿ ಹಾಗೂ ರಿಯಾಜ್ ಜಮಾದಾರ ಅಭಿನಂದನೆ ಸಲ್ಲಿಸಿದ್ದಾರೆ.
17 ಪದಕಗಳ ಸಾಧನೆಯ ಮೂಲಕ ಜಿಲ್ಲೆಯ ಯುವ ಕರಾಟೆಪಟುಗಳು ವಿಜಯಪುರ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.































