ಬ್ರಿಲಿಯಂಟ್ ಶಾಲಾ ವಿದ್ಯಾರ್ಥಿನಿ ಸಿಂಚನಾ ರಾಜ್ಯಕ್ಕೆ ೨ನೇ ರ‍್ಯಾಂಕ್

oppo_0

ತಾಳಿಕೋಟೆ:ಮೇ.೨೬: ಪಟ್ಟಣದ ಮೈಲೇಶ್ವರ ಕ್ರಾಸ್‌ನಲ್ಲಿರುವ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಿಂಚನಾ ಶಿವನಗೌಡ ಪಾಟೀಲ ಎಸ್.ಎಸ್.ಎಲ್.ಸಿ.ಪರಿಕ್ಷೆಯ ಮರು ಮೌಲ್ಯಮಾಪನದಲ್ಲಿ ೯ ಅಂಕಗಳನ್ನು ಗಳಿಸುವದರೊಂದಿಗೆ ೬೨೫ಕ್ಕೆ ೬೨೪(೯೯.೮೪) ಅಂಕ ಪಡೆದು ರಾಜ್ಯಕ್ಕೆ ೨ ರ‍್ಯಾಂಕ್ ಪಡೆದು ಜಿಲ್ಲೆಯ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಬ್ರಿಲಿಯಂಟ್ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಸಿಂಚನಾ ಪಾಟೀಲ ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ವಿಷಯವಾರು ಕನ್ನಡಕ್ಕೆ ೧೨೫ಕ್ಕೆ ೧೨೫ ಅಂಕ, ಸಮಾಜ ವಿಜ್ಞಾನ ೧೦೦ಕ್ಕೆ ೧೦೦, ಹಿಂದಿ ೧೦೦ಕ್ಕೆ ೧೦೦, ಗಣಿತ ೧೦೦ಕ್ಕೆ ೧೦೦, ವಿಜ್ಞಾನ ೧೦೦ಕ್ಕೆ ೧೦೦, ಇಂಗ್ಲೀಷ ೧೦೦ಕ್ಕೆ ೯೯ ಅಂಕಗಳನ್ನು ಗಳಿಸಿದ್ದು ಈ ವಿದ್ಯಾರ್ಥಿಯ ಸಾಧನೆಯಿಂದ ಶಾಲೆಯಲ್ಲಿ ಹಾಗೂ ವಿದ್ಯಾರ್ಥಿಯ ಮನೆಯಲ್ಲಿ ಸಂತಸ ಮನೆ ಮಾಡಿದೆ.
ವಿದ್ಯಾರ್ಥಿಯ ಸಾಧನೆಯನ್ನು ಮೇಚ್ಚಿರುವ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸುವದರೊಂದಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಈ ಸಮಯದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಶೇಖರ ನಡುವಿನಮನಿ, ಕಾರ್ಯದರ್ಶಿ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ, ಶ್ರೀಮತಿ ಎಲ್.ಎಂ.ಬಿರಾದಾರ, ಶ್ರೀಮತಿ ಎನ್.ಎಸ್.ಗಡಗಿ, ಶಶಿಧರ ಬಿರಾದಾರ, ಮೊದಲಾದವರು ಇದ್ದರು.

ಪ್ರಾಥಮಿಕ ಹಂತದಿAದಲೂ ಬ್ರಿಲಿಯಂಟ್ ಶಾಲೆಯಲ್ಲಿ ನೀಡಿದ ಭೋದನಾ ಕೌಶಲ್ಯ ಮತ್ತು ಶಿಕ್ಷಕರ ಮಾಡಿದ ಉತ್ತಮ ಭೋದನೆ ಅದರ ಜೊತೆಗೆ ನನ್ನ ಓದಿಗೆ ಪ್ರತಿಹಂತದಲ್ಲಿ ಪ್ರೋತ್ಸಾಹಿಸುತ್ತಾ ಬಂದ ನನ್ನ ಪಾಲಕರ ಸಹಕಾರದಿಂದ ಈ ಸಾಧನೆಗೆ ಕಾರಣವಾಗಿದೆ. ಮತ್ತು ಈ ಬ್ರೀಲಿಯಂಟ್ ಶಿಕ್ಷಣ ಸಂಸ್ಥೆಯ ಋಣ ನಾನೇಂದೂ ಮರೆಯುವದಿಲ್ಲಾ.                                                                   ಸಿಂಚನಾ ಶಿವನಗೌಡ ಪಾಟೀಲ 

ಎಸ್.ಎಸ್.ಎಲ್.ಸಿ.ಟಾಪರ್

ಸಿಂಚನಾ ಪಾಟೀಲ ಸಾಧನೆಯ ಗುರಿಯೊಂದಿಗೆ ಬೆಳೆದು ಬಂದ ವಿದ್ಯಾರ್ಥಿಯಾಗಿದ್ದಾಳೆ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಗುರಿತಿಸಿಕೊಳ್ಳಬೇಕೆಂಬ ಬಯಕೆ ಅವಳದ್ದಾಗಿತ್ತು ಸದ್ಯ ಮರು ಮೌಲ್ಯಮಾಪನದಿಂದ ರಾಜ್ಯಕ್ಕೆ ೨ನೇ ರ‍್ಯಾಂಕ್ ಪಡೆದುಕೊಂಡು ಬ್ರಿಲಿಂಯಟ್ ಶಾಲೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾಳೆ, ಬಡ ಮತ್ತು ಪ್ರತಿಭಾವಂತ ಅಲ್ಲದೇ ನಿರ್ಗತಿಕಮಕ್ಕಳಿಗೂ ಕೂಡಾ ನಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಿ ಅವರಿಗೆ ಉನ್ನತ ದಾರಿ ತೋರಿಸುವಂತಹ ಕಾರ್ಯ ಮುಂದುವರೆದಿದೆ.                                                     ನಾನಾಗೌಡ ಪಾಟೀಲ

ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ

ಮಗಳು ಸಿಂಚನಾ ತಂದೆ ಆಸೆಯಂತೆ ಓದಿನಲ್ಲಿ ಮುಂದುವರೆದಿದ್ದಾಳೆ ಸದ್ಯ ಎಸ್.ಎಸ್.ಎಲ್.ಸಿ. ಪರಿಕ್ಷೆಯ ಮರು ಮೌಲ್ಯಮಾಪನದಲ್ಲಿ ೯ ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುವದರೊಂದಿಗೆ ರಾಜ್ಯಕ್ಕೆ ೨ನೇ ರ‍್ಯಾಂಕ್ ಪಡೆದುಕೊಂಡಿರುವದು ಸಂತಸ ತಂದಿದೆ ಉತ್ತಮ ಶಿಕ್ಷಣದೊಂದಿಗೆ ಮುನ್ನಡೆದಿರುವ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೇರಲಿ.
                                    ಶ್ರೀಮತಿ ವಿಜಯಲಕ್ಷಿö್ಮÃ ಪಾಟೀಲ
                                                       ಎಸ್‌ಎಸ್‌ಎಲ್‌ಸಿ ಟಾಪರ್ ಸಿಂಚನಾ ತಾಯಿ