ಕಮಲ್ ಚಿತ್ರ ಬಹಿಷ್ಕಾರ: ವಾಟಾಳ್ ಎಚ್ಚರಿಕೆ

ಬೆಂಗಳೂರು, ಮೇ.೨೮-ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಹುಭಾಷಾ ನಟ ಕಮಲ್ ಹಾಸನ್ ಅವರ ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.


ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ’ಕಮಲ್ ಹಾಸನ್ ಈ ಕೂಡಲೇ ಕ್ಷಮೆಯಾಚಿಸಬೇಕು, ಅವರ ಹೇಳಿಕೆ ಖಂಡನೀಯ ಎಂದರು.


ಅಲ್ಲದೆ, ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬರೀ ಕ್ಷಮಾಪಣೆ ಕೇಳಿದ್ರೆ ಸಾಲಲ್ಲ, ರಾಜ್ಯಕ್ಕೆ ಪ್ರವೇಶಿಸದಂತೆ ಬಹಿಷ್ಕಾರ ಹಾಕಬೇಕು. ಕರ್ನಾಟಕದಲ್ಲಿ ನಟ ’ಕಮಲ್ ಹಾಸನ್ ’ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.


ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದು ನಟ ಕಮಲ್ ಹಾಸನ್ ಹೊಸ ವಿವಾದ ಸೃಷ್ಟಿಸಿದ್ದು, ಜೂನ್ ೫ ರಂದು ರಿಲೀಸ್ ಆಗುತ್ತಿರುವ ತಮ್ಮ ಥಗ್ ಲೈಪ್ ಚಿತ್ರದ ಪ್ರಚಾರದ ವೇಳೆ ಈ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.