
ಮುನವಳ್ಳಿ,ಜ14: ಪಟ್ಟಣದ ಸೋಮಶೇಖರ ಮಠದಲ್ಲಿ ಲಿಂ. ಶ್ರೀ ಬಸವಲಿಂಗ ಶ್ರೀಗಳ 70 ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಜರುಗಿದ ಪ್ರೊ. ಎಸ್.ವಿ.ಚವಡಾಪೂರ ರಚಿಸಿದ ಷಟ್‍ಸ್ಥಲ ಚಕ್ರವರ್ತಿ ಚೆನ್ನಬಸವಣ್ಣಗ್ರಂಥ ಲೋಕಾರ್ಪಣೆ ಹಾಗೂ ಸಮಾರೋಪ ಸಮಾರಂಭ ಜರುಗಿತು.
ಮುರುಗೋಡದ ನೀಲಕಂಠ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಗ್ರಂಥಗಳನ್ನು ಓದುವುದರಿಂದ ಜ್ಞಾನ ವಿಕಾಸವಾಗುತ್ತದೆ, ಸಮಾಜದಲ್ಲಿ ಹಿರಿಯರ ಕುರಿತು ಗೌರವ ಬೆಳೆಯುತ್ತದೆ, ನಮ್ಮನ್ನು ನಾವು ಅರಿತುಕೊಳ್ಳಲು ಓದು ಸಹಕಾರಿಯಾಗುತ್ತದೆ. ಇಂದು ಓದುವ ಸಂಸ್ಕøತಿ ಕಡಿಮೆಯಾಗುತ್ತಿರುವುದು ಖೇದಕರ. ಷಟ್ ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರ ಕುರಿತು ಎಸ್.ವಿ. ಚವಡಾಪೂರ ಗುರುಗಳು ಅಧ್ಯಯನ ಕೈಕೊಂಡು ಸರಳ ಶೈಲಿಯಲ್ಲಿ ಗ್ರಂಥ ರಚಿಸಿದ್ದಾರೆ ಇದನ್ನು ಪ್ರತಿಯೊಬ್ಬರೂ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಎಂದರು.
ಮುರುಘೇಂದ್ರ ಶ್ರೀಗಳು ಮಾತನಾಡಿ ಲಿಂ. ಬಸವಲಿಂಗ ಶ್ರೀಗಳ ಸಮಾಜ ಸೇವೆಯೊಂದಿಗೆ ತಪೋ ಅನುಷ್ಠಾನ ಕೈಗೊಂಡಿದ್ದರು. ಅವರ ಜೀವನ ಸಂದೇಶ ಆದರ್ಶವಾಗಿತ್ತು ಎಲ್ಲರ ಸಹಕಾರದಿಂದ ಈ ಸಮಾರಂಭ ಯಶಸ್ವಿಗೊಂಡಿದೆ ಎಂದರು.
ಚೀಕಲಪರ್ವಿ ಸದಾಶಿವ ಶ್ರೀಗಳು ಮಾತನಾಡಿ ಮುಂಬರುವ ವರ್ಷ ಪುಣ್ಯಸ್ಮರಣೋತ್ಸವದಲ್ಲಿ ಶ್ರೀ ಮುರುಘೇಂದ್ರ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವ ಅಂಗವಾಗಿ ಬೆಳ್ಳಿಯ ತುಲಾಭಾರ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರ ಸಹಕಾರ ನೀಡಿ ಯಶಸ್ವಿಗೊಳಿಸೋಣ ಎಂದರು. ಎಸ್,ವಿ.ಚವಡಾಪೂರ ಶಿಕ್ಷಕರು ಮಾತನಾಡಿದರು.
ಕಮತಗಿಯ ಹುಚ್ಚೇಶ್ವರ ಶ್ರೀಗಳು, ಅಮೀನಗಡದ ಶಂಕರರಾಜೇಂದ್ರ ಶ್ರೀಗಳು, ಪ್ರಭು ತೋಂಟದಾರ್ಯ ಶ್ರೀಗಳು, ಕನಕಗಿರಿಯ ಚನ್ನಮಲ್ಲ ಶ್ರೀಗಳು, ಅರಳಿಕಟ್ಟಿಯ ಶಿವಮೂರ್ತಿ ಶ್ರೀಗಳು, ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಶ್ರೀಗಳು ಆಶಿರ್ವಚನ ನೀಡಿದರು.
ಪುರಸಭೆಯ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಜಗದೀಶ ಹಿರೇಮಠ, ವೈ.ಬಿ.ಕಡಕೋಳ, ಡಾ. ಮಹಾಂತೇಶ ರಾಮಣ್ಣವರ, ವಿಜಯಲಕ್ಷ್ಮೀ ಅಪ್ಜಲಪುರ, ನಿರ್ಮಲಾ ಗದ್ವಾಲ, ಸ್ಪಂದನಾ ಮಲ್ಲಿಕಾರ್ಜುನ ಕಮತಗಿ, ದೇವರಾಜ ಯರಕಿಹಾಳ, ಸುರೇಶಕುಮಾರ, ಮಂಜುನಾಥ ಭಂಡಾರಿ, ಗಂಗಾಧರ ಗೊರಾಬಾಳ, ಬಿ.ಬಿ.ಹೂಲಿಗೊಪ್ಪ ಇತರರು ಉಪಸ್ಥಿತರಿದ್ದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಿದರು.























