ಪುಸ್ತಕ ಸಂತೆಗೆ ಚಾಲನೆ: ಪುಸ್ತಕ ಅಭಿಮಾನ ಬೆಳೆಸಲು ಬರಗೂರು ಕರೆ

ಬೀದರ್:ಜ.25: ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಪುಸ್ತಕ ಸಂತೆಗೆ ಶನಿವಾರ ಚಾಲನೆ ನೀಡಲಾಯಿತು

ರಾಜ್ಯದ ವಿವಿಧ ಭಾಗದ ಸಾಹಿತಿಗಳು, ಪ್ರಕಾಶಕರು, ಓದುಗರು ಸಾಕ್ಷಿಯಾದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಿ, ರಾಜ್ಯದ ಗಡಿಭಾಗದಲ್ಲಿರುವ ಬೀದರ್ ಜಿಲ್ಲೆಯಲ್ಲಿ ಪುಸ್ತಕ ಸಂತೆ ಆಯೋಜಿಸಿರುವುದು ಶ್ಲಾಘನಾರ್ಹ ಕೆಲಸ.ಜನರಲ್ಲಿ ಪುಸ್ತಕ ಅಭಿರುಚಿ ಬೆಳೆಸಲು ಇದು ಸಹಕಾರಿಯಾಗಲಿದೆ. ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಗ್ರಂಥಾಲಯಕ್ಕೆ ಹಣ ಮೀಸಲಿಡಬೇಕು. ಪುಸ್ತಕ ಪ್ರಕಾಶಕರಿಗೆ ಪೂರಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಸಗಟು ಪುಸ್ತಕಗಳ ಖರೀದಿ ಮಾಡಿಲ್ಲ. ಗ್ರಂಥಾಲಯ ಇಲಾಖೆ ಕೂಡ ಪುಸ್ತಕ ಖರೀದಿಸಿಲ್ಲ. ಇದು ಕಾಲಕಾಲಕ್ಕೆ ನಡೆಯುತ್ತಿರಬೇಕು. ಬಜೆಟ್‍ನಲ್ಲಿಯೇ ಇದಕ್ಕೆ ವಿಶೇಷ ಅನುದಾನ ಇರಿಸಬೇಕು. 1965ರಲ್ಲಿ ಗ್ರಂಥಾಲಯ ಅಧಿನಿಯಮ ಜಾರಿಗೆ ಬಂದಿದೆ. ಆದರೆ, ಇದರಿಂದ ಏನು ಪ್ರಯೋಜನ. ರಾಜ್ಯದಲ್ಲಿ 6,804 ಗ್ರಂಥಾಲಯಗಳಿವೆ. ಆದರೆ, ಅವುಗಳಿಗೆ ಪುಸ್ತಕ ಪೂರೈಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಿಸಬೇಕಿದೆ ಎಂದು ಒತ್ತಿ ಹೇಳಿದರು.

ವೀರಲೋಕ ಬುಕ್ಸ್‍ನ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಪುಸ್ತಕ ಖರೀದಿಸಿ, ಓದುವ ಸಂಸ್ಕøತಿ ಬೆಳೆಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಗೆ ಮೊದಲ ಬಾರಿಗೆ ಪುಸ್ತಕ ಸಂತೆ ಆಯೋಜಿಸಲಾಗಿದೆ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ವೀರಲೋಕ ಬುಕ್ಸ್‍ನ ವೀರಕಪುತ್ರ ಶ್ರೀನಿವಾಸ, ಸಂತೆಯ ಆಯೋಜಕ ಗುರುನಾಥ ರಾಜಗೀರಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ನಟರಾದ ಸುಚೇಂದ್ರಪ್ರಸಾದ್, ಅಶ್ವತ್ಥ, ಬಾಬುರಾವ್ ಮಲ್ಕಾಪುರೆ ಪಾಲ್ಗೊಂಡಿದ್ದರು.

ನಾವು ಯಾವುದೇ ಕಾರ್ಯಕ್ರಮಗಳಿಗೆ ಹೋದರೆ ಅಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ನನಗೆ ಪುಸ್ತಕಗಳ ಮಹತ್ವ ತಿಳಿದ ನಂತರ ಇದನ್ನೇ ಮಾಡುತ್ತಿರುವೆ -ಈಶ್ವರ ಬಿ. ಖಂಡ್ರೆ, ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವಈ ರೀತಿಯ ಪುಸ್ತಕ ಸಂತೆಗಳ ಆಯೋಜನೆಗೆ ಸರ್ಕಾರದಿಂದ ಅಗತ್ಯ ಸಹಕಾರ, ನೆರವು ನೀಡಲಾಗುವುದು. ಜಿಲ್ಲೆಯ ಎಲ್ಲ ಶಾಲೆಗಳು, ಗ್ರಾಮ ಪಂಚಾಯಿತಿಗಳಲ್ಲಿ ಪುಸ್ತಕ ಖರೀದಿಸಲು ಅಧಿಕಾರಿಗಳಿಗೆ ಸೂಚಿಸುವೆ.

  • ಪ್ರೇಮ್, ನಟ