Home ಜಿಲ್ಲೆ ಅಧೀಕ ಮಾಸ ಭಕ್ತಿಯ ಸಾಧನೆಗೆ ಸಿಕ್ಕ ಬೊನಸ್ ಅವಧಿ ಇದ್ದಂತೆ : ಪಂ.ನರಸಿAಹಾಚಾರ

ಅಧೀಕ ಮಾಸ ಭಕ್ತಿಯ ಸಾಧನೆಗೆ ಸಿಕ್ಕ ಬೊನಸ್ ಅವಧಿ ಇದ್ದಂತೆ : ಪಂ.ನರಸಿAಹಾಚಾರ

ಯಾದಗಿರಿ : ಜೂ.೭:ಸಾಮಾನ್ಯ ದಿನಗಳಲ್ಲಿ ಮಾಡುವ ಪುಣ್ಯ ಕಾರ್ಯಗಳಿಂತ ಅಧೀಕ ಮಾಸದಲ್ಲಿ ಭಕ್ತಿಯಿಂದ ಮಾಡುವ ದೇವರ ಪೂಜಾ ಕಾರ್ಯಗಳಿಗೆ ಮತ್ತು ದಾನ ಧರ್ಮ ಕಾರ್ಯಕ್ಕೆ ಸಹಸ್ರಾರು ಪಟ್ಟು ಅಧಿಕ ಫಲ ದೊರೆಯುತ್ತದೆ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.
ಅವರು ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಒಂದು ವಾರಗಳ ಕಾಲ ಉತ್ತರಾದಿ ಮಠ ಹಾಗೂ ವಿಶ್ವಮಧ್ಯ ಮಹಾಪರಿಷತ್ ಯಾದಗಿರಿ ಘಟಕದ ವತಿಯಿಂದ ನಡೆಯುತ್ತಿರುವ ಅಧೀಕ ಮಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನಾತನ ಧರ್ಮದ ಪಂಚಾAಗ ವ್ಯವಸ್ಥೆಯಲ್ಲಿ ಪುರುಷೋತ್ತಮ ಮಾಸ ಅಥವಾ ಅಧೀಕ ಮಾಸವು ಅತ್ಯಂತ ವಿಶಿಷ್ಟ ಹಾಗೂ ಅದ್ಯಾತ್ಮೀಕವಾಗಿ ಮಹತ್ವಪೂರ್ಣವಾದ ಕಾಲಘಟ್ಟವಾಗಿದೆ.
ಸೌರಮಾನ ಹಾಗೂ ಚಾಂದ್ರಮಾನ ಎರಡನ್ನೂ ಸಮನ್ವಯಗೋಳಿಸುವ ಉದ್ದೇಶದಿಂದ ಈ ಮಾಸವು ಪ್ರತಿ ೩೨ ತಿಂಗಳಿಗೋಮ್ಮೆ ಅಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಪ್ರಯುಕ್ತ ಪ್ರಾಪಂಚಿಕ ಸುಖಗಳಿಗಿಂತ ಹೆಚ್ಚಾಗಿ ಆತ್ಮದ ಶುದ್ಧೀಕರಣಕ್ಕೆ ಈ ತಿಂಗಳು ಮೀಸಲಾಗಿದ್ದು, ಪ್ರತಿಯೊಬ್ಬರು ಹಾರಿ ಸ್ಮರಣೆ, ಗ್ರಂಥ ಪಠಣ, ಹಾಗೂ ಶ್ರೀಮದ್ ಭಾಗವತದ ಕಥೆಗಳನ್ನು ಕೇಳುವುದು ಅಥವಾ ಓದುವುದು ಮಾಡಿದಲ್ಲಿ ಜನ್ಮಾಂತರದ ಪಾಪಗಳು ಕಳೆದುಹೋಗುತ್ತದೆ ಜೊತೆಗೆ ದಾನ ಧರ್ಮ ಮಾಡುವುದರಿಂದ ಅ ದೇವರು ಸದಾ ನಮ್ಮನ್ನು ಸಂರಕ್ಷಣೆ ಮಾಡುತ್ತಾನೆ ಕಾರಣ ಈ ಪುಣ್ಯಕಾಲದ ಮಾಸದಲ್ಲಿ ದೇವರ ನಾಮಸ್ಮರಣೆ ಮಾಡಬೇಕು ಎಂದು ಆಶೀರ್ವಚನ ನೀಡಿದರು.
ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ರಾಘವೇಂದ್ರ ಜೋಶಿ ಅವರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಒಂದು ವಾರದಿಂದ ನಡೆದ ಕಾರ್ಯಕ್ರಮಗಳಲ್ಲಿ ಪ್ರತಿನೀತ್ಯ ವಿಪ್ರ ಸಮಾಜದ ಸದ್ಭಕ್ತರಿಂದ ಭಜನಾ ಕಾರ್ಯಕ್ರಮ,
ಮಹಿಳೆಯರು ಹಾಗೂ ಪುರುಷರಿಂದ ೩೩ ಬಾರಿ ಸ್ತೋತ್ರಗಳ ಪಾರಾಯಣ ಹಾಗೂ ಸೂಳಾದಿಗಳ ಪಾರಾಯಣ, ಮಹಿಳೆಯರು ಹಾಗೂ ಮಕ್ಕಳಿಂದ ಕೋಲಾಟ ನೃತ್ಯ, ದಿ.೪ ರಂದು ಪುರುಷ ಸದ್ಭಕ್ತರಿಂದ ಭಾಗವತ ಗ್ರಂಥಕ್ಕೆ ಪುಷ್ಪಾರ್ಚನೆ ಜರುಗಿತು.
ದಿ.೫ ರಂದು ಸಂಜೆ ೫ – ೩೦ ರಿಂದ ಮಹಿಳೆಯರಿಂದ ಶ್ರೀ ಲಕ್ಷ್ಮೀ ಶೋಭಾನ ಪಾರಾಯಣ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿಪ್ರ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾದರು