
ಬೇಕಾಗುವ ಸಾಮಗ್ರಿಗಳು
*ಬೋಟಿ – ೧/೨ ಕೆ.ಜಿ
*ಎಣ್ಣೆ ೨೦೦ ೨.
*ತುಪ್ಪ ೫೦ ೨.
*ಈರುಳ್ಳಿ ೨
*ಟೊಮೆಟೊ -೨
*ಪೆಪ್ಪರ್ ಪೌಡರ್ ೧ ಚಮಚ
*ಹಸಿಮೆಣಸಿನಕಾಯಿ ೬
*ಶುಂಠಿ ಬೆಳ್ಳುಳ್ಳಿ ಪೇಸ್ಟ್ ೨ ಚಮಚ
*ಲಿವರ್ ೧/೨ ಕೆ.ಜಿ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಅರಿಶಿಣ ಪುಡಿ ೧/೪ ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಗರಂ ಮಸಾಲ ೧/೫ ಚಮಚ
ಮಾಡುವ ವಿಧಾನ :
ಬೋಟಿ ಮೇಲೆ ಸುಣ್ಣವನ್ನು ಹಾಕಿ ಉಜ್ಜಿ ಶುದ್ಧಿಕರಿಸಿಕೊಂಡು ತುಂಡರಿಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪಪು ಮತ್ತು ಅರಿಶಿಣ ಹಾಕಿ ಬೇಯಿಸಿ ಅಗಲವಾದ ಬಾಯಿ ಇರುವ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಎಣ್ಣೆ ಹಾಗೂ ತುಪ್ಪವನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾದ ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ, ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ್ನು ಹಾಕಿ ಪ್ರೈ ಮಾಡಿ, ನಂತರ ಅರಿಶಿಣಪುಡಿ, ಗರಂ ಮಸಾಲ, ಪೆಪ್ಪರ್ ಪೌಡರ್ ಹಾಕಿ ಪ್ರೈ ಮಾಡಿ. ಈ ಎಲ್ಲಾ ಮಸಾಲೆಗಳು ಪ್ರೈ ಆದ ನಂತರ ಬೇಯಿಸಿದ ಬೋಟಿ ಮತ್ತು ಲೀವರ್‌ನ್ನು ಹಾಕಿ ಉಪ್ಪು ಸೇರಿಸಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ ನಿಮಿಷ ಬೇಯಿಸಿದರೆ ರುಚಿ ರುಚಿಯಾದ ಬೋಟಿ ಪ್ರೈ ಸವಿಯಲು ಸಿದ್ಧ.